ಈಚೆಗಷ್ಟೇ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್)ನಿಂದ 16,000 ಕೋಟಿ ರುಪಾಯಿಯ ಷೇರು ಮರುಖರೀದಿ ಆಫರ್ ಮುಕ್ತಾಯ ಆಯಿತು. ಈ ಅವಧಿಯಲ್ಲಿ ಟಾಟಾ ಸನ್ಸ್ ನಿಂದ 9,997 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಲಾಗಿದೆ. ನಿಯಂತ್ರಕರಲ್ಲಿ (ರೆಗ್ಯುಲೇಟರಿ) ಆಗಿರುವ ಫೈಲಿಂಗ್ ಪ್ರಕಾರ, ಟಾಟಾ ಸನ್ಸ್ ನಿಂದ 3.33 ಕೋಟಿಗೂ ಹೆಚ್ಚು ಷೇರುಗಳನ್ನು ಮಾರಲಾಗಿದೆ.
ಟಿಸಿಎಸ್ ಕಂಪೆನಿ ತಿಳಿಸಿರುವ ಪ್ರಕಾರ, 5.33 ಲಕ್ಷ ಷೇರುಗಳನ್ನು ತಲಾ 3000 ರುಪಾಯಿಯಂತೆ ಮರುಖರೀದಿ (ಬೈಬ್ಯಾಕ್) ಮಾಡಲಾಗಿದೆ. ಅದರಲ್ಲಿ ಟಾಟಾ ಸನ್ಸ್ ಗೆ ಸೇರಿದ 3,33,25,118 ಷೇರುಗಳನ್ನು ಸಹ ಸ್ವೀಕರಿಸಲಾಗಿದೆ. ಡಿಸೆಂಬರ್ 18, 2020ರಿಂದ ಜನವರಿ 1, 2021ರ ತನಕ ಈ ಆಫರ್ ಮುಕ್ತವಾಗಿತ್ತು. ಈ ಮರುಖರೀದಿಗಾಗಿ 16,000 ಕೋಟಿ ರುಪಾಯಿ ಬಳಸಲಾಗಿದೆ.
ಟಾಟಾ ಸನ್ಸ್ ನಿಂದ ಪ್ರಸ್ತಾವಕ್ಕೆ ಇಟ್ಟಿರುವ ಷೇರು ಮಾರಾಟದ ಮೌಲ್ಯ 9,997.5 ಕೋಟಿ ರುಪಾಯಿ. ಇತರ ಪ್ರಮುಖ ಷೇರುದಾರರೆಂದ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ ಐಸಿ) ಮತ್ತು ಆರ್ ಬಿಸಿ ಎಮರ್ಜಿಂಗ್ ಮಾರ್ಕೆಟ್ಸ್ ಈಕ್ವಿಟಿ ಫಂಡ್. ಇವೆರಡು ಸಹ ಕ್ರಮವಾಗಿ 16.60 ಲಕ್ಷ ಹಾಗೂ 7.69 ಲಕ್ಷ ಷೇರುಗಳ ಮಾರಾಟಕ್ಕೆ ಪ್ರಸ್ತಾವ ಇಟ್ಟಿದ್ದವು.

2020ರ ಸೆಪ್ಟೆಂಬರ್ ಅಂತ್ಯಕ್ಕೆ ಟಿಸಿಎಸ್ ಕಂಪೆನಿಯಲ್ಲಿ ರು. 58,500 ಕೋಟಿ ನಗದು ಮೀಸಲು ಇತ್ತು. 2019ರ ಅಕ್ಟೋಬರ್ ನಲ್ಲಿ 40 ರುಪಾಯಿ ವಿಶೇಷ ಡಿವಿಡೆಂಡ್ ಘೋಷಿಸಲಾಗಿತ್ತು.


Click it and Unblock the Notifications