ವಿಶ್ವದಾದ್ಯಂತ ಆಟೋ ಮೊಬೈಲ್ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿರುವ ಟೆಸ್ಲಾ ಸೈಬರ್ ಟ್ರಕ್ ಖರೀದಿಗೆ ವಿಶ್ವದಾದ್ಯಂತ ಜನರು ಮುಗಿಬಿದ್ದಿದ್ದಾರೆ. ಟೆಸ್ಲಾ ಸಂಸ್ಥೆ ತನ್ನ ಪ್ರಪ್ರಥಮ ಎಲೆಕ್ಟ್ರಿಕ್ ಪಿಕಪ್ ಟ್ರಕ್ ಬಿಡುಗಡೆ ಮಾಡಿದ ನಾಲ್ಕೇ ದಿನದಲ್ಲಿ 1.87 ಲಕ್ಷ ಟ್ರಕ್ ಬುಕ್ಕಿಂಗ್ ಆಗುವ ಮೂಲಕ ದಾಖಲೆ ಮಾಡಿದೆ.
ಕ್ಯಾಲಿಫೋರ್ನಿಯದ ಲಾಸ್ ಏಂಜಲೀಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನವೆಂಬರ್ 21ರಂದು ಟೆಸ್ಲಾ ತನ್ನ ಪ್ರಪ್ರಥಮ ಎಲೆಕ್ಟ್ರಿಕ್ ಪಿಕಪ್ ಟ್ರಕ್ ಬಿಡುಗಡೆ ಮಾಡಿತ್ತು. ಇದರ ಡಿಸೈನ್‌ಗೆ ಮಾರು ಹೋಗಿರುವ ಜನರು ಸೈಬರ್ ಟ್ರಕ್ ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಯಾವುದೇ ಜಾಹೀರಾತು ನೀಡದೆಯೇ ನಾಲ್ಕು ದಿನದಲ್ಲಿ 1.87 ಲಕ್ಷ ಆರ್ಡರ್ ಆಗಿದೆ ಎಂದು ಸ್ಪೇಸ್ ಎಕ್ಸ್ ಸಹ ಸಂಸ್ಥಾಪಕ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.
ನವೀನ ಮಾದರಿಯ ವಿಭಿನ್ನವಾದ ಸಂಪೂರ್ಣ ಬ್ಯಾಟರಿ ಚಾಲಿತ ಟ್ರಕ್ ಇದಾಗಿದೆ. ಸ್ಪೇಸ್ ಎಕ್ಸ್‌ನ ರಾಕೆಟ್ ಗಳಿಗೆ ಬಳಸಲಾಗುವ ದಪ್ಪದಾದ ಸ್ಟೇನ್‌ಲೆಸ್ ಸ್ಟೀಲ್ ನಿಂದಲೇ ಇದನ್ನು ತಯಾರಿಸಲಾಗುತ್ತದೆ ಎಂದು ಸ್ಪೇಸ್ ಎಕ್ಸ್ ಸಹ ಸಂಸ್ಥಾಪಕ ಎಲಾನ್ ಮಸ್ಕ್ ಹೇಳಿದ್ದಾರೆ.

ಈಗಾಗಲೇ ಪ್ರಯೋಗಾತ್ಮಕ ಹಂತದಲ್ಲಿ ಈ ಸೈಬರ್ ಟ್ರಕ್ ವಿಶ್ವದ ಬಲಿಷ್ಟ ಟ್ರಕ್ ಫೋರ್ಡ್ ವಿಪಿ 150 ಗಿಂತ ಉತ್ತಮವಾಗಿದ್ದು, ಸ್ಪೋರ್ಟ್ಸ ಕಾರು ಪೋರ್ಷೆ 911 ಗಿಂತ ವೇಗವಾಗಿದೆ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.
ಈ ಟ್ರಕ್‌ನ ಗ್ಲಾಸ್‌ಗಳು ಶ್ಯಾಟರ್‌ಪ್ರೂಫ್(ಒಡೆದುಹೋಗಲ್ಲ) ಎಂದೇ ಹೇಳಲಾಗಿತ್ತು. ಈ ವಾಹನಕ್ಕೆ ಸ್ಕ್ರಾಚ್ ಅಥವಾ ಡೆಂಟ್ ಆಗಲ್ಲ ಕಿಟಕಿಗಳು ಆರ್ಮಡ್ ಗ್ಲಾಸ್ ನಿಂದ ತಯಾರಿಸಲಾಗಿದೆ ಎಂದು ಎಲಾನ್ ಮಸ್ಕ್ ಹೇಳಿದ್ದರು. ಆದರೆ ಸೈಬರ್ ಟ್ರಕ್ ಅನಾವರಣ ಕಾರ್ಯಕ್ರಮದಲ್ಲೇ ಕಬ್ಬಿಣದ ಗುಂಡಿನಿಂದ ಹೊಡೆದಾಗ ಗಾಜು ಒಡೆದು ಹೋಗಿ ಭಾರೀ ಸುದ್ದಿಯಾಗಿತ್ತು. ಹೀಗಾಗಿ ಮುಂಬರುವ ದಿನಗಳಲ್ಲಿ ಇದನ್ನು ಸರಿ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಈ ಟ್ರಕ್ ಮೂರು ರೀತಿಯಲ್ಲಿ ಲಭ್ಯವಿದೆ . ಸಿಂಗಲ್ ಮೋಟಾರ್ RWD, ಡುಯಲ್ ಮೋಟಾರ್ RWD, ಹಾಗೂ ಟ್ರೈ-ಮೋಟಾರ್ RWD. ಅಂದಹಾಗೆ 2022ರ ಕೊನೆಗೆ ಉತ್ಪಾದನೆ ಆರಂಭವಾಗುವ ಈ ಟ್ರಕ್ ನ ಬೆಲೆ ಅಮೆರಿಕಾ ಡಾಲರ್ 39,900 ರಿಂದ 69,900 (ಭಾರತದ ರುಪಾಯಿಗಳಲ್ಲಿ 28 ಲಕ್ಷದಿಂದ 50 ಲಕ್ಷ). ಪೂರ್ಣ ಸ್ವಯಂ ಚಾಲಿತ ಚಾಲನೆಗೆ ಹೆಚ್ಚುವರಿ 7,000 ಅಮೆರಿಕನ್ ಡಾಲರ್ (5 ಲಕ್ಷ ರುಪಾಯಿ) ಆಗುತ್ತದೆ.


Click it and Unblock the Notifications