ಒಳ್ಳೆಯ ಸುದ್ದಿ! ಫ್ಲೈಓವರ್‌ ಮತ್ತೆ ಓಪನ್.. ಸಿಲ್ಕ್‌ಬೋರ್ಡ್, ಹೊಸೂರು ಸಂಚಾರ ಸುಗಮ

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಜಾಲ ವಿಸ್ತರಣೆ ಆಗುತ್ತಿದೆ. ಬೆಂಗಳೂರಿನ ಹೊರ ವರ್ತುಲ ರಸ್ತೆ (ಒಆರ್‌ಆರ್) ವಾಹನ ಸವಾರರಿಗೆ ಸಂಚಾರಿ ಪೊಲೀಸರು ಸಿಹಿ ಸುದ್ದಿ ನೀಡಿದ್ದಾರೆ.

ಹೌದು, ನಿನ್ನೆ ( ಫೆ.12) ರಂದು ಹೊರ ವರ್ತುಲ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಉಂಟಾಗಿತ್ತು. ಬೆಳಗ್ಗೆ ಮತ್ತು ಸಂಜೆ ಉಂಟಾದ ಟ್ರಾಫಿಕ್ ಜಾಮ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಸಹ ಹಾಕಲಾಗಿತ್ತು.ಸಾರ್ವಜನಿಕರು ಬೆಂಗಳೂರು ಸಂಚಾರ ವ್ಯವಸ್ಥೆಯ ಕುರಿತು ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು. ಆದರೆ ಎಲ್ಲಾ ಸಮಸ್ಸೆಗೆ ಪರಿಹಾರ ಸೂಚಿಸಿದ್ದಾರೆ.

 ಒಳ್ಳೆಯ ಸುದ್ದಿ! ಫ್ಲೈಓವರ್‌ ಮತ್ತೆ ಓಪನ್

ಗುರುವಾರ(ಫೆ.13) ಬೆಳಗ್ಗೆ ನಗರ ಸಂಚಾರಿ ಪೊಲೀಸರು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಹೊರ ವರ್ತುಲ ರಸ್ತೆಯಲ್ಲಿ ಇಂದು ಟ್ರಾಫಿಕ್ ಜಾಮ್ ಉಂಟಾಗುವುದಿಲ್ಲ. ಬಿಎಂಆರ್‌ಸಿಎಲ್ ಕಾಮಗಾರಿ ಕಾರಣ ಮುಚ್ಚಲಾಗಿದ್ದ19 ನೇ ಮುಖ್ಯ ಮತ್ತು 14 ನೇ ಮುಖ್ಯ ರಸ್ತೆಯ ನಡುವಿನ ಮೇಲ್ಸೇತುವೆಯನ್ನು ಈಗ ಮತ್ತೆ ತೆರೆಯಲಾಗಿದೆ ಎಂದು ಸಂಚಾರ ಪೊಲೀಸರು ಪೋಸ್ಟ್ ಮಾಡಿದ್ದಾರೆ.

ಎಕ್ಸ್‌ನಲ್ಲಿ ಅವರು ಹಂಚಿಕೊಂಡ ಮಾಹಿತಿ ಏನು?

ಪೊಲೀಸರು ತಮ್ಮ ಪೋಸ್ಟ್‌ನಲ್ಲಿ, 'ಸಂಚಾರ ಮಾಹಿತಿ. ಓಆರ್‌ಆರ್ ಮಾರ್ಗದ ಪ್ರಯಾಣಿಕರಿಗೆ ಶುಭ ಸುದ್ದಿ! ಬಿಎಂಆರ್‌ಸಿಎಲ್ ಕಾಮಗಾರಿಗಾಗಿ ಮುಚ್ಚಲಾಗಿದ್ದ 19ನೇ ಮುಖ್ಯ ರಸ್ತೆ ಮತ್ತು 14ನೇ ಮುಖ್ಯ ರಸ್ತೆಯ ನಡುವಿನ ಮೇಲುಸೇತುವೆಯನ್ನು ಈಗ ಮರುತೆರೆಯಲಾಗಿದೆ. 'ಸಿಲ್ಕ್‌ಬೋರ್ಡ್/ ಹೊಸೂರು ಕಡೆಗಿನ ಸಂಚಾರ ಈಗ ಸುಗಮವಾಗಿದೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು! ಸುರಕ್ಷಿತವಾಗಿ ವಾಹನ ಚಾಲನೆ ಮಾಡಿ' ಎಂದು ಪೋಸ್ಟ್‌ನಲ್ಲಿ ಸಂಚಾರಿ ಪೊಲೀಸರು ಪೋಸ್ಟ್ ಮಾಡಿದ್ದಾರೆ.

ಬುಧವಾರ ಔಟರ್ ರಿಂಗ್‌ ರೋಡ್‌ನಲ್ಲಿ ಭಾರೀ ಸಂಚಾರ ಸಮಸ್ಯೆ ಉಂಟಾಗಿತ್ತು. ಸಾಮಾಜಿಕ ಜಾಲತಾಣದ ಮೂಲಕ ಈ ಕುರಿತು ಪೊಲೀಸರು ಅಪ್‌ಡೇಟ್ ನೀಡುತ್ತಲೇ ಇದ್ದರು. ಬುಧವಾರ ಬೆಳಗ್ಗೆ ಬಿಎಂಆರ್‌ಸಿಎಲ್‌ ಲಾಂಚಿಂಗ್ ಗಿರ್ಡರ್‌ನಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ, ಹೊರ ವರ್ತುಲ ರಸ್ತೆಯ ಮೇಲ್ಸೇತುವೆಯ ಹೆಚ್.ಎಸ್.ಆರ್ 14 ನೇ ಮುಖ್ಯ ರಸ್ತೆಯಿಂದ 19ನೇ ಮುಖ್ಯ ರಸ್ತೆಯನ್ನು ಎರಡೂ ದಿಕ್ಕುಗಳಲ್ಲಿ ಸಂಚಾರಕ್ಕೆ ಮುಚ್ಚಲಾಗಿತ್ತು.

ಅದು ದುರಸ್ತಿಯಾಗುವವರೆಗೆ ಎರಡೂ ದಿಕ್ಕಿನ ಸರ್ವೀಸ್ ರಸ್ತೆಯಲ್ಲಿ ಮಾತ್ರ ವಾಹನಗಳನ್ನು ಬಿಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದರು. ಇದರಿಂದಾಗಿ ವಾಹನ ಸವಾರರು ಸಂಕಷ್ಟ ಎದುರಿಸಬೇಕಾಗತ್ತು.

HSR ಲೇಔಟ್ ಫ್ಲೈಓವರ್ ಬಂದ್!

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಸಂಚಾರ ದಟ್ಟಣೆ (Traffic) ಉಂಟಾಗಿದೆ. ಬಿಎಂಆರ್‌ಸಿಎಲ್ (BMRCL) ಮೆಟ್ರೋ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆ, ಎಚ್‌ಎಸ್‌ಆರ್ ಲೇಔಟ್ (HSR Layout) ಸಮೀಪದ ಫ್ಲೈಓವರ್‌ನ್ನು ಬಂದ್ ಮಾಡಲಾಗಿದೆ.

ಫ್ಲೈಓವರ್ ಸಂಚಾರ ಕ್ಲೋಸ್‌ ಮಾಡಲು ಕಾರಣವೇನು?

ಎಚ್‌ಎಸ್‌ಆರ್ ಲೇಔಟ್‌ನ 14 ನೇ ಮುಖ್ಯರಸ್ತೆಯಲ್ಲಿ ಬಿಎಂಆರ್‌ಸಿಎಲ್ ಸ್ಲೈಡಿಂಗ್ ಗರ್ಡಲ್ ಓರೆಯಾಗಿರುವ ಕಾರಣ, ಫ್ಲೈಓವರ್ ಸಂಚಾರವನ್ನು ಮುಚ್ಚಲಾಗಿದೆ. ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚನೆಯನ್ನು ನೀಡಲಾಗಿದೆ.

ಸಿಲ್ಕ್ ಬೋರ್ಡ್ ಕಡೆಗೆ ಹೊರಹೋಗುವ ಸಂಚಾರವನ್ನು 19 ನೇ ಮುಖ್ಯರಸ್ತೆ ಮೂಲಕ ತಿರುಗಿಸಲಾಗಿದೆ. ಸಾರ್ವಜನಿಕರು ಇದಕ್ಕೆ ದಯವಿಟ್ಟು ಸಹಕರಿಸಿ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಪ್ರಯಾಣವನ್ನು ಯೋಜಿಸಿ ಎಂದು ಬೆಂಗಳೂರು ಸಂಚಾರ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.

ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಫ್ಲೈಓವರ್ ದಿಢೀರನೆ ಮುಚ್ಚುವಿಕೆಯ ನಿರ್ಧಾರದಿಂದ ಅನೇಕ ಪ್ರಯಾಣಿಕರು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ವಾರಾಂತ್ಯದಲ್ಲಿ ಅಥವಾ ಆಫ್-ಪೀಕ್ ಸಮಯದಲ್ಲಿ ನಿರ್ಮಾಣ ಕಾರ್ಯವನ್ನು ಏಕೆ ನಿಗದಿಪಡಿಸಲಾಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಾಹನ ಸವಾರರ ಆಕ್ರೋಶ

ಎಚ್‌ಎಸ್‌ಆರ್ ಲೇಔಟ್ ಫ್ಲೈಓವರ್‌ನ್ನು ಬಂದ್ ಮಾಡಿರುವುದಕ್ಕೆ ವಾಹನ ಸವಾರರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಖಾತೆ ಬಳಕೆದಾರರೊಬ್ಬರು, ಇಂತಹ ವಿಷಯವನ್ನು ಒಂದು ದಿನ ಮುಂಚಿತವಾಗಿ ವಾಹನ ಸವಾರರ ಗಮನಕ್ಕೆ ತರಬೇಕು. ಆಗ ಅವರು, ಪರ್ಯಾಯ ಯೋಜನೆಗಳನ್ನು ರೂಪಿಸಿಕೊಳ್ಳುತ್ತಾರೆ. ಭಾರೀ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವ ಜನರ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.

ಬಿಎಂಆರ್‌ಸಿಎಲ್ ಅಧಿಕಾರಿಗಳು ಈ ಕಾಮಗಾರಿಯನ್ನು ವಾರಂತ್ಯ ಅಥವಾ ಟ್ರಾಫಿಕ್ ಕಡಿಮೆಯಿರುವ ಸಮಯದಲ್ಲಿ ಮಾಡಬಹುದಿತ್ತು. ಕನಿಷ್ಠ ಶುಕ್ರವಾರದಂದು ಕೈಗೊಳ್ಳಬಹುದಿತ್ತು. ಬುಧವಾರ ಹೊರ ವರ್ತುಲ ರಸ್ತೆಯಿಂದ ಐಟಿಪಿಎಲ್‌ವರೆಗೆ ಹಲವು ಕಂಪನಿಗಳು ಕಾರ್ಯನಿರ್ವಹಿಸುತ್ತವೆ. ಈಗ ರಸ್ತೆಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿವೆ. ಮುಂದಿನ ಸಲವಾದರೂ ಅಧಿಕಾರಿಗಳು ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಮತ್ತೊಬ್ಬ ಬಳಕೆದಾರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+