ಐಟಿ ಪ್ರಮುಖ ಸಂಸ್ಥೆಯಾದ ಟೆಕ್ ಮಹೀಂದ್ರಾ ನಾಲ್ಕನೇ ತ್ರೈಮಾಸಿಕದ ವರದಿಯನ್ನು ಬಿಡುಗಡೆ ಮಾಡಿದೆ. ಟೆಕ್ ಮಹೀಂದ್ರಾ ನಿವ್ವಳ ಲಾಭವು ಮಾರ್ಚ್‌ನಲ್ಲಿ ಅಂತ್ಯವಾದ ತ್ರೈಮಾಸಿಕದಲ್ಲಿ ಶೇಕಡ 25.8ರಷ್ಟು (26 ಎಂದು ಪರಿಗಣಿಸಲಾಗುತ್ತದೆ) ಕುಸಿತ ಕಂಡಿದೆ. ಟೆಕ್ ಮಹೀಂದ್ರಾ ನಾಲ್ಕನೇ ತ್ರೈಮಾಸಿಕದ ನಿವ್ವಳ ಲಾಭವು 1,118 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ನಿವ್ವಳ ಲಾಭವು 1,506 ಕೋಟಿ ರೂಪಾಯಿ ಆಗಿದೆ.
ಟೆಕ್ ಮಹೀಂದ್ರಾ ನಿವ್ವಳ ಲಾಭವು ಅಂದಾಜಿಗಿಂತ ಕಡಿಮೆಯೇ ಆಗಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭವು 1,260 ಕೋಟಿ ರೂಪಾಯಿ ಆಗಿರಲಿದೆ ಎಂದು ಅಂದಾಜು ಮಾಡಲಾಗಿತ್ತು. ಇನ್ನು ಟೆಕ್ ಮಹೀಂದ್ರಾ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡ 13.2ರಷ್ಟು ಏರಿಕೆಯಾಗಿ, 13,718 ಕೋಟಿ ರೂಪಾಯಿಗೆ ತಲುಪಿದೆ. ಬೋರ್ಡ್ ಅಂತಿಮ ಡಿವೆಂಡೆಟ್ ಅನ್ನು ಕೂಡಾ ಘೋಷಣೆ ಮಾಡಿದೆ.

ಬೋರ್ಡ್ ಅಂತಿಮ ಡಿವಿಡೆಂಟ್ ಅನ್ನು ಘೋಷಿಸಿದ್ದು, ಪ್ರತಿ ಷೇರಿಗೆ 32 ರೂಪಾಯಿ ಆಗಿದೆ. ಹಣಕಾಸು ವರ್ಷ 2023ರ ಒಟ್ಟು ಡಿವಿಡೆಂಟ್ ಪ್ರತಿ ಷೇರಿಗೆ 50 ರೂಪಾಯಿ ಆಗಿದೆ ಎಂದು ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ಸಂಸ್ಥೆಯು ಹೇಳಿದೆ. ಇನ್ನು ಬಡ್ಡಿದರ, ತೆರಿಗೆ ಇತರೆ ಕಡಿತ, ಇಬಿಐಟಿಡಿಎಕ್ಕೂ ಮುನ್ನ ಇರುವ ಗಳಿಕೆಯು ಕೂಡಾ ಕುಸಿತವಾಗಿದೆ. ವರ್ಷದಿಂದ ವರ್ಷಕ್ಕೆ ಶೇಕಡ 3.2ರಷ್ಟು ಕುಸಿತ ಕಂಡು 2,021 ಕೋಟಿ ರೂಪಾಯಿಗೆ ಇಳಿದಿದೆ.
ಇನ್ನು ಎಲ್ಲ ವೆಚ್ಚ, ತೆರಿಗೆ ಕಡಿತಕ್ಕೂ ಮುನ್ನ ಟೆಕ್ ಮಹೀಂದ್ರಾ ಪಡೆದ ಗಳಿಕೆ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 5.7ರಷ್ಟು ಇಳಿಕೆಯಾಗಿದೆ. ಹಣಕಾಸು ವರ್ಷ 2023ರಲ್ಲಿ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರತಿ ಷೇರಿನ ಗಳಿಕೆಯು (ಇಪಿಎಸ್) 12.62 ರೂಪಾಯಿಗೆ ಇಳಿಕೆಯಾಗಿದೆ. ಹಣಕಾಸು ವರ್ಷ 2023ರಲ್ಲಿ ಟೆಕ್ ಮಹೀಂದ್ರಾ ತೆರಿಗೆಯ ಬಳಿಕ ಗಳಿಸಿದ ಲಾಭವು ಶೇಕಡ 13.2ರಷ್ಟು ಇಳಿಕೆಯಾಗಿ, 4,832 ರೂಪಾಯಿ ಆಗಿದೆ.
ಹಣಕಾಸು ವರ್ಷ 2023ರಲ್ಲಿ ಟೆಕ್ ಮಹೀಂದ್ರಾ ಆದಾಯವು 53,290 ಕೋಟಿ ರೂಪಾಯಿ ಆಗಿತ್ತು. ಇದೇ ಸಂದರ್ಭದಲ್ಲಿ ಇಬಿಐಟಿಡಿಎ ವರ್ಷದಿಂದ ವರ್ಷಕ್ಕೆ ಶೇಕಡ 0.1ರಷ್ಟು ಏರಿಕೆಯಾಗಿ, 8,029 ರೂಪಾಯಿ ಆಗಿದೆ. ಮಾರ್ಜಿನ್ 290 ಬಿಪಿಎಸ್ ಇಳಿಕೆಯಾಗಿ ಶೇಕಡ 15.1ರಷ್ಟಿದೆ.
"ಹಣಕಾಸು ವರ್ಷ 2024ಕ್ಕೆ ನಾವು ಎಂಟ್ರಿ ನೀಡುತ್ತಿದ್ದಂತೆ ನಮ್ಮ ವಹಿವಾಟು ಏರಿಕೆಯಾಗುತ್ತಿರುವುದು ಕಂಡು ಬಂದಿದೆ. ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ವ್ಯವಹಾರಗಳು ಉಳಿಯುವ ಅಗತ್ಯವಿದೆ ಎಂಬುವುದು ನಮಗೆ ತಿಳಿದಿದೆ," ಎಂದು ಟೆಕ್ ಮಹೀಂದ್ರಾದ ಎಂಡಿ ಮತ್ತು ಸಿಇಒ ಸಿಪಿ ಗುರ್ನಾನಿ ತಿಳಿಸಿದ್ದಾರೆ.
ವಿಪ್ರೋ ನಾಲ್ಕನೇ ತ್ರೈಮಾಸಿಕದ ವರದಿ
ಐಟಿ ಪ್ರಮುಖ ಸಂಸ್ಥೆಯಾದ ವಿಪ್ರೋ ಗುರುವಾರ ಮಾರ್ಚ್ 2023 ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ 3,074 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಹೊಂದಿದೆ. ಒಂದು ವರ್ಷದ ಹಿಂದಿನ ಆದಾಯಕ್ಕಿಂತ ಇದು ಶೇಕಡ 0.4ರಷ್ಟು ಇಳಿಕೆಯಾಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ವಿಪ್ರೋ ನಿವ್ವಳ ಲಾಭವು 3,087 ಕೋಟಿ ರೂಪಾಯಿ ಆಗಿತ್ತು.
ಇನ್ನು ನಾಲ್ಕನೇ ತ್ರೈಮಾಸಿಕದಲ್ಲಿ ಆದಾಯವು ವರ್ಷದಿಂದ ವರ್ಷಕ್ಕೆ (YoY) ಶೇಕಡ 11ರಷ್ಟು ಏರಿಕೆಯಾಗಿ 23,190 ಕೋಟಿ ರೂಪಾಯಿ ಆಗಿದೆ. ಕಂಪನಿಯ ಬೋರ್ಡ್ ಪ್ರತಿ ಷೇರಿಗೆ 445 ರೂಪಾಯಿ ಟೆಂಡರ್ ಪ್ರಸ್ತಾಪದ ಮೂಲಕ ಷೇರುಗಳ ಮರುಖರೀದಿಯನ್ನು ಅನುಮೋದಿಸಿದೆ. ವಿಪ್ರೋ ಕಂಪನಿಯ ಷೇರುದಾರರಿಂದ ಸುಮಾರು 26.9 ಕೋಟಿ ಷೇರುಗಳನ್ನು ಮರುಖರೀದಿ ಮಾಡಿದ್ದಾರೆ.


Click it and Unblock the Notifications