ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಲಿಮಿಟೆಡ್ ಮಾರುಕಟ್ಟೆ ಬಂಡವಾಳ ಮೌಲ್ಯವು ಸೋಮವಾರ (ಡಿಸೆಂಬರ್ 28, 2020) 11 ಲಕ್ಷ ಕೋಟಿ ರುಪಾಯಿ ದಾಟಿತು. ರಿಲಯನ್ಸ್ ಇಂಡಸ್ಟ್ರೀಸ್ ನಂತರ ಈ ಮೈಲುಗಲ್ಲು ಮುಟ್ಟಿದ ಭಾರತದ ಎರಡನೇ ಕಂಪೆನಿ ಟಿಸಿಎಸ್. ಇಂದು ಬಿಎಸ್ ಇಯಲ್ಲಿ ಟಿಸಿಎಸ್ ಷೇರು ವಾರ್ಷಿಕ ಗರಿಷ್ಠ ಮಟ್ಟವಾದ 2949.90 ರುಪಾಯಿ ಮುಟ್ಟಿ, ದಿನದ ಕೊನೆಗೆ 2928.25 ರುಪಾಯಿಗೆ ವ್ಯವಹಾರ ಕೊನೆಗೊಳಿಸಿತು.
ಈ ವರ್ಷದಲ್ಲಿ ಇಲ್ಲಿಯ ತನಕ ಟಿಸಿಸಿ ಷೇರಿನ ಬೆಲೆಯಲ್ಲಿ 36% ಏರಿಕೆ ಕಂಡಿದೆ. ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಭಾರತದ ಅತ್ಯಂತ ಮೌಲ್ಯಯುತ ಕಂಪೆನಿ ಎನಿಸಿಕೊಂಡಿದ್ದು, ಬಂಡವಾಳ ಮೌಲ್ಯವು 12.75 ಲಕ್ಷ ಕೋಟಿ ರುಪಾಯಿ ಇದೆ.
ಟಿಸಿಎಸ್ ಅನ್ನು 47 ಬ್ರೋಕರೇಜ್ ಗಳು ಗಮನಿಸುತ್ತಿದ್ದು, 26ರಿಂದ ಖರೀದಿಗೆ ಶಿಫಾರಸು ಮಾಡಲಾಗಿದ್ದು, 14ರಿಂದ ಮಾರಾಟಕ್ಕೆ ಹಾಗೂ 7ರಿಂದ ಹೋಲ್ಡ್ ರೇಟಿಂಗ್ ನೀಡಲಾಗಿದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ. ಜನವರಿ 8ನೇ ತಾರೀಕು ಟಿಸಿಎಸ್ ನಿಂದ ಗಳಿಕೆ ಘೋಷಣೆ ಮಾಡಲಾಗುತ್ತದೆ.

ಟಿಸಿಎಸ್ ಷೇರಿನ ಬೆಲೆ ಈಚೆಗೆ ಭಾರೀ ಮಟ್ಟದಲ್ಲಿ ಏರಿಕೆ ಆಗಿದೆ. ಅಂದ ಹಾಗೆ ಐಟಿ ಕಂಪೆನಿಗಳ ಷೇರುಗಳ ಬೆಲೆಯಲ್ಲೇ ಭಾರೀ ಹೆಚ್ಚಳ ಆಗಿದೆ. ಅದು ಕೂಡ ಇನ್ಫೋಸಿಸ್ ಮತ್ತು ವಿಪ್ರೋದಿಂದ ಲಕ್ಷಾಂತರ ಡಾಲರ್ ವ್ಯವಹಾರ ಪಡೆದ ಮೇಲೆ ಈ ಬೆಳವಣಿಗೆ ಆಗಿದೆ.
ಕಳೆದ ತಿಂಗಳು ಟಿಸಿಎಸ್ ಷೇರುದಾರರು 53.33 ಮಿಲಿಯನ್ ನಷ್ಟು ಷೇರುಗಳನ್ನು ತಲಾ 3000 ರುಪಾಯಿಯಂತೆ 16,000 ಕೋಟಿ ರುಪಾಯಿ ದಾಟದಂತೆ ಮರುಖರೀದಿ ಮಾಡಲು ಒಪ್ಪಿಗೆ ಸೂಚಿಸಿದ್ದರು. ಡಿಸೆಂಬರ್ 18ರಿಂದ ಬೈಬ್ಯಾಕ್ ಆರಂಭವಾಗಿದ್ದು, ಜನವರಿ 1ನೇ ತಾರೀಕಿಗೆ ಕೊನೆ ಆಗಲಿದೆ.


Click it and Unblock the Notifications