ಭಾರತೀಯ ಷೇರು ಮಾರುಕಟ್ಟೆಯ ಟಾಪ್ ಹತ್ತು ಕಂಪೆನಿಯಲ್ಲಿ ಏಳು ಕಂಪೆನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯವು ಕಳೆದ ವಾರ 32,020.12 ಕೋಟಿ ಹೆಚ್ಚಾಗಿದೆ. ಎಚ್ ಡಿಎಫ್ ಸಿ ಬ್ಯಾಂಕ್, ರಿಲಯನ್ಸ್ ಕಂಪೆನಿಗಳ ಮೌಲ್ಯದಲ್ಲಿ ಭಾರೀ ಏರಿಕೆ ಆಗಿದೆ. ಟಿಸಿಎಸ್, ಎಚ್ ಡಿಎಫ್ ಸಿ, ಎಚ್ ಯುಎಲ್, ಐಸಿಐಸಿಐ ಬ್ಯಾಂಕ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಕಂಪೆನಿಗಳ ಷೇರು ಮೌಲ್ಯದಲ್ಲೂ ಉತ್ತಮ ಏರಿಕೆ ಆಗಿದೆ.
ಆದರೆ, ಇನ್ಫೋಸಿಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಟಿಸಿ ಕಂಪೆನಿಗಳ ಷೇರುಗಳು ನಷ್ಟ ಕಂಡಿವೆ. ಹಾಗಿದ್ದರೆ ಮಾರುಕಟ್ಟೆ ಬಂಡವಾಳ ಹೆಚ್ಚಾದ ಕಂಪೆನಿಗಳು ಮತ್ತು ಅವುಗಳ ಮೊತ್ತದ ವಿವರ ಇಲ್ಲಿದೆ.
ಎಚ್ ಡಿಎಫ್ ಸಿ ಬ್ಯಾಂಕ್ 8,270.31 ಕೋಟಿ
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 6,642.47 ಕೋಟಿ
ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ 5,412.03 ಕೋಟಿ
ಕೊಟಕ್ ಮಹೀಂದ್ರಾ ಬ್ಯಾಂಕ್ 5,092.83 ಕೋಟಿ
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 5,046.96 ಕೋಟಿ
ಐಸಿಐಸಿಐ ಬ್ಯಾಂಕ್ 985.65 ಕೋಟಿ
ಎಚ್ ಡಿಎಫ್ ಸಿ 587.87 ಕೋಟಿ

ಟಾಪ್ ಟೆನ್ ಕಂಪೆನಿಗಳ ಪಟ್ಟಿ ಹೀಗಿದೆ: ರಿಲಯನ್ಸ್, ಟಿಸಿಎಸ್, ಎಚ್ ಡಿಎಫ್ ಸಿ ಬ್ಯಾಂಕ್, ಎಚ್ ಡಿಎಫ್ ಸಿ, ಎಚ್ ಯುಎಲ್, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಇನ್ಫೋಸಿಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಟಿಸಿ.


Click it and Unblock the Notifications