ಬೆಂಗಳೂರು, ಮಾರ್ಚ್ 18: ಭಾರತದಲ್ಲಿ ಬೆಳೆಯುತ್ತಿರುವ ಜ್ಞಾನದ ಅವಿಷ್ಕಾರದ ಹಸಿವು ಮತ್ತು ನಾವೀನ್ಯತೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿ ಭಾರತೀಯ ಪೇಟೆಂಟ್ ಕಚೇರಿ(IP) ನಿಂತಿದ್ದು, ಮೊತ್ತಮೊದಲ ಬಾರಿಗೆ ಪೇಟೆಂಟ್‌ಗಳ ಸಂಖ್ಯೆಯು ಒಂದು ಲಕ್ಷದ ಗಡಿಯನ್ನು ದಾಟಿದೆ.
ಭಾರತವು ತನ್ನ ಪೇಟೆಂಟ್ ಪ್ರಕ್ರಿಯೆಯಲ್ಲಿ ಮತ್ತಷ್ಟು ಸುಧಾರಣೆಯನ್ನು ತಂದಿದ್ದು, ಪೇಟೆಂಟ್ ಅಥವಾ ಬೌದ್ಧಿಕ ಹಕ್ಕು ಸ್ವಾಮ್ಯಗಳಿಗೆ ಹೆಚ್ಚು ಜನ ಪ್ರವೇಶ ಪಡೆಯುವಂತೆ ಮಾಡಿದರ ಪರಿಣಾಮ ಎಂಬಂತೆ ಮೊದಲ ಬಾರಿಗೆ ಒಂದು ಲಕ್ಷದ ಗಡಿಯನ್ನು ದಾಟಿ ನಿಂತಿದೆ. ಭೌಗೋಳಿಕ ಸೂಚಕ (ಜಿಐ) ನೋಂದಣಿಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಅದು ಹೇಳಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಳವಾಗಿದೆ.

ಭಾರತೀಯರ ಅವಿಷ್ಕಾರಗಳಿಗಾಗಿಯೇ ಕೆಲಸ ಮಾಡುವ ಭಾರತೀಯ ಪೇಟೆಂಟ್ ಕಚೇರಿ 2023 ರ ಮಾರ್ಚ್ 15ರಿಂದ 2024 ರ ಮಾರ್ಚ್ 14ರವರೆಗೆ ನೀಡಲಾದ ಪೇಟೆಂಟ್‌ಗಳ ಸಂಖ್ಯೆ ಬರೋಬ್ಬರಿ 1,01,311 ಆಗಿದೆ. ಅಂದರೆ ಪೇಟೆಂಟ್ ಕಚೇರಿ ಕಳೆದ ಒಂದು ವರ್ಷದಲ್ಲಿ ಪ್ರತಿದಿನ 250 ಪೇಟೆಂಟ್'ಗಳಂತೆ ನೀಡುತ್ತಿದೆ.
ಪೇಟೆಂಟ್‌ಗಳು, ವಿನ್ಯಾಸಗಳು ಮತ್ತು ಟ್ರೇಡ್‌ಮಾರ್ಕ್‌ಗಳ ನಿಯಂತ್ರಕ ಜನರಲ್ ಕಚೇರಿ ಒದಗಿಸಿದ ಮಾಹಿತಿಯ ಪ್ರಕಾರ ಈವರೆಗೆ ನೀಡಲಾಗಿರುವ 1,01,311 ಪೇಟೆಂಟ್‌ಗಳಲ್ಲಿ, ಅತ್ಯಧಿಕ ಸಂಖ್ಯೆಯು ಎಲೆಕ್ಟ್ರಿಕಲ್ ಮತ್ತು ಸಂಬಂಧಿತ ಆವಿಷ್ಕಾರ ಕ್ಷೇತ್ರಕ್ಕೆ ಸಂಬಂಧಿಸಿದುದಾಗಿದೆ. ಈ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಈವರೆಗೆ 47,993 ಬೌದ್ಧಿಕ ಹಕ್ಕು ಸ್ವಾಮ್ಯಗಳನ್ನು ನೀಡಲಾಗಿದೆ. ಯಾಂತ್ರಿಕ ಮತ್ತು ಸಂಬಂಧಿತ 37714, ರಾಸಾಯನಿಕ ವಿಜ್ಞಾನ ಮತ್ತು ಸಂಬಂಧಪಟ್ಟಂತೆ 12,028 ಮತ್ತು ಜೈವಿಕ ತಂತ್ರಜ್ಞಾನ ಮತ್ತು ಸಂಬಂಧಿತ ಕ್ಷೇತ್ರ 3,576 ಪೇಟೆಂಟ್ ಗಳನ್ನು ನೀಡಲಾಗಿದೆ.
"ತಂತ್ರಜ್ಞಾನ ಯುಗದಲ್ಲಿ ಪ್ರತಿ ಆರು ನಿಮಿಷಗಳೊಂದರಂತೆ ಭಾರತದಲ್ಲಿ ಐಪಿ ರಕ್ಷಣೆ ಬಯಸಲಾಗುತ್ತಿದೆ. 2023 ರಲ್ಲಿ 90,300 ರಲ್ಲಿ ಅತಿ ಹೆಚ್ಚು ಪೇಟೆಂಟ್ ಅರ್ಜಿಗಳನ್ನು ಸ್ವೀಕರಿಸಿದೆ" ಭಾರತೀಯ ಪೇಟೆಂಟ್ ಕಚೇರಿ(IP) ಹೇಳಿದೆ.
ಪೇಟೆಂಟ್ ಅಥವಾ ಬೌದ್ಧಿಕ ಹಕ್ಕು ಸ್ವಾಮ್ಯ ಎಂದರೇನು?
ನೂತನ ಆವಿಷ್ಕಾರಕ್ಕೆ ಅದರ ಮಾಲಕರಿಗೆ ನೀಡಲಾಗುವ ವಿಶೇಷ ಅಧಿಕಾರವನ್ನು ಪೇಟೆಂಟ್ ಅಥವಾ ಬೌದ್ಧಿಕ ಹಕ್ಕು ಸ್ವಾಮ್ಯ ಎನ್ನಲಾಗುತ್ತದೆ. ಇನ್ನು ಸರಳವಾಗಿ ಹೇಳಬೇಕೆಂದರೆ ಒಂದು ವಸ್ತುವಿನ ಮೇಲೆ ಅದರ ನಿಜವಾದ ವಾರಸುದಾರರಿಗೆ ನೀಡಲಾಗುವ ಹಕ್ಕು.
ಯಾರು ಕೊಡುತ್ತಾರೆ?
ಪೇಟೆಂಟ್ ನ ಡುವ ಅಧಿಕಾರ ಸರಕಾರಕ್ಕಿರುತ್ತದೆ. ಭಾರತೀಯ ಪೇಟೆಂಟ್ ಕಚೇರಿಯೂ ಅರ್ಜಿ ಸಲ್ಲಿಸುವ ವ್ಯಕ್ತಿ ಅಥವಾ ಕಂಪೆನಿಯ, ಸಂಸ್ಥೆ, ವಿಶ್ವವಿದ್ಯಾಲಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಇಂತಿಷ್ಟು ವರ್ಷದವರೆಗೆ ಪೇಟೆಂಟ್ ಅಧಿಕಾರವನ್ನು ನೀಡುತ್ತದೆ.
ಅರ್ಹತೆಗಳೇನು?
ಯಾವುದೇ ನೂತನ ಆವಿಷ್ಕಾರ ಹಕ್ಕು ಸ್ವಾಮ್ಯದ ಅರ್ಹವಾಗಬೇಕಾದರೆ 3 ಪರೀಕ್ಷೆಗಳಿಗೆ ಒಳಪಡಬೇಕಾಗುತ್ತದೆ ಮತ್ತು ಅರ್ಹವಾಗಿರುವ ನಿರ್ದಿಷ್ಟ ವಿಭಾಗಗಳಲ್ಲಿ ಒಂದಕ್ಕೆ ಸೇರಿರಬೇಕು. ಕೆಲವು ಪರೀಕ್ಷೆಗಳು ಮುಗಿದ ಬಳಿಕ ಆ ಆವಿಷ್ಕಾರಕ್ಕೆ ಪೇಟೆಂಟ್ ನೀಡಲಾಗುತ್ತದೆ.


Click it and Unblock the Notifications