ಕಂಪೆನಿ ಮೇಲೆ ಬಂದ ಆರೋಪಕ್ಕೆ ಮೇಲ್ನೋಟಕ್ಕೆ ಸಾಕ್ಷ್ಯವಿಲ್ಲ: ಇನ್ಫೋಸಿಸ್

ಬೆಂಗಳೂರು, ನವೆಂಬರ್ 4: ಏಷ್ಯಾದ ಎರಡನೇ ಅತಿ ದೊಡ್ಡ ಐಟಿ ಸರ್ವೀಸಸ್ ಕಂಪೆನಿ ಇನ್ಫೋಸಿಸ್ ಮೇಲೆ ಈಚೆಗೆ ಬಂದಿದ್ದ ಆರೋಪವು ನಿರಾಧಾರ ಎಂದು ಹೇಳಿಕೊಳ್ಳಲಾಗಿದೆ. ಇನ್ಫೋಸಿಸ್ ಕಂಪೆನಿಯ ಟಾಪ್ ಮ್ಯಾನೇಜ್ ಮೆಂಟ್, ಅದರಲ್ಲೂ ಸಿಇಒ ಸಲೀಲ್ ಪಾರೇಖ್ ಹಾಗೂ ಸಿಎಫ್ ಒ ನೀಲಾಂಜನ್ ರಾಯ್ ಅನೈತಿಕ ಮಾರ್ಗದಲ್ಲಿ ಹೆಚ್ಚಿನ ಲಾಭ ತೋರಿಸುತ್ತಿದ್ದಾರೆ ಎಂದು ಅಮೆರಿಕದ ವಿಷಲ್ ಬ್ಲೋವರ್ ಆರೋಪ ಮಾಡಿದ್ದರು.

ಈ ಆರೋಪವು ಮೇಲ್ನೋಟಕ್ಕೇ ಆಧಾರರಹಿತವಾದುದು ಎಂಬುದು ಸಾಬೀತಾಗಿದೆ ಎಂದು ಇನ್ಫೋಸಿಸ್ ಸೋಮವಾರ ಹೇಳಿದೆ. ಕಂಪೆನಿಯು ಈ ಹೇಳಿಕೆ ನೀಡಿದ ಮೇಲೆ ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಇನ್ಫೋಸಿಸ್ ಷೇರುಗಳ ಮೌಲ್ಯದಲ್ಲಿ ಆರು ಪರ್ಸೆಂಟ್ ಏರಿಕೆ ಕಂಡಿದೆ.

ಅನಾಮಧೇಯ ದೂರಿನ ಬಗ್ಗೆ ಗೌರವದಿಂದಲೇ ಈ ಬಗ್ಗೆ ತಿಳಿಸುತ್ತಿದ್ದು, ಈ ತನಕ ಮಾಡಿರುವ ಆರೋಪದಲ್ಲಿ ಮೇಲ್ನೋಟಕ್ಕೆ ಯಾವುದೇ ಆಧಾರ ಇಲ್ಲ. ಯಾವುದೇ ಸನ್ನಿವೇಶದಲ್ಲಿ ಲೆಕ್ಕಪತ್ರ ಸಮಿತಿಯು ತನಿಖೆ ನಡೆಸಲು ಶಾರ್ದೂಲ್ ಅಮರ್ ಚಂದ್ ಮಂಗಲ್ ದಾಸ್ ಅಂಡ್ ಕಂಪೆನಿಯ ನೆರವು ಪಡೆಯಬಹುದು ಎಂದು ಇನ್ಫೋಸಿಸ್ ನಿಂದ ಸ್ಟಾಕ್ ಎಕ್ಸ್ ಚೇಂಜ್ ಗಳಿಗೆ ತಿಳಿಸಲಾಗಿದೆ.

ಕಂಪೆನಿ ಮೇಲೆ ಬಂದ ಆರೋಪಕ್ಕೆ ಮೇಲ್ನೋಟಕ್ಕೆ ಸಾಕ್ಷ್ಯವಿಲ್ಲ: ಇನ್ಫೋಸಿಸ್

ವಿಷಲ್ ಬ್ಲೋವರ್ ದೂರಿನಲ್ಲಿ ಮೇಲ್ನೋಟದ ಸಾಕ್ಷ್ಯ ಮಾತ್ರ ಅಲ್ಲ, ಯಾವುದೇ ನೆಲೆಗಟ್ಟು, ವಿಶ್ವಾಸಾರ್ಹತೆ ಮತ್ತು ವಾಸ್ತವ ಇಲ್ಲ ಎಂದು ಕೂಡ ಕಂಪೆನಿ ಹೇಳಿದೆ. ಆ ಕಾರಣಕ್ಕೆ ಸದ್ಯಕ್ಕೆ ಇನ್ಫೋಸಿಸ್ ಏನನ್ನೂ ಬಯಲು ಮಾಡುವ ಅಗತ್ಯ ಇಲ್ಲ. ಜತೆಗೆ ದೂರಿನ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ತನಿಖೆಯ ವರದಿ ಅಂತಿಮವಾದ ಮೇಲೆ ಮುಖ್ಯ ಮಾಹಿತಿಯನ್ನು ಸ್ಟಾಕ್ ಎಕ್ಸ್ ಚೇಂಜ್ ಗಳಿಗೆ ತಿಳಿಸಲಾಗುವುದು ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.

ಅಕ್ಟೋಬರ್ ಇಪ್ಪತ್ತೊಂದನೇ ತಾರೀಕಿನಂದು ಸಿಬ್ಬಂದಿಯ ಗುಂಪೊಂದು ಇನ್ಫೋಸಿಸ್ ಆಡಳಿತ ಮಂಡಳಿ ಹಾಗೂ ಯುಎಸ್ ಸೆಕ್ಯೂರಿಟೀಸ್ ಮತ್ತು ಎಕ್ಸ್ ಚೇಂಜ್ ಕಮಿಷನ್ ಗೆ ದೂರು ನೀಡಿತ್ತು. ಅಲ್ಪಾವಧಿ ಲಾಭ ಹಾಗೂ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಅನೈತಿಕವಾದ ದಾರಿ ಅನುಸರಿಸುತ್ತಿದೆ. ಈ ಆರೋಪವನ್ನು ಪುಷ್ಟೀಕರಿಸಲು ಇಮೇಲ್ ಗಳು, ವಾಯ್ಸ್ ರೆಕಾರ್ಡ್ ಗಳು ಇವೆ ಎಂದು ಹೇಳಿಕೊಳ್ಳಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+