For Quick Alerts
ALLOW NOTIFICATIONS  
For Daily Alerts

Q2:ನಿರೀಕ್ಷೆಗೆ ಮೀರಿದ ಲಾಭ ಗಳಿಸಿದ ಟೆಕ್ ಮಹೀಂದ್ರಾ

|

ಭಾರತದ ಪ್ರಮುಖ ಟೆಕ್ ಮಹೀಂದ್ರಾ 2020-21ರ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿದ ಲಾಭ ಗಳಿಸಿದೆ. ಎರಡನೇ ತ್ರೈಮಾಸಿಕದಲ್ಲಿ ಲಾಭ 1,064.6 ಕೋಟಿ ರೂ ಲಾಭ ಗಳಿಸಿದ್ದು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 9.5ರಷ್ಟು ಅಧಿಕ ಲಾಭ ಗಳಿಸಿದೆ.

ಇದೇ ಸಂದರ್ಭದಲ್ಲಿ ಪ್ರತಿ ಷೇರಿಗೆ ರೂ .15 ರ ವಿಶೇಷ ಲಾಭಾಂಶವನ್ನು ಷೇರುದಾರರಿಗೆ ಘೋಷಿಸಿದೆ. ಇದು ಕ್ರಮೇಣ ಮುಂಬರುವ ವರ್ಷದಲ್ಲಿ ನೌಕರರ ವೇತನವನ್ನು ಹೆಚ್ಚಿಸುತ್ತದೆ.

ಕಾರ್ಯಾಚರಣೆಯ ಆದಾಯವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 2.9 ರಷ್ಟು ಜಿಗಿದು 9,371.8 ಕೋಟಿ ರೂ. ಬಂದಿದೆ. ಹಿಂದಿನ ತ್ರೈಮಾಸಿಕದಲ್ಲಿ ಇದು 9,106.3 ಕೋಟಿ ರೂ. ತ್ರೈಮಾಸಿಕ ಆಧಾರದ ಮೇಲೆ ಡಾಲರ್ ಆದಾಯವು 4.8 ಶೇಕಡಾ ಏರಿಕೆಯಾಗಿ 1,265. 4 ಮಿಲಿಯನ್ ಡಾಲರ್ ತಲುಪಿದೆ. ತ್ರೈಮಾಸಿಕದಿಂದ ತ್ರೈಮಾಸಿಕದ ಆಧಾರದ ಮೇಲೆ ಆದಾಯದ ಬೆಳವಣಿಗೆ ಶೇಕಡಾ 2.9 ರಷ್ಟು ಏರಿಕೆಯಾಗಿದೆ.

Q2:ನಿರೀಕ್ಷೆಗೆ ಮೀರಿದ ಲಾಭ ಗಳಿಸಿದ ಟೆಕ್ ಮಹೀಂದ್ರಾ

 

ಟೆಕ್ ಮಹೀಂದ್ರಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಪಿ.ಗುರ್ನಾನಿ ಮಾತನಾಡಿ, ಕಂಪನಿಯು 5 ಜಿ, ಕ್ಲೌಡ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಯತ್ತ ಗಮನ ಹರಿಸಿದ್ದು, ಇದು ಶೇಕಡಾ 4.8 ರಷ್ಟು ಏರಿಕೆಯಾಗಿದೆ ಎಂದಿದ್ದಾರೆ.

ಈ ತ್ರೈಮಾಸಿಕದಲ್ಲಿ ಏಳು ಹೊಸ ಗ್ರಾಹಕರನ್ನು ಸೇರಿದ್ದು ಒಟ್ಟು ಕ್ಲೈಂಟ್ ಸಂಖ್ಯೆ 988ಕ್ಕೇರಿದೆ.ಒಟ್ಟಾರೆ, 421 ಮಿಲಿಯನ್ ಡಾಲರ್ ಮೌಲ್ಯದ ಹೊಸ ಒಪ್ಪಂದಗಳನ್ನು ಸ್ವೀಕರಿಸಿದೆ ಎಂದು ಎಂದು ಟೆಕ್ ಮಹೀಂದ್ರಾ ತಿಳಿಸಿದೆ. ಕಂಪನಿಯು ಪ್ರಸ್ತುತ 1,24,258 ಉದ್ಯೋಗಿಗಳನ್ನು ಹೊಂದಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಕಿರಿಯ ಮಟ್ಟದ ಸಿಬ್ಬಂದಿ ವರ್ಗದ ವೇತನವನ್ನು ಹೆಚ್ಚಿಸಲಾಗುವುದು. ಮುಂದಿನ ವರ್ಷ ಹಿರಿಯ ಮಟ್ಟದ ಉದ್ಯೋಗಿಗಳನ್ನು ಹೆಚ್ಚಿಸುವುದಾಗಿ ಅದು ಹೇಳಿದೆ.

English summary

Tech Mahindra Q2 report: registers profit at Rs 1,065 crore

Tech Mahindra on October 23 reported a profit of Rs 1,064.6 crore in the quarter-ended September 2020, registering a 9.5 percent growth compared to June quarter.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X