ಬೆಂಗಳೂರಿನಲ್ಲಿ ಇಂದು (ಏಪ್ರಿಲ್ 27)ರಂದು ಬೆಳಗ್ಗೆ 05:00 ಗಂಟೆಯಿಂದ 10 ಗಂಟೆಯವರೆಗೆ ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಥಾನ್ (tcs marathon) ಆಯೋಜಿಸಲಾಗಿದೆ.ಆದರಿಂದ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆಗೆ ನಿರ್ಬಂಧವನ್ನು ಮಾಡಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಹೌದು, ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಥಾನ್‌ನಲ್ಲಿ ಸುಮಾರು 30,000 ಭಾಗವಹಿಸುವ ನಿರೀಕ್ಷೆಇದೆ. ಈಕಾರ್ಯಕ್ರಮಕ್ಕೆ ಯಾವುದೇ ಅಡೆತಡೆಗಳು ಆಗಬಾರದು ಎಂದು ಸಂಚಾರ ಪೊಲೀಸರು ಬೆಳಿಗ್ಗೆ 5 ರಿಂದ 10 ರವರೆಗೆ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ (traffic advisory) ವ್ಯವಸ್ಥೆಯನ್ನು ಮಾಡಲಾಗಿದೆ.ಪರ್ಯಾಯ ಮಾರ್ಗಗಳನ್ನು ನೀಡಿದ್ದಾರೆ.

ವಾಹನ ನಿಲುಗಡೆ ನಿರ್ಬಂಧಿತ ಸ್ಥಳಗಳು
ವಾರ್ ಮೆಮೋರಿಯಲ್ ಜಂಕ್ಷನ್, ಅಣ್ಣಸ್ವಾಮಿ ಮುದಲಿಯಾರ್ ರಸ್ತೆ, ಸೇಂಟ್ ಜಾನ್ಸ್ ಚರ್ಚ್ ರಸ್ತೆ, ಅಸ್ಸಾಯ ರಸ್ತೆ, ವೀಲರ್ ರಸ್ತೆ, ಅಜಂತಾ ರಸ್ತೆ, ಕಾಮರಾಜ್ ರಸ್ತೆ, ಕಸ್ತೂರ್ಬಾ ರಸ್ತೆ (ಹಡ್ರನ್ ವೃತ್ತದಿಂದ ಕ್ರೀನ್ಸ್ ವೃತ್ತದವರೆಗೆ), ಎಂಜಿ ರಸ್ತೆ (ಕ್ರೀನ್ಸ್ ವೃತ್ತದಿಂದ ವೆಬ್ ಜಂಕ್ಷನ್ ವರೆಗೆ ಎರಡೂ ಬದಿಗಳಲ್ಲಿ), ಡಿಕನ್ಸನ್ ರಸ್ತೆ (ವೆಬ್ ಜಂಕ್ಷನ್ ನಿಂದ ಹಲಸೂರು ರಸ್ತೆವರೆಗೆ), ಕಬ್ಬನ್ ರಸ್ತೆ (ಮಣಿಪಾಲ್ ಸೆಂಟರ್ ನಿಂದ ಸಿಟಿಒ ವೃತ್ತದವರೆಗೆ), ಸೆಂಟ್ರಲ್ ಸ್ಟ್ರೀಟ್, ಕ್ಲೀನ್ಸ್ ರಸ್ತೆ (ಬಾಳೇಕುಂದ್ರಿ ವೃತ್ತದಿಂದ ಸ್ವೀನ್ಸ್ ವೃತ್ತದವರೆಗೆ), ರಾಜಭವನ ರಸ್ತೆ (ಸಿಟಿಒ ವೃತ್ತದಿಂದ ರಾಜಭವನ ಜಂಕ್ಷನ್ ವರೆಗೆ), ಇನ್ನೆಂಟ್ರಿ ರಸ್ತೆ (ರಾಜಭವನ ವೃತ್ತದಿಂದ ಟ್ರಾಫಿಕ್ ಹೆಾರ್ಟಸ್್ರ ಜಂಕ್ಷನ್ ವರೆಗೆ), ಅಂಬೇಡ್ಕರ್ ವೀಧಿ (ಕೆಆರ್ ವೃತ್ತದಿಂದ ಬಾಳೇಕುಂದ್ರಿ ವೃತ್ತದವರೆಗೆ), ಕಬ್ಬನ್ ಪಾರ್ಕ್ ಒಳಗೆ ಮತ್ತು ಸುತ್ತಮುತ್ತಲಿನ ರಸ್ತೆಗಳು, ವೈದೇಹಿ ಆಸ್ಪತ್ರೆ ರಸ್ತೆ ಮತ್ತು ಆರ್ಆಎ್ರಂಆರ್ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧ ಮಾಡಲಾಗಿದೆ.
ಭಾಸ್ಕರನ್ ರಸ್ತೆ - ಕಾಮಧೇನು ಜಂಕ್ಷನ್ - ಗುರುದ್ವಾರ ಜಂಕ್ಷನ್- ಕೆನ್ಸಿಂಗ್ಟನ್ ಜಂಕ್ಷನ್ - ಹಲಸೂರು ರಸ್ತೆ ಮತ್ತು ಡಿಕೆನ್ಸನ್ ರಸ್ತೆಯಿಂದ ಬೇಗಂ ಮಹಲ್ ಜಂಕ್ಷನ್, ಗಂಗಾಧರ ಚೆಟ್ಟಿ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಕ್ವಿನ್ಸ್ ವೃತ್ತದವರೆಗಿನ ಎಲ್ಲಾ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗುವುದು.
ಪರ್ಯಾಯ ಮಾರ್ಗಗಳು ಯಾವುವು..?
ಮೈಸೂರು ರಸ್ತೆಯಿಂದ ಎಂಜಿ ರಸ್ತೆ ಅಥವಾ ಹಳೆ ಮದ್ರಾಸ್ ರಸ್ತೆ ಕಡೆಗೆ ನಗರ ಹೋಗುವ ಭಾರೀ ಸರಕು ವಾಹನಗಳು ಹಡ್ಗನ್ ವೃತ್ತದಲ್ಲಿ ಬಲ ತಿರುವು ಪಡೆದು ದೇವಾಂಗ ರಸ್ತೆ, ದೇವಾಂಗ ಜಂಕ್ಷನ್, ಮಿಷನ್ ರಸ್ತೆ, ರಿಚ್ಯಂಡ್ ಪ್ರೈಓವರ್, ರೆಸಿಡೆನ್ಸಿ ರಸ್ತೆ, ಒಪೇರಾ ಜಂಕ್ಷನ್, ಮೇಯೊ ಹಾಲ್, ಕಮಿಷರಿಯಟ್ ರಸ್ತೆ, ಗರುಡ ಮಾಲ್ ಮತ್ತು ಹೊಸ್ಮತ್ ಆಸ್ಪತ್ರೆ ಮೂಲಕ ಹೋಗಬೇಕಾಗುತ್ತದೆ.
ಬಳ್ಳಾರಿ ರಸ್ತೆ ಮತ್ತು ಮಹಿ ರಸ್ತೆಯಿಂದ ನಗರ ಪ್ರವೇಶಿಸುವ ವಾಹನಗಳು ಹಳೆ ಉದಯ ಟಿವಿ ಆಫೀಸ್ ಜಂಕ್ಷನ್ ಮೂಲಕ ನೃಪತುಂಗ ರಸ್ತೆ - ಹಡೋನ್ ರಸ್ತೆಗೆ. ಹಳೆ ಮದ್ರಾಸ್ ರಸ್ತೆ ಮತ್ತು ವರ್ತೂರು ರಸ್ತೆಯಿಂದ ನಗರ ಪ್ರವೇಶಿಸುವ ವಾಹನಗಳು ಸುರಂಜನ್ ದಾಸ್ ರಸ್ತೆ ಮೂಲಕ ಹಳೆ ವಿಮಾನ ನಿಲ್ದಾಣ ರಸ್ತೆಗೆ. ಅದೇ ರೀತಿ, ಹಲಸೂರು ಕೆರೆಯಿಂದ ಪ್ರವೇಶಿಸುವ ವಾಹನಗಳು ಸೇಂಟ್ ಜಾನ್ಸ್ ರಸ್ತೆ ಮೂಲಕ ಕಂಟೋನ್ಮಂಟ್ ರೈಲ್ವೆ ನಿಲ್ದಾಣ ಮತ್ತು ಜಯಮಹಲ್ ರಸ್ತೆ ಮೂಲಕ ಮಹಿ, ವೃತ್ತಕ್ಕೆ ಮೂಲಕ ಹಾದುಹೋಗಬೇಕಾಗುತ್ತದೆ.
ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಥಾನ್ ಭಾಗವಹಿಸುವವರು ತಮ್ಮ ವಾಹನಗಳನ್ನು ಯುಬಿ ಸಿಟಿ, ಫ್ರೀಡಂ ಪಾರ್ಕ್ ಬಹು ಹಂತದ ಕಾರು ಪಾರ್ಕಿಂಗ್, ಗರುಡ ಮಾಲ್, 1 ಎಂಜಿ-ಲಿಡೋ ಮಾಲ್, ಎಜಿಎಸ್ ಜಂಕ್ಷನ್ ಮತ್ತು ಎಂಎಸ್ ಕಟ್ಟಡದಲ್ಲಿ ನಿಲ್ಲಿಸಬಹುದು.ಮಾಧ್ಯಮದವರು ಮಣಿಪಾಲ್ ಸೆಂಟರ್‌ನಲ್ಲಿ, ಆಹ್ವಾನಿತರು ಸ್ವಾಗತ ಚಿತ್ರಮಂದಿರದಲ್ಲಿ ಮತ್ತು ಹಿರಿಯ ನಾಗರಿಕರು ಮತ್ತು ಬಸ್‌ಗಳು ಕಾಮರಾಜ್ ರಸ್ತೆಯ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ನಿಲಿಗಡೆ ಮಾಡಲು ಅವಕಾಶವನ್ನು ಮಾಡಿಕೊಂಡಲಾಗಿದೆ.


Click it and Unblock the Notifications