ಟೆಸ್ಲಾ ಕಂಪೆನಿಯ ಷೇರಿನ ಬೆಲೆಯಲ್ಲಿ ಸೋಮವಾರ ಏರಿಕೆ ಮುಂದುವರಿದಿದ್ದು, ಎಲಾನ್ ಮಸ್ಕ್ ಈಗ ವಿಶ್ವದ ಮೂರನೇ ಅತ್ಯಂತ ಶ್ರೀಮಂತ ಎನಿಸಿಕೊಂಡಿದ್ದಾರೆ. ಅದಕ್ಕೂ ಮುನ್ನ ಆ ಸ್ಥಾನದಲ್ಲಿ ಇದ್ದದ್ದು ಮಾರ್ಕ್ ಝುಕರ್ ಬರ್ಗ್. ಇದೀಗ ಮಸ್ಕ್ ಆಸ್ತಿ ಮೌಲ್ಯ 1150.4 ಕೋಟಿ ಅಮೆರಿಕನ್ ಡಾಲರ್ ಆಗಿದೆ.
ಭಾರತದ ರುಪಾಯಿಗಳಲ್ಲಿ ಇವತ್ತಿನ ಲೆಕ್ಕಕ್ಕೆ (ಸೆಪ್ಟೆಂಬರ್ 1, 2020) 8.42 ಲಕ್ಷ ಕೋಟಿ ಆಗುತ್ತದೆ. ಇದು ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕ ಬಿಡುಗಡೆ ಮಾಡಿರುವ ಪಟ್ಟಿ. ಇನ್ನು ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ರ ವಿಚ್ಛೇದಿತ ಪತ್ನಿ ಮ್ಯಾಕ್ ಕೆಂಜಿ ಸ್ಕಾಟ್ ವಿಶ್ವದ ಶ್ರೀಮಂತ ಮಹಿಳೆ ಎನಿಸಿಕೊಂಡರು. ಅವರ ಬಳಿ ಅಮೆಜಾನ್ ಕಂಪೆನಿಯ 4% ಷೇರಿನ ಪಾಲಿದೆ. ಆಕೆ ಒಟ್ಟು ಆಸ್ತಿ ಮೌಲ್ಯ 6640 ಅಮೆರಿಕನ್ ಡಾಲರ್ (4.86 ಲಕ್ಷ ಕೋಟಿ ರುಪಾಯಿ).
ಟೆಸ್ಲಾ ಕಂಪೆನಿ ಷೇರು 500% ಹೆಚ್ಚಳ
49 ವರ್ಷದ ಎಲಾನ್ ಮಸ್ಕ್ ಆಸ್ತಿ ಮೌಲ್ಯ ಈ ವರ್ಷದಲ್ಲೇ 87.8 ಬಿಲಿಯನ್ ಏರಿಕೆ ಆಗಿದೆ. ಟೆಸ್ಲಾ ಕಂಪೆನಿ ಷೇರು 500% ಹೆಚ್ಚಳವಾಗಿದೆ. ಇದರ ಜತೆಗೆ ವೇತನದ ಪ್ಯಾಕೇಜ್ ಕೂಡ ಈ ಸಂಪತ್ತಿನಲ್ಲಿ ಸೇರಿಕೊಂಡಿದೆ. ಒಂದು ವೇಳೆ ಅಂದುಕೊಂಡ ಗುರಿ ತಲುಪಿದಲ್ಲಿ ಅದರಿಂದಲೇ 5000 ಕೋಟಿ USD ಬರುತ್ತದೆ.
ಝುಕರ್ ಬರ್ಗ್, ಬೆಜೋಸ್, ಬಿಲ್ ಗೇಟ್ಸ್ ಸಾಲಿಗೆ ಸೇರ್ಪಡೆ
ಸದ್ಯಕ್ಕೆ ಟೆಸ್ಲಾ ಕಂಪೆನಿಯ ಮಾರ್ಕೆಟ್ ಮೌಲ್ಯ ವಾಲ್ ಮಾರ್ಟ್ ಗಿಂತಲೂ ಹೆಚ್ಚಿದ್ದು, 464 ಬಿಲಿಯನ್ ಯುಎಸ್ ಡಿ ತಲುಪಿದೆ. ಆದಾಯದ ದೃಷ್ಟಿಯಲ್ಲಿ ಯು.ಎಸ್.ನಲ್ಲಿ ಅತಿ ದೊಡ್ಡ ಕಂಪೆನಿ ಎನಿಸಿಕೊಂಡಿದೆ. ಶತಕೋಟಿ ಡಾಲರ್ ಗೂ ಹೆಚ್ಚು ಆಸ್ತಿ ಇರುವ ಝುಕರ್ ಬರ್ಗ್, ಬೆಜೋಸ್ ಹಾಗೂ ಬಿಲ್ ಗೇಟ್ಸ್ ಸಾಲಿಗೆ ಕಳೆದ ವಾರ ಮಸ್ಕ್ ಕೂಡ ಸೇರ್ಪಡೆಯಾದರು.
ಮಸ್ಕ್ ಮತ್ತು ಬೆಜೋಸ್ ಮಧ್ಯೆ ಅಗಾಧ ವ್ಯತ್ಯಾಸ
ಹೆಚ್ಚುತ್ತಿರುವ ಆದಾಯ ಅಸಮಾನತೆ ಬಗ್ಗೆ ಯು.ಎಸ್.ನಲ್ಲಿ ವಿವಿಧ ವಲಯಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಅಂದ ಹಾಗೆ ವಿಶ್ವದ ನಂಬರ್ ಒನ್ ಸ್ಥಾನದಲ್ಲಿ ಇರುವ ಜೆಫ್ ಬೆಜೋಸ್ ಆಸ್ತಿ ಮೌಲ್ಯ 200 ಬಿಲಿಯನ್ ಡಾಲರ್ ದಾಟಿದ್ದು, ಮಸ್ಕ್ ಮತ್ತು ಬೆಜೋಸ್ ಮಧ್ಯೆ ಅಗಾಧ ವ್ಯತ್ಯಾಸ ಇದೆ.


Click it and Unblock the Notifications