ಬೆಂಗಳೂರು, ಏಪ್ರಿಲ್ 15: ಮೊದಲ ಹಂತದ ಲೋಕಸಭೆ ಚುನಾವಣೆ ಹತ್ತಿರ ಬಂದಿದ್ದು, ಕೇಂದ್ರಿಯ ಸಂಸ್ಥೆಗಳ ದಾಖಲೆಯ ಪ್ರಕಾರ 4,650 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿವೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿ) ಸೋಮವಾರ ತಿಳಿಸಿದೆ.
"ದೇಶದಲ್ಲಿ 75 ವರ್ಷಗಳ ಲೋಕಸಭಾ ಚುನಾವಣೆಯ ಇತಿಹಾಸದಲ್ಲಿ ಅತಿ ಹೆಚ್ಚು ಹಣ ವಶಪಡಿಸಿಕೊಳ್ಳಲಾಗಿದ್ದು, ತನಿಖಾ ಹಂತದಲ್ಲಿದೆ" ಎಂದು ಚುನಾವಣಾ ಸಮಿತಿಯು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಮಾರ್ಚ್ 1 ರಿಂದ ಜಾರಿ ಸಂಸ್ಥೆಗಳು ಪ್ರತಿದಿನ 100 ಕೋಟಿ ರೂಪಾಯಿ ವಶಪಡಿಸಿಕೊಳ್ಳುತ್ತಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದು ಸಂಪೂರ್ಣ 2019 ರ ಲೋಕಸಭಾ ಚುನಾವಣೆಯಲ್ಲಿ ವಶಪಡಿಸಿಕೊಂಡ 3,475 ಕೋಟಿ ರೂಪಾಯಿಗಿಂತ ಹೆಚ್ಚಿನ ಹೆಚ್ಚಳವನ್ನು ಸೂಚಿಸುತ್ತದೆ.
2019 ರ ಸಾರ್ವತ್ರಿಕ ಚುನಾವಣೆಗಳಿಗೆ ಹೋಲಿಸಿದರೆ ಡ್ರಗ್ಸ್ ಮತ್ತು ಫ್ರೀಬೀಸ್ ವಶಪಡಿಸಿಕೊಂಡ ಅತಿಹೆಚ್ಚು ಮೌಲ್ಯದ್ದಾಗಿದೆ. ಇದುವರೆಗೆ 2,068.8 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದ್ದು, 2019 ರಲ್ಲಿ 1,279.9 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು.
ಚುನಾವಣಾ ಅವ್ಯವಹಾರಗಳನ್ನು ಪರಿಶೀಲಿಸಲು ಮತ್ತು ಮತದಾನದ ಮೊದಲು ಪಾರದರ್ಶಕತೆ ತರಲು ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಸಮಗ್ರ ಯೋಜನೆ, ಸ್ಕೇಲ್ ಅಪ್ ಸಹಯೋಗ ಮತ್ತು ಏಜೆನ್ಸಿಗಳಿಂದ ಏಕೀಕೃತ ತಡೆ ಕ್ರಮ, ಪೂರ್ವಭಾವಿ ನಾಗರಿಕ ಭಾಗವಹಿಸುವಿಕೆ ಮತ್ತು ತಂತ್ರಜ್ಞಾನದ ಅತ್ಯುತ್ತಮ ತೊಡಗಿಸಿಕೊಳ್ಳುವಿಕೆಯಿಂದ ಅವು ಸಾಧ್ಯವಾಗಿದೆ ಎಂದು ಚುನಾವಣಾ ಸಂಸ್ಥೆ ಹೇಳಿದೆ.
ಮಾರ್ಚ್ 16 ರಿಂದ ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಕರ್ನಾಟಕವೊಂದರಲ್ಲೇ ಚುನಾವಣಾ ಸಮಿತಿಯು 45.59 ಕೋಟಿ ರೂಪಾಯಿ ನಗದು ಮತ್ತು 151 ಕೋಟಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ 1,650 ಎಫ್‌ಐಆರ್‌ಗಳನ್ನು ದಾಖಲಿಸಿದೆ. ಏಳು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತ ಏಪ್ರಿಲ್ 19 ರಂದು ಆರಂಭವಾಗಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.


Click it and Unblock the Notifications