ಬೆಂಗಳೂರು, ಆಗಸ್ಟ್ 29: ವೃತ್ತಿಜೀವನದಲ್ಲಿ ಮಹಿಳೆಯರು ಅನೇಕ ಅಡೆ ತಡೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಗರ್ಭಧಾರಣೆ ಮತ್ತು ಮಾತೃತ್ವಕ್ಕೆ ವಿಚಾರದ ಕಾರಣಕ್ಕಾಗಿ ಉದ್ಯೋಗದ ಸ್ಥಳದಲ್ಲಿ ಪಕ್ಷಪಾತಗಳನ್ನು ಎದುರಿಸುತ್ತಾರೆ. ಹಲವು ಸಂದರ್ಭದಲ್ಲಿ ಕೆಲಸವನ್ನೇ ತ್ಯಜಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅನೇಕ ಅನುಭವಿ, ಪ್ರತಿಭಾವಂತ ಉದ್ಯೋಗಿಗಳನ್ನು ಸಂಸ್ಥೆಯೂ ಕಳೆದುಕೊಳ್ಳುತ್ತದೆ. ಇದೇ ಕಾರಣಗಳಿಗೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಒಂದು ಹೊಸ ಉಪಕ್ರಮವನ್ನು ಆರಂಭ ಮಾಡಿದೆ.
ಅನುಭವಿ ಮಹಿಳಾ ವೃತ್ತಿಪರರು ಬ್ರೇಕ್ ಪಡೆದ ನಂತರ ವೃತ್ತಿಜೀವನವನ್ನು ಭರವಸೆಯೊಂದಿಗೆ TCSನೊಂದಿಗೆ ಪುನರಾರಂಭ ಮಾಡಲು ಅತ್ಯುತ್ತಮ ಅವಕಾಶವಾಗಿದೆ. ಅರ್ಹ ಪ್ರತಿಭೆಗಳಿಗೆ ವೃತ್ತಿಪರ ದಾರಿಗಳು ಎಂದೂ ಮುಚ್ಚಬಾರದು. ಎಲ್ಲಾ ಉದ್ಯೋಗಿಗಳಿಗೆ ಆರೋಗ್ಯಕರ ಕೆಲಸದ ಅನುಭವ ದೊರೆಯಲು ದಾರಿ ಮಾಡಿಕೊಡುವುದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನ ಉದ್ದೇಶವಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS), ಭಾರತದ ಅತಿದೊಡ್ಡ IT ಸೇವೆಗಳ ಕಂಪನಿಗಳಲ್ಲಿ ಒಂದಾಗಿದ್ದು, "ನಿಮ್ಮ ಹೆಜ್ಜೆಯನ್ನು ಮುಂದಕ್ಕೆ ಇಡಬೇಕೆಂದು ನಾವು ಬಯಸುತ್ತೇವೆ. ನಿಮ್ಮೊಂದಿಗೆ ಉತ್ತಮ ಭವಿಷ್ಯದ ಹಾದಿಯಲ್ಲಿ ನಾವು ಮುನ್ನಡೆಯುತ್ತೇವೆ" ಎಂದು ತಮ್ಮ " TCSನೊಂದಿಗೆ ಪುನರಾರಂಭ" ಉಪಕ್ರಮದ ಬಗ್ಗೆ ತಿಳಿಸಿದೆ.

TCS ನಿಂದ Rebegin ಪ್ರೋಗ್ರಾಂ ಎಂದರೇನು?
Rebegin ಎಂಬುದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನ ಯೋಜನೆ, ಪ್ರತಿಭಾವಂತ ಮಹಿಳಾ ವೃತ್ತಿಪರರಿಗೆ ತಮ್ಮ ವೃತ್ತಿಜೀವನಕ್ಕೆ ಅರ್ಹವಾದ ಜಂಪ್‌ಸ್ಟಾರ್ಟ್ ಹಾಗೂ ತಮ್ಮಲ್ಲಿರುವ ನೈಜ ಸಾಮರ್ಥ್ಯ ತೋರಲು ತಮ್ಮ ಪ್ರಯಾಣವನ್ನು ಮರುಪ್ರಾರಂಭಿಸಲು ಅವಕಾಶವನ್ನು ಒದಗಿಸುತ್ತದೆ.ಪ್ರಸ್ತುತ, ಯೋಜನೆ ಭಾರತದಾದ್ಯಂತದ ಮಹಿಳಾ ವೃತ್ತಿಪರರಿಗೆ ಮುಕ್ತವಾಗಿದ್ದು ಅವರು ಕುಟುಂಬ/ಆರೋಗ್ಯ/ಶಿಕ್ಷಣ/ವೈಯಕ್ತಿಕ ಕಾರಣಗಳಿಂದ ಬ್ರೇಕ್ ತೆಗೆದುಕೊಂಡ ನಂತರ ತಮ್ಮ ವೃತ್ತಿಜೀವನವನ್ನು ಮತ್ತೆ ರಿ ಸ್ಟಾರ್ಟ್ ಮಾಡುವ ಅವಕಾಶ ಇದಾಗಿದೆ.
ಕೌಟುಂಬಿಕ ಮತ್ತು ಇತರ ವೈಯಕ್ತಿಕ ಕಾರಣದಿಂದ ದೀರ್ಘ ವಿರಾಮಗಳನ್ನು ತೆಗೆದುಕೊಂಡಿರುವ ಕನಿಷ್ಠ ಎರಡು ವರ್ಷಗಳ ಸಂಬಂಧಿತ ಅನುಭವ ಹೊಂದಿರುವ ಮಹಿಳಾ ಅಭ್ಯರ್ಥಿಗಳನ್ನು ಈ ಉಪಕ್ರಮದ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇಂತಹ ಉದ್ದೇಶವು ಮಹಿಳಾ ವೃತ್ತಿಪರರಿಗೆ ಮತ್ತೆ ತಮ್ಮ ವೃತ್ತಿರಂಗಕ್ಕೆ ಮರಳಲು ಮತ್ತು TCS ನೊಂದಿಗೆ ತಮ್ಮ ವೃತ್ತಿಜೀವನವನ್ನು ಪುನರಾರಂಭಿಸಲು ಅವಕಾಶವನ್ನು ಒದಗಿಸುವುದು.
ಪ್ರಸ್ತುತ, ಈ ಯೋಜನೆ TCS ನಲ್ಲಿ ಕೆಲಸ ಮಾಡಿದ ಭಾರತದ ಉದ್ಯೋಗಗಳಿಗೆ ಮಾತ್ರ ಅನ್ವಯಿಸುತ್ತದೆ . ಜೊತೆಗೆ ಯಾರು ಮತ್ತೆ ತಮ್ಮ ಕೆಲಸವನ್ನು ರಿಸ್ಟಾರ್ಟ್ ಮಾಡಲು ಬಯಸುತ್ತಾರೋ ಅವರು 2 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು. ಆಸಕ್ತರು ವಿಭಿನ್ನ ವೃತ್ತಿ ವಿರಾಮಗಳನ್ನು ಹೊಂದಿದ್ದರೂ ಅರ್ಜಿ ಸಲ್ಲಿಸುವಾಗ ವೃತ್ತಿ ವಿರಾಮಗಳ ಅವಧಿ ಮತ್ತು ಕಾರಣಗಳನ್ನು ಉಲ್ಲೇಖಿಸುವುದು ಕಡ್ಡಾಯವಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
TCS ನೇಮಕಕ್ಕಿರುವ ಅವಕಾಶಗಳನ್ನು ತನ್ನ ಜಾಬ್ಸ್ ಪೋರ್ಟಲ್‌ನಲ್ಲಿ ಉಲ್ಲೇಖಿಸಲಾಗುತ್ತದೆ. ಅಭ್ಯರ್ಥಿಗಳು TCS ಕೆರಿಯರ್ಸ್ ಪೋರ್ಟಲ್ ಅನ್ನು ಪರಿಶೀಲಿಸಬಹುದು. ಅಲ್ಲಿ ಉಲ್ಲೇಖಿಸಿರುವ ಉದ್ಯೋಗ ಪೋಸ್ಟಿಂಗ್‌ಗಳ ಅನುಗುಣವಾಗಿ ಅರ್ಜಿ ಸಲ್ಲಿಸಬಹುದು. ಪ್ರತಿ ಜಾಬ್ಸ್ ಪೋಸ್ಟ್‌ನಲ್ಲಿ ಉದ್ಯೋಗ ವಿವರಣೆ ಮತ್ತು ಅಗತ್ಯವಿರುವ ಕೌಶಲ್ಯಗಳನ್ನು ನಮೂದಿಸಲಾಗಿರುತ್ತದೆ. ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಲು " "Apply" " ಅನ್ನು ಕ್ಲಿಕ್ ಮಾಡಬಹುದು (ಇದು ಅಭ್ಯರ್ಥಿಯನ್ನು TCS iBegin ಪೋರ್ಟಲ್‌ಗೆ ಕರೆದೊಯ್ಯುತ್ತದೆ)
ಇದಲ್ಲದೇ ಅವರು ಅರ್ಜಿ ಸಲ್ಲಿಸಲು ವಿಷಯ ಸಾಲಿನಲ್ಲಿ Rebegin ಜೊತೆಗೆ [email protected] ಗೆ ಇಮೇಲ್ ಕಳುಹಿಸಬಹುದು . ಲಿಂಕ್ಡ್‌ಇನ್‌ನಂತಹ ಸಾಮಾಜಿಕ ಮಾಧ್ಯಮ ಚಾನಲ್‌ಗಳಲ್ಲಿನ ಪೋಸ್ಟ್‌ಗಳು ಸಂಬಂಧಿತ ಜಾಬ್ ಐಡಿಗಳನ್ನು ಹೊಂದಿರುತ್ತದೆ, ಅಭ್ಯರ್ಥಿಗಳು ಅವುಗಳ ಮೂಲಕವೂ ಅಪ್ಲೈ ಮಾಡಬಹುದು


Click it and Unblock the Notifications