ವಿಶ್ವದಲ್ಲಿ ಖ್ಯಾತ ಉದ್ಯಮಿಗಳು ತಮ್ಮ ಉದ್ಯಮವನ್ನು ಹೆಮ್ಮರವಾಗಿ ಬೆಳಸಿದ್ದಾರೆ. ಈ ಮೂಲಕ ತಮ್ಮ ಖಜಾನೆಯನ್ನು ಸಹ ತುಬಿಕೊಂಡಿದ್ದಾರೆ. ಈ ಪಟ್ಟಿಯನ್ನು ಮಾಡುತ್ತಾ ಹೋದರೆ ಬೆಳೆಯುತ್ತಲೇ ಹೋಗುತ್ತದೆ. ವಿಶ್ವದ ನಾನಾ ದೇಶಗಳು ಅರಬ್‌ಪತಿಗಳಿಗೆ ಆತಿಥ್ಯ ನೀಡಿದೆ.
ಬಿಲೆನಿಯರ್‌ಗಳ ಪಟ್ಟಿಯನ್ನು ಒಮ್ಮೆ ಕಾಣು ಹಾಯಿಸಿದರೆ ಹಲವು ದೇಶಗಳ ಪ್ರಮುಖ ಪಟ್ಟಣದ ಹೆಸರುಗಳು ಕಾಣುತ್ತವೆ. ಅದರಲ್ಲಿ ಭಾರತದ ಮುಂಬೈ ಸಹ ಸೇರಿದೆ. ಈಗ ವಿಶ್ವ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸಿರುವ ಬೆಂಗಳೂರಿಗೆ ಈ ಪಟ್ಟಿಯಲ್ಲಿ ಸ್ಥಾನ ಇದೆಯಾ ಎಂಬ ಕುತೂಹಲ ಬೆಳೆಯುವುದು ಸಾಮಾನ್ಯ.

ವಿಶ್ವದಲ್ಲಿ ಅತ್ಯಂತ ಹೆಚ್ಚು ಶ್ರೀಮಂತರಿಗೆ ಆಶ್ರಯ ನೀಡಿರುವ ಶಹರಗಳ ಪಟ್ಟಿ ಇಲ್ಲಿದೆ.
ಅಂಕಿ ಅಂಶಗಳ ಪ್ರಕಾರ ಅತಿ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿದ ವಿಶ್ವದ ನಗರ ಪಟ್ಟಿಯಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಭಾರತದ ರಾಜಧಾನಿ ದೆಹಲಿಗೆ 10 ನೇ ಸ್ಥಾನ. ಈ ಎರಡು ನಗರಗಳಲ್ಲಿ ಒಟ್ಟು 37 ಬಿಲಿಯನೇರ್‌ಗಳು ವಾಸಿಸುತ್ತಿದ್ದಾರೆ.
ಒಟ್ಟು 46 ಬಿಲಿಯನೇರ್‌ಗಳಿಗೆ ಆಶ್ರಯ ನೀಡಿರುವ ಸಿಂಗಾಪುರಗೆ ಪಟ್ಟಿಯಲ್ಲಿ 9 ನೇ ಸ್ಥಾನ. ಚೀನಾದ ಶೆನ್‌ಜೆನ್ ನಗರದಲ್ಲಿ ಒಟ್ಟು 54 ಬಿಲಿಯನೇರ್‌ಗಳು ವಾಸಿಸುತ್ತಿದ್ದು ಈ ನಗರ ಎಂಟನೇ ಸ್ಥಾನವನ್ನು ಹೊಂದಿದೆ.

ಮುಂಬೈಗೆ ಎಷ್ಟನೇ ಸ್ಥಾನ?
ಭಾರತದ ಆರ್ಥಿಕ ರಾಜಧಾನಿ ಎಂದೇ ಕರೆಯಲ್ಪಡುವ ಮುಂಬೈನ ಹೆಸರು ಪಟ್ಟಿಯಲ್ಲಿದೆ. ಮುಂಬೈ ಪಟ್ಟಣದಲ್ಲಿ ವಾಸಿಸುವ ಕೋಟ್ಯಾಧಿಪತಿಗಳ ಸಂಖ್ಯೆ 56 ಆಗಿದ್ದು, ಇದು ವಿಶ್ವದಲ್ಲಿ 7 ನೇ ಸ್ಥಾನ ಪಡೆದಿದೆ. ರಷ್ಯಾದ ಮಾಸ್ಕೋದಲ್ಲಿ ಒಟ್ಟು 61 ಬಿಲಿಯನೇರ್‌ಗಳನ್ನು ಹೊಂದಿದ್ದು, ಆರನೇ ಸ್ಥಾನದಲ್ಲಿದೆ.
ಚೀನಾದ ಎಷ್ಟು ಪಟ್ಟಣಗಳಿಗೆ ಸ್ಥಾನ?
ಲಂಡನ್ ಹೆಸರು ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಇಲ್ಲಿ ಒಟ್ಟು 63 ಬಿಲಿಯನೇರ್‌ಗಳು ವಾಸಿಸುತ್ತಿದ್ದಾರೆ. ಚೀನಾದ ಶಾಂಘೈನಲ್ಲಿ ಒಟ್ಟು 65 ಬಿಲಿಯನೇರ್‌ಗಳು ವಾಸಿಸುತ್ತಿದ್ದು ನಾಲ್ಕನೇ ಸ್ಥಾನದಲ್ಲಿದೆ. ಬೀಜಿಂಗ್‌ನಲ್ಲಿ ವಾಸಿಸುತ್ತಿರುವ ಬಿಲಿಯನೇರ್‌ಗಳ ಸಂಖ್ಯೆ 68 ಆಗಿದ್ದು, ಈ ಪಟ್ಟಣಕ್ಕೆ ಪಟ್ಟಿಯಲ್ಲಿ ಮೂರನೇ ಸ್ಥಾನವಿದೆ.
ನ್ಯೂಯಾರ್ಕ್‌ಗೆ ಅಗ್ರ ಪಟ್ಟ
ಹಾಂಗ್ ಕಾಂಗ್ ಕಾನ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಒಟ್ಟು 70 ಕೋಟ್ಯಾಧಿಪತಿಗಳು ಇಲ್ಲಿ ವಾಸಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನಗರದ ಹೆಸರು ನ್ಯೂಯಾರ್ಕ್. ಅಮೆರಿಕದ ಈ ನಗರದಲ್ಲಿ ಒಟ್ಟು 101 ಬಿಲಿಯನೇರ್‌ಗಳು ವಾಸಿಸುತ್ತಿದ್ದಾರೆ.

ಈ ಪಟ್ಟಿಯಲ್ಲಿ ಬೆಂಗಳೂರಿನ ಹೆಸರು ಕಾಣಿಸಿಕೊಳ್ಳುವುದಿಲ್ಲ. ಆದರೆ ಭಾರತದ ವಿಚಾರಕ್ಕೆ ಬಂದಾಗ ಬೆಂಗಳೂರಿನ ಹೆಸರು ಮೂರನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಭಾರತದಲ್ಲಿ ಅತಿ ಹೆಚ್ಚು ಕೋಟ್ಯಾಧಿಶರು ಇರುವ ನಗರಗಳಲ್ಲಿ ಬೆಂಗಳೂರಿಗೆ ಮೂರನೇ ಸ್ಥಾನ.


Click it and Unblock the Notifications