51,000 ಕೋಟಿ ರು. ನಗದು ಇರುವ ಟಿಸಿಎಸ್ ನಿಂದ ಅ. 7ಕ್ಕೆ ಬೈಬ್ಯಾಕ್ ಚಿಂತನೆ

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಈಕ್ವಿಟಿ ಷೇರಿನ ಬೈಬ್ಯಾಕ್ ಬಗ್ಗೆ ಅಕ್ಟೋಬರ್ 7, 2020ರಂದು ನಡೆಯುವ ಕಂಪೆನಿಯ ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರು ಗಣನೆಗೆ ತೆಗೆದುಕೊಳ್ಳಲಿದ್ದಾರೆ ಎಂದು ಭಾನುವಾರ ರಾತ್ರಿ ಟಿಸಿಎಸ್ ಫೈಲಿಂಗ್ ನಲ್ಲಿ ತಿಳಿಸಲಾಗಿದೆ. ಇನ್ನು EPIC ಸಿಸ್ಟಮ್ ವಿಚಾರದಲ್ಲಿ ಕಾನೂನು ವ್ಯಾಜ್ಯ ಇತ್ಯರ್ಥದ ಭಾಗವಾಗಿ 1218 ಕೋಟಿ ರುಪಾಯಿ ಮೀಸಲಿಡಲಿದ್ದು, ಅದನ್ನು ಘೋಷಣೆ ಮಾಡಲಿದೆ.

ಟಿಸಿಎಸ್ ಹಾಕಿಕೊಂಡಿದ್ದ ಅರ್ಜಿಯ ಅನ್ವಯ ಅಮೆರಿಕದ ಶಿಕಾಗೋದಲ್ಲಿನ ಕೋರ್ಟ್ ಆಗಸ್ಟ್ 20ನೇ ತಾರೀಕು ತೀರ್ಪು ನೀಡಿದ್ದ ಪ್ರಕಾರ, EPIC ಸಿಸ್ಟಮ್ ಗೆ ಕಟ್ಟಿಕೊಡಬೇಕಾದ ನಷ್ಟ ಪರಿಹಾರದ ಮೊತ್ತವನ್ನು ಇಳಿಕೆ ಮಾಡಲಾಗಿತ್ತು. ಅದಕ್ಕಾಗಿ ಈಗ ಫಲಿತಾಂಶ ಘೋಷಣೆ ಸಂದರ್ಭದಲ್ಲಿ ಈ ಮೊತ್ತವನ್ನು ಮೀಸಲಿಡಲಾಗಿದೆ.

ಕಂಪೆನಿಯಲ್ಲಿ 51,000 ಕೋಟಿ ರುಪಾಯಿಯ ನಗದು ಮೊತ್ತ ಇದೆ. ಇದರಲ್ಲಿ ಪ್ರವರ್ತಕರ ಪಾಲು ಹೆಚ್ಚಿನ ಪ್ರಮಾಣದಲ್ಲಿದೆ. ಒಂದು ವೇಳೆ ಅವರು ಇದರಲ್ಲಿ ಪಾಲ್ಗೊಂಡರೆ ಬೈ ಬ್ಯಾಕ್ ಆಫರ್ ಅಷ್ಟೇನೂ ಆಕರ್ಷಕವಾಗಿ ಇರುವುದಿಲ್ಲ. ಕಳೆದ ಗುರುವಾರದಂದು ಟಿಸಿಎಸ್ ಕಂಪೆನಿ ಷೇರು 1.25% ಏರಿಕೆ ಕಂಡು, ಪ್ರತಿ ಷೇರಿಗೆ 2522.75 ರುಪಾಯಿಗೆ ದಿನಾಂತ್ಯದ ವಹಿವಾಟು ಮುಗಿಸಿತ್ತು.

51,000 ಕೋಟಿ ರು. ನಗದು ಇರುವ TCSನಿಂದ ಅ. 7ಕ್ಕೆ ಬೈಬ್ಯಾಕ್ ಚಿಂತನೆ

ತಜ್ಞರು ಅಭಿಪ್ರಾಯ ಪಡುವಂತೆ, ದೀಪಾವಳಿ ಅಥವಾ ಅದಕ್ಕೂ ಮುಂಚೆ ಟಿಸಿಎಸ್ ಷೇರು 2750 ರುಪಾಯಿಯನ್ನು ತಲುಪಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+