ಭಾರತದ ಅತಿದೊಡ್ಡ ಆನ್‌ಲೈನ್ ದಿನಸಿ ಬಿಗ್‌ಬಾಸ್ಕೆಟ್ ಅನ್ನು ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ 1 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮೌಲ್ಯದ ಒಪ್ಪಂದದಲ್ಲಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಈ ಒಪ್ಪಂದವು ಭಾರತೀಯ ರೂಪಾಯಿಗಳಲ್ಲಿ 7,268 ಕೋಟಿ ರೂಪಾಯಿಗೂ ಅಧಿಕವಾಗಿದೆ.
ಟಾಟಾ ಸನ್ಸ್ ಡಿಜಿಟಲ್ ಸೇವೆಗಳ ಅಂಗಸಂಸ್ಥೆ ಟಾಟಾ ಡಿಜಿಟಲ್ ಲಿಮಿಟೆಡ್ ಸೂಪರ್ ಮಾರ್ಕೆಟ್ ಪ್ರೈ.ಲಿ.ನಲ್ಲಿ ಶೇಕಡಾ 64.3ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಸ್ತಾಪಿಸಿದೆ. ಈ ಡೀಲ್‌ನ ಮೊದಲ ಹಂತದಲ್ಲಿ ಬಿಗ್‌ಬಾಸ್ಕೆಟ್.ಕಾಮ್ ಮೂಲಕ ವಾಣಿಜ್ಯ ಘಟಕಗಳಿಗೆ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ನಂತರದಲ್ಲಿ ಎಸ್‌ಜಿಎಸ್ ಇನ್ನೋವೇಟಿವ್ ರಿಟೇಲ್ ಕಾನ್ಸೆಪ್ಟ್ಸ್ ಪ್ರೈ. ಲಿಮಿಟೆಡ್‌ನ ಸಂಪೂರ್ಣ ನಿಯಂತ್ರಣವನ್ನು ಪಡೆಯಬಹುದು.

ಎಸ್‌ಜಿಎಸ್ ಮತ್ತು ಇನ್ನೋವೇಟಿವ್ ರಿಟೇಲ್ ಬಿಗ್‌ಬಾಸ್ಕೆಟ್ ಆ್ಯಪ್ ಮೂಲಕ ಆಹಾರ, ದಿನಸಿ, ಗೃಹೋಪಯೋಗಿ ವಸ್ತುಗಳು, ವೈಯಕ್ತಿಕ ಮತ್ತು ಸೌಂದರ್ಯ ಆರೈಕೆ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ.
''ಶೇಕಡಾ 64.3ರಷ್ಟು ಪಾಲನ್ನು ಪಡೆಯಲು ಸುಮಾರು 1 ಬಿಲಿಯನ್ ಡಾಲರ್ ವೆಚ್ಚವಾಗಬಹುದು'' ಎಂದು ಒಪ್ಪಂದದ ಕುರಿತು ನೇರವಾಗಿ ತಿಳಿದಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
"ಟಾಟಾ ಸನ್ಸ್ ಒಂದು ವಾರದ ಹಿಂದೆ ಮಂಡಳಿ ಸಭೆ ನಡೆಸಿತು. ಈ ಒಪ್ಪಂದವನ್ನು ಮಂಡಳಿಯು ಅನುಮೋದಿಸಿದೆ, ಮತ್ತು ಸಿಸಿಐ ಅನುಮೋದನೆ ಕೋರಲಾಗಿದೆ " ಎಂದು ಹೆಸರು ಹೇಳಲಿಚ್ಚಿಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.


Click it and Unblock the Notifications