ಮಾರುಕಟ್ಟೆಯು ಕುಸಿತದಲ್ಲಿದ್ದರೂ ಮಲ್ಟಿಬ್ಯಾಗರ್ ಸ್ಟಾಕ್ ಚೆನ್ನೈ ಪೆಟ್ರೋಲಿಯಂ ಗಗನಕ್ಕೇರುತ್ತಿದೆ. ಸೋಮವಾರ (ಮೇ 2) ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಸಿಪಿಸಿಎಲ್) ಷೇರು ಬೆಲೆ 307.15 ರೂ.ಗೆ ತಲುಪಿದೆ. ಸ್ಟಾಕ್ ಕಳೆದ ಕೆಲವು ಸಮಯದಿಂದ ಮಾರುಕಟ್ಟೆ ಓಟದಲ್ಲಿ ಮುಂಚೂಣಿಯಲ್ಲಿದೆ.
ಕಳೆದ 6 ತಿಂಗಳುಗಳಲ್ಲಿ, ಸಿಪಿಸಿಎಲ್ ಸ್ಟಾಕ್ 154.68 ಶೇಕಡಾ ಹೆಚ್ಚಳವನ್ನು ದಾಖಲಿಸಿದೆ. ಆದರೆ ಏರಿಕೆಯು ಕಳೆದ ಒಂದು ತಿಂಗಳಲ್ಲಿ 129.99 ಶೇಕಡಾ ಹೆಚ್ಚಳದೊಂದಿಗೆ ಅದೇ ವೇಗದಲ್ಲಿ ಮುಂದುವರೆದಿದೆ. ಕಳೆದ ಒಂದು ವರ್ಷದಲ್ಲಿ ಷೇರು ಬೆಲೆ ಶೇ.184ರಷ್ಟು ಏರಿಕೆಯಾಗಿದೆ.
ಸೋಮವಾರದಂದು ಸಿಪಿಸಿಎಲ್ ಷೇರಿನ ಬೆಲೆಯು 9.99 ಪ್ರತಿಶತದಷ್ಟು ಏರಿತು. ಎನ್‌ಎಸ್‌ಇ ಬೃಹತ್ ಡೀಲ್ ಡೇಟಾದ ಪ್ರಕಾರ ಏಸ್ ಹೂಡಿಕೆದಾರ ಡಾಲಿ ಖನ್ನಾ ಹೂಡಿಕೆಯ ಸುದ್ದಿಯ ನಂತರ ಶುಕ್ರವಾರ ಇದೇ ರೀತಿಯ ಏರಿಕೆ ಕಂಡು ಬಂದಿದೆ. ಡಾಲಿ ಖನ್ನಾ 10 ಲಕ್ಷ ಷೇರುಗಳನ್ನು ಖರೀದಿಸಿದ್ದಾರೆ. ಖನ್ನಾ ಪ್ರತಿ ಷೇರಿಗೆ 263.15 ರೂಪಾಯಿಯಂತೆ ಖರೀದಿ ಮಾಡಿದ್ದಾರೆ. ಷೇರಿನ ಮೌಲ್ಯವು ಸ್ವಲ್ಪ ಸಮಯದಲ್ಲೇ 30 ರೂ ಏರಿಕೆ ಕಂಡಿದೆ.

ಝೀ ಬಿಸಿನೆಸ್ ವರದಿಯ ಪ್ರಕಾರ, ಮಲ್ಟಿಬ್ಯಾಗರ್ ಸ್ಟಾಕ್, ಸಿಪಿಸಿಎಲ್ ಎಲ್ಲಾ ನಿಗದಿತ ಸಮಯದ ಚೌಕಟ್ಟಿನೊಳಗೆ 100% ನಷ್ಟು ಆದಾಯವನ್ನು ಮರಳಿ ಪಡೆದಿದೆ. ಮಲ್ಟಿಬ್ಯಾಗರ್ ಸ್ಟಾಕ್ ಮೂರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಮೂರು ಪಟ್ಟು ಹೆಚ್ಚು ಬೆಳೆದಿದೆ.
ಕೇವಲ 67 ದಿನಗಳಲ್ಲಿ 211.95 ರೂಪಾಯಿ ಹೆಚ್ಚಿದ ಷೇರು
ಫೆಬ್ರವರಿ 24 ರಂದು, ಸ್ವಲ್ಪ ಕುಸಿತದ ನಂತರ ಸ್ಟಾಕ್ ರೂ 95.20 ನಲ್ಲಿ ನಿಂತಿದ್ದರೆ, ಮೇ 2 ರಂದು ಸ್ಟಾಕ್ ರೂ 307.15 ಕ್ಕೆ 222 ಪ್ರತಿಶತದಷ್ಟು ಏರಿಕೆಯಾಗಿದೆ. ಇದರರ್ಥ, ಸ್ಟಾಕ್ ಮೌಲ್ಯವು ಕೇವಲ 67 ದಿನಗಳಲ್ಲಿ 211.95 ರೂಪಾಯಿ ಬೆಳೆದಿದೆ. ಕಂಪನಿಯ ನಿವ್ವಳ ಲಾಭವು 314.05 ಶೇಕಡಾದಿಂದ 1001.92 ಕೋಟಿಗೆ ಏರಿದೆ. ಹಿಂದಿನ ವರ್ಷದ ಅದೇ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದರೆ ಮಾರ್ಚ್ 2022 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 87.86 ಶೇಕಡಾ ಹೆಚ್ಚಳ ಕಂಡಿದೆ. 2021-2022ರ ಹಣಕಾಸು ವರ್ಷಕ್ಕೆ ಕಂಪನಿಯು ಪ್ರತಿ ಷೇರಿಗೆ ರೂ.2 ಲಾಭಾಂಶವನ್ನು ಶಿಫಾರಸು ಮಾಡಿದೆ.

ಕಂಪನಿಯ ಬಗ್ಗೆ ಮಾಹಿತಿ
ಸಿಪಿಸಿಎಲ್ ನ್ನು ಮೊದಲು ಮದ್ರಾಸ್ ರಿಫೈನರೀಸ್ ಲಿಮಿಟೆಡ್ (MRL) ಎಂದು ಕರೆಯಲಾಗುತ್ತಿತ್ತು. ಇದನ್ನು 1965 ರಲ್ಲಿ ಭಾರತ ಸರ್ಕಾರ ಎಎಂಒಸಿಒ ಮತ್ತು ನ್ಯಾಷನಲ್ ಇರಾನಿಯನ್ ಆಯಿಲ್ ಕಂಪನಿ (NIOC) ನಡುವಿನ ಜಂಟಿ ಉದ್ಯಮವಾಗಿ ಸ್ಥಾಪಿಸಿದೆ. ಇದು ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಅಂಗಸಂಸ್ಥೆಯಾಗಿದೆ. ಸಿಪಿಸಿಎಲ್ ಎರಡು ರಿಫನರಿಗಳನ್ನು ಹೊಂದಿದೆ. ಈ ರಿಫನರಿಗಳು ವಾರ್ಷಿಕವಾಗಿ 11.5 ಮಿಲಿಯನ್ ಟನ್ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ.
ಗಮನಿಸಿ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗಳು ಮಾರುಕಟ್ಟೆಯ ಅಪಾಯಕ್ಕೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಯೋಜನೆ-ಸಂಬಂಧಿತ ದಾಖಲೆಗಳು ಮತ್ತು ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ. ಮೇಲೆ ತಿಳಿಸಿದ ಮಾಹಿತಿಯು ಸಂಪೂರ್ಣವಾಗಿ ಒಂದು ಮಾಹಿತಿಯಷ್ಟೇ ಆಗಿದ್ದು, ನಾವು ಯಾವುದೇ ಲಾಭವನ್ನು ಖಾತರಿಪಡಿಸುವುದಿಲ್ಲ. ಈ ಲೇಖನದ ಆಧಾರದ ಮೇಲೆ ನೀವು ಯಾವುದೇ ಹೂಡಿಕೆಯನ್ನು ಮಾಡಿ ನಷ್ಟ ಉಂಟಾದರೆ ಅದಕ್ಕೆ ಈ ಲೇಖನ ಬರೆದವರು ಆಗಲಿ ಅಥವಾ ಗ್ರೇನಿಯಮ್ ಜವಾಬ್ದಾರಿಯಾಗುವುದಿಲ್ಲ.


Click it and Unblock the Notifications