ಕೊರೊನಾ ಲಾಕ್ ಡೌನ್ ವಿಸ್ತರಣೆಯ ಮಧ್ಯೆಯೂ ಏಪ್ರಿಲ್ 20ನೇ ತಾರೀಕಿನಿಂದ (ಸೋಮವಾರ) ಯಾವ್ಯಾವ ಸೇವೆ ಮತ್ತು ಚಟುವಟಿಕೆಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ ಎಂಬ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ಪಟ್ಟಿ ಬಿಡುಗಡೆ ಮಾಡಿದೆ. ದೇಶದ ಯಾವ ಭಾಗದಲ್ಲಿ ಕೊರೊನಾ ಪ್ರಮಾಣವು ಅತ್ಯಲ್ಪವಾಗಿದೆ ಅಥವಾ ಯಾವ ಪ್ರದೇಶವು ಕಡಿಮೆ ಬಾಧಿತವಾಗಿದೆಯೋ ಅಂಥಲ್ಲಿ ಈ ನಿಯಮ ಅನ್ವಯಿಸುತ್ತದೆ.
ಆರೋಗ್ಯ ಸೇವೆ, ಕೃಷಿ, ಮೀನುಗಾರಿಕೆ, ತೋಟಗಾರಿಕೆ ಹಾಗೂ ಪಶುಸಂಗೋಪನೆಯೂ ಒಳಗೊಂಡಂತೆ ವಿವಿಧ ವಲಯಗಳಿಗೆ ಈ ವಿನಾಯಿತಿ ಅನ್ವಯ ಆಗಲಿದೆ. ಆದರೆ ಎಲ್ಲೆಲ್ಲಿ ಕೊರೊನಾ ಇನ್ನೂ ಹತೋಟಿಗೆ ಬಂದಿಲ್ಲವೋ ಅಲ್ಲೆಲ್ಲ ಈ ಎಲ್ಲ ಸೇವೆಗಳು ಶುರು ಮಾಡಲು ಅನುಮತಿ ಇಲ್ಲ.

ಅಂದಹಾಗೆ, ಏಪ್ರಿಲ್ 20ರಿಂದ ಶುರು ಮಾಡಲು ಅವಕಾಶ ಮಾಡಿಕೊಟ್ಟಿರುವ ಸೇವೆ, ಚಟುವಟಿಕೆಗಳು ಹೀಗಿವೆ:
* ಎಲ್ಲ ಆರೋಗ್ಯ ಸೇವೆಗಳು (ಆಯುಷ್ ಒಳಗೊಂಡಂತೆ)
* ಎಲ್ಲ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳು
* ಮೀನುಗಾರಿಕೆ (ಸಮುದ್ರ/ಒಳನಾಡು)
* ಟೀ, ಕಾಫೀ, ರಬ್ಬರ್ ಪ್ಲಾಂಟೇಷನ್ ಚಟುವಟಿಕೆಗಳು (ಶೇಕಡಾ ಐವತ್ತರಷ್ಟು ಕಾರ್ಮಿಕರೊಂದಿಗೆ ಮಾತ್ರ)
* ಪಶು ಸಂಗೋಪನೆ
* ಆರ್ಥಿಕ ವಲಯ
* ಸಾಮಾಜಿಕ ವಲಯ
* ಕಡ್ಡಾಯ ಮಾಸ್ಕ್ ಹಾಗೂ ಸಾಮಾಜಿಕ ಅಂತರದ ನಿಯಮದೊಂದಿಗೆ ನರೇಗಾ ಕೆಲಸಗಳಿಗೆ ಅನುಮತಿ
* ಸಾರ್ವಜನಿಕ ಸೇವೆಗಳು
* ರಾಜ್ಯ ಹಾಗೂ ಅಂತರರಾಜ್ಯ ಸರಕು ಸಾಗಣೆ
* ಅಗತ್ಯ ವಸ್ತುಗಳ ಪೂರೈಕೆ
* ವಾಣಿಜ್ಯ ಹಾಗೂ ಖಾಸಗಿ ಸಂಸ್ಥೆಗಳು ಕಾರ್ಯ ನಿರ್ವಹಿಸಲು ಅವಕಾಶ
* ಸರ್ಕಾರಿ ಹಾಗೂ ಖಾಸಗಿ ಕಾರ್ಖಾನೆಗಳು
* ನಿರ್ಮಾಣ ಚಟುವಟಿಕೆ
* ತುರ್ತು ಅಗತ್ಯಗಳಿಗೆ ಖಾಸಗಿ ವಾಹನಗಳಿಗೆ ಅವಕಾಶ ಹಾಗೂ ಉದ್ಯೋಗಕ್ಕೆ ತೆರಳಲು ವೈಯಕ್ತಿಕವಾಗಿ ವಾಹನ ಬಳಸಲು ಅನುಮತಿ
* ಕೇಂದ್ರ ಸರ್ಕಾರಿ, ರಾಜ್ಯ ಸರ್ಕಾರಿ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಚೇರಿಗಳು ಕಾರ್ಯಾರಂಭಿಸುತ್ತವೆ.


Click it and Unblock the Notifications