ನವದೆಹಲಿ, ಮಾರ್ಚ್ 15: ಕೇಂದ್ರ ಸರ್ಕಾರವು ಕ್ರಿಪ್ಟೋಕರೆನ್ಸಿಯನ್ನು ಪರಿಚಯಿಸುವ ಯಾವುದೇ ಯೋಜನೆ ಇಲ್ಲ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು. ಪ್ರಸ್ತುತ, ಕ್ರಿಪ್ಟೋಕರೆನ್ಸಿಗಳು ಭಾರತದಲ್ಲಿ ಅನಿಯಂತ್ರಿತವಾಗಿವೆ ಎಂದು ಚೌಧರಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
"ಆರ್‌ಬಿಐ ಕ್ರಿಪ್ಟೋಕರೆನ್ಸಿಯನ್ನು ನೀಡುವುದಿಲ್ಲ. ಸಾಂಪ್ರದಾಯಿಕ ಪೇಪರ್ ಕರೆನ್ಸಿಯು ಕಾನೂನುಬದ್ಧ ಟೆಂಡರ್ ಆಗಿದೆ ಮತ್ತು ಆರ್‌ಬಿಐ ಕಾಯಿದೆ 1994ರ ನಿಬಂಧನೆಗಳ ಪ್ರಕಾರ ಆರ್‌ಬಿಐನಿಂದ ನೀಡಲಾಗುತ್ತದೆ. ಸಾಂಪ್ರದಾಯಿಕ ಪೇಪರ್ ಕರೆನ್ಸಿಯ ಡಿಜಿಟಲ್ ಆವೃತ್ತಿಯನ್ನು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಎಂದು ಕರೆಯಲಾಗುತ್ತದೆ,'' ಎಂದು ಅವರು ಹೇಳಿದರು.
"ಆರ್‌ಬಿಐ ಪ್ರಸ್ತುತ CBDCಯ ಪರಿಚಯಕ್ಕಾಗಿ ಹಂತಹಂತದ ಅನುಷ್ಠಾನ ಕಾರ್ಯತಂತ್ರದ ಕಡೆಗೆ ಕೆಲಸ ಮಾಡುತ್ತಿದೆ ಮತ್ತು ಕಡಿಮೆ ಅಥವಾ ಯಾವುದೇ ಅಡ್ಡಿಯಿಲ್ಲದೆ ಕಾರ್ಯಗತಗೊಳಿಸಬಹುದಾದ ಬಳಕೆಯ ಪ್ರಕರಣಗಳನ್ನು ಪರಿಶೀಲಿಸುತ್ತಿದೆ," ಎಂದು ಅವರು ಮತ್ತೊಂದು ಉತ್ತರದಲ್ಲಿ ತಿಳಿಸಿದ್ದಾರೆ.

"CBDCಯ ಪರಿಚಯವು ನಗದು ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದು, ಕಡಿಮೆ ವಹಿವಾಟು ವೆಚ್ಚಗಳಿಂದಾಗಿ ಹೆಚ್ಚಿನ ಸೆಗ್ನಿಯರೇಜ್ ಮುಂತಾದ ಗಮನಾರ್ಹ ಪ್ರಯೋಜನಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ," ಎಂದು ಅವರು ಹೇಳಿದರು.
ನೋಟುಗಳ ಮುದ್ರಣವು ನಿರ್ದಿಷ್ಟ ಅವಧಿಯಲ್ಲಿ ಇಳಿಮುಖವಾಗಿದೆ ಎಂದ ಅವರು, 2019-20ರ ಅವಧಿಯಲ್ಲಿ 4,378 ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಮುದ್ರಿಸಲಾಗಿದ್ದು, 2020-21ರಲ್ಲಿ 4,012 ಕೋಟಿ ರೂಪಾಯಿಗಳಿಗೆ ಇಳಿದಿದೆ. ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ದೇಶದ ಆರ್ಥಿಕ ಆರೋಗ್ಯವು ಹಲವು ಅಂಶಗಳನ್ನು ಒಳಗೊಂಡಿದೆ ಎಂದರು.
"ಸ್ಥಿರವಾದ ಸ್ಟಾಕ್ ಮಾರುಕಟ್ಟೆ ಜೊತೆಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮತ್ತು ಅತ್ಯಾಧುನಿಕ ಮಾರುಕಟ್ಟೆ ಮೂಲಸೌಕರ್ಯವು ದೇಶದ ಆರ್ಥಿಕ ಆರೋಗ್ಯವನ್ನು ನಿರ್ಣಯಿಸಲು ಒಂದು ಸೂಚಕವಾಗಿದೆ. ಷೇರು ಮಾರುಕಟ್ಟೆಗಳು ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಆರ್ಥಿಕ ಬೆಳವಣಿಗೆಯನ್ನು ಸೂಚಿಸುತ್ತವೆ. ಏಕೆಂದರೆ, ಸ್ಟಾಕ್ ಬೆಲೆಗಳು ಭವಿಷ್ಯದ ಕಾರ್ಪೊರೇಟ್ ಗಳಿಕೆಗಳ ಮೇಲೆ ಮಾರುಕಟ್ಟೆಯ ನಿರೀಕ್ಷೆಯನ್ನು ಪ್ರತಿಬಿಂಬಿಸುತ್ತವೆ,'' ಎಂದು ಸಚಿವ ಚೌಧರಿ ತಿಳಿಸಿದರು.
ಆದಾಗ್ಯೂ, ಅಲ್ಪಾವಧಿಯಲ್ಲಿ, ಷೇರು ಮಾರುಕಟ್ಟೆಗಳು ಹೆಚ್ಚಾಗಿ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಘಟನೆಗಳಿಂದ ನಡೆಸಲ್ಪಡುತ್ತವೆ. ಎಕ್ಸ್‌ಚೇಂಜ್‌ಗಳು ದಲ್ಲಾಳಿಗಳ ಮೇಲೆ ವಿನಿಮಯ ವಹಿವಾಟು ಶುಲ್ಕವನ್ನು ವಿಧಿಸುತ್ತವೆ. ಅದನ್ನು ಗ್ರಾಹಕರಿಗೆ ವರ್ಗಾಯಿಸಬಹುದು, ವಹಿವಾಟು ಶುಲ್ಕವನ್ನು ಬ್ರೋಕರ್ ಕ್ಲೈಂಟ್‌ಗೆ ನೀಡಿದ ಒಪ್ಪಂದದ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಉತ್ತರಿಸಿದರು.
ವಿನಿಮಯ ಕೇಂದ್ರಗಳು ವಿಧಿಸುವ ತೆರಿಗೆಗಳು ಸೇರಿದಂತೆ ಷೇರುಗಳ ಮಾರಾಟ ಮತ್ತು ಖರೀದಿಯ ಮೇಲೆ ವಿಧಿಸಲಾದ ತೆರಿಗೆಗಳನ್ನು ಬ್ರೋಕರ್ ಪ್ರತಿ ದಿನದ ವಹಿವಾಟಿನ ಕೊನೆಯಲ್ಲಿ ಗ್ರಾಹಕರಿಗೆ ನೀಡುವ ಒಪ್ಪಂದದ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದರು.


Click it and Unblock the Notifications