ಬೆಂಗಳೂರು: ಕೆಲಸವಿದ್ದರೆ ಕೈ ತುಂಬಾ ಕೆಲಸ, ಇಲ್ಲವಾದರೇ ಇಲ್ಲ ರೈತಾಪಿ ಜನರ ಬದುಕೇ ಹೀಗೆ..ಅದರಲ್ಲೂ ವ್ಯವಸಾಯ ನಂಬಿಕೊಂಡ ರೈತರಿಗೆ ಉಳುಮೆ , ಬಿತ್ತನೆ ಕಟಾವು ಎಂದು ಆರು ತಿಂಗಳು ವಿಶ್ರಾಂತಿರಹಿತ ಕೆಲಸವಿದ್ದರೆ, ಮುಂದಿನ ಕೆಲ ತಿಂಗಳು ಕೆಲಸವಿಲ್ಲದ ಸ್ಥಿತಿ. ಅದರಲ್ಲೂ ಅತಿವೃಷ್ಟಿ, ಅನಾವೃಷ್ಟಿ ಕಾಡಿತೆಂದರೆ ಸಂಕಷ್ಟ ರೈತರ ಬೆನ್ನು ಬಿದ್ದಂತೆ ಸರಿ.! ಇನ್ನು ಮಹಿಳಾ ರೈತ ಕೂಲಿ ಕಾರ್ಮಿಕರ ಸ್ಥಿತಿ ಕೇಳುವವರೇ ಇಲ್ಲ. ಇಂತಹ ಸಮಸ್ಯೆಗಳನ್ನು ಮೆಟ್ಟಿನಿಂತ ರಾಯಚೂರಿನ ರೈತಾಪಿ ಮಹಿಳಾ ಕಾರ್ಮಿಕರ ಸ್ಟೋರಿ ಇಲ್ಲಿದೆ.
ಮಹಿಳಾ ಕಾರ್ಮಿಕರು ಈಗ ಮಹಿಳಾ ಉದ್ಯಮಿಗಳಾಗುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೃಷಿ ಚಟುವಟಿಕೆಗಳಿರುವ ಆರು ತಿಂಗಳಿನ ಆದಾಯವನ್ನು ಮಾತ್ರ ನಂಬದೇ ವರ್ಷಪೂರ್ತಿ ಆದಾಯ ಗಳಿಸುವ ಉದ್ಯಮಶೀಲ ಚಟುವಟಿಗಳತ್ತ ಮುಖ ಮಾಡಿದ್ದಾರೆ.

ರಾಯಚೂರಿನ ಮಾನ್ವಿ ತಾಲೂಕಿನ ಜಾಗೀರ್ ಪನ್ನೂರು ಗ್ರಾಮದಲ್ಲಿ ಕೃಷಿ ಕಾರ್ಮಿಕರಾಗಿ ಆರು ತಿಂಗಳ ಕಾಲ ಕೆಲಸ ಮಾಡಿದ ಬಳಿಕ 38 ವರ್ಷದ ಶಿರೋಮಣಿಯವರು ವರ್ಷಪೂರ್ತಿ ಮನೆಯಲ್ಲೇ ಇರಬೇಕಾಗಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ಕೃಷಿ ಚಟುವಟಿಕೆಗಳಿಲ್ಲದ ಉಳಿದ ಆರು ತಿಂಗಳುಗಳಲ್ಲಿ ಸದಾ ಚಟುವಟಿಕೆಯಿಂದ ಇರುವ ಜೊತೆಗೆ ಲಾಭವನ್ನು ನೀಡುವಂತ ವೃತ್ತಿಯನ್ನು ಕಂಡುಹಿಡಿದ್ದಾರೆ. ತಮ್ಮ ಗ್ರಾಮದಲ್ಲಿ ಆರು ತಿಂಗಳ ಕಾಲ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುವ ಶಿರೋಮಣಿ ಅವರು ಇದಾದ ಬಳಿಕ ಗರಿಗರಿಯಾದ ಜೋಳದ ಖಡಕ್ ರೊಟ್ಟಿ ಉತ್ಪಾದಿಸುವ ವ್ಯವಹಾರದಲ್ಲಿ ತೊಡಗಿಕೊಳ್ಳುತ್ತಾರೆ.
ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆದ ಗ್ರಾಮೀಣ ವ್ಯವಹಾರಗಳ ಉತ್ಪನ್ನಗಳನ್ನು ಮಾರಾಟ ಮಾಡುವ ಕಾರ್ಯಕ್ರಮದಲ್ಲಿ ಇತರ ಐದು ಗ್ರಾಮೀಣ ಸಹಉದ್ಯಮಿಗಳೊಂದಿಗೆ ಶಿರೋಮಣಿ ಅವರು ತಮ್ಮ ಪಾಕ ವೈವಿದ್ಯತೆಯನ್ನು ಗ್ರಾಹಕರಿಗೆ ಉಣಬಡಿಸಿದರು. ಎರಡು ಜೋಳದ ರೊಟ್ಟಿ ಅದರ ಜೊತೆಗೆ ಗೊಂಗುರ (ಕೆಂಪು ಸೋರ್ರೆಲ್ ಎಲೆಗಳು) ಚಟ್ನಿ, ಒಣ ಕಡಲೆಕಾಯಿ ಚಟ್ನಿ ಮತ್ತು ಸೂರ್ಯಕಾಂತಿ ಬೀಜದ ಚಟ್ನಿ ಇರುವ ಪ್ಲೇಟ್ ಗೆ 100 ರೂ.ಗೆ ಸವಿಯಲು ನೀಡಿದರು. ಶಿರೋಮಣಿ ಅವರ ಮಕ್ಕಳಿ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿರುವ ಕಾರಣ ಕೆಲವೊಮ್ಮೆ ಉತ್ಪನ್ನಗಳನ್ನು ಮಾರಾಟ ಮಾಡಲು ತಾಯಿಗೆ , ಸಹಾಯಮಾಡುತ್ತಾರೆ.
" ನಾವೇ ಜೋಳವನ್ನು ಬೆಳೆಸುತ್ತೇವೆ, ಚೆನ್ನಾಗಿ ಶುಚಿಗೊಳಿಸಿ ಒಣಗಿಸಿ ಉತ್ತಮ ಜೋಳ ಆಯ್ದು ಅದನ್ನು ಕಿಲೋಗೆ 10 ರೂ.ವಿನಂತೆ ರುಬ್ಬಲು ಗಿರಣಿಗೆ ನೀಡುತ್ತೇವೆ. ಈ ವ್ಯಾಪಾರ ಲಾಭದಾಯಕವಾಗಿದ್ದು ನಮ್ಮ ಉತ್ಪನ್ನಗಳಾದ ರೊಟ್ಟಿ ಮತ್ತು ಚಟ್ನಿಗಳನ್ನು ಮಾರಾಟ ಮಾಡಲು ಬೆಂಗಳೂರು ನಗರಕ್ಕೆ ಎರಡನೇ ಬಾರಿಗೆ ಬಂದಿದ್ದೇವೆ" ಎಂದು ಹೇಳುತ್ತಾರೆ ಶಿರೋಮಣಿ.
ಶಿರೋಮಣಿಯವರ ಜೊತೆಗೆ ವ್ಯವಹಾರಕ್ಕೆ ನೆರವಾಗಲು ಈ ಬಾರಿ ಅವರ ಪೇಂಟರ್ ಉದ್ಯೋಗದಲ್ಲಿರುವ ಅವರ ಪತಿ, ಅವರ ನೆರೆ ಮನೆಯವರಾದ ರೆಜಿನಮ್ಮ(30) ಜೊತೆಯಾಗಿದ್ದರು. ರೆಜಿನಮ್ಮ ಗೊಂಗುರ ಚಟ್ನಿ ಜೊತೆಗೆ ಒಣ ಚಟ್ನಿ ಪುಡಿಗಳನ್ನು ಒದಗಿಸಿ ಇವರ ವ್ಯವಹಾರಕ್ಕೆ ಸಾಥ್ ನೀಡುತ್ತಾರೆ. ರೆಜಿನಮ್ಮ ಅವರ ಮಕ್ಕಳು ಚಿಕ್ಕವರಾಗಿರುವ ಕಾರಣ ಮಕ್ಕಳು ಮತ್ತು ಪತಿ ರಾಯಚೂರಿನಲ್ಲಿದ್ದಾರೆ. ಪತಿ ಋತುವಿನಲ್ಲಿ ಹೊಲಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಇಲ್ಲದಿದ್ದರೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಾರೆ. "ನಾನು ಮಾಡುವ ಗೊಂಗುರ ಚಟ್ನಿ ಪ್ರಿಡ್ಜ್ ನಲ್ಲಿ ಇಡುವ ಅಗತ್ಯವಿಲ್ಲದೇ ಒಂದು ವಾರದ ಕಾಲ ಕೆಡದಂತೆ ಇರುತ್ತದೆ. ಇದನ್ನು ಪ್ರಿಡ್ಜ್ ನಲ್ಲಿಟ್ಟು ಒಂದು ತಿಂಗಳ ಕಾಲ ಬಳಸಬಹುದಾಗಿದೆ. ಇದಲ್ಲದೇ ತಾವು ತಯಾರಿಸುವ ಒಣ ಚಟ್ನಿಗಳಿಗೆ ಮುಂಬೈ, ಬೆಂಗಳೂರು ಮತ್ತು ಮಂಗಳೂರಿನಲ್ಲಿ ಬಹಳ ಬೇಡಿಕೆ ಇದೆ ಎನ್ನುತ್ತಾರೆ ರೆಜಿನಮ್ಮ.
ಬೆಂಬಲವಾಗಿ ನಿಂತ ಲೊಯೊಲಾ ಸೆಂಟರ್ ಫಾರ್ ಸೋಶಿಯಲ್ ಕನ್ಸರ್ನ್
ಇದು ಮಹಿಳಾ ಕೃಷಿ ಕಾರ್ಮಿಕರಿಗೆ ಉದ್ಯಮಶೀಲತಾ ಕೌಶಲ್ಯಗಳಲ್ಲಿ ತರಬೇತಿ ನೀಡಲು ಲೊಯೊಲಾ ಸೆಂಟರ್ ಫಾರ್ ಸೋಶಿಯಲ್ ಕನ್ಸರ್ನ್ ಬೆಂಬಲವಾಗಿ ನಿಂತಿದೆ. ರಾಯಚೂರು ಜಿಲ್ಲೆಯ ಮಹಿಳಾ ಕೃಷಿ ಕಾರ್ಮಿಕರಿಗೆ ಉದ್ಯಮಶೀಲ ಚಟುವಟಿಕೆಗಳಲ್ಲಿ ತರಬೇತಿ ನೀಡಲು ರಾಯಚೂರಿನಲ್ಲಿರುವ ಎಸ್‌ಬಿಐನ ಸಿಎಸ್‌ಆರ್ ವಿಂಗ್‌ನೊಂದಿಗೆ ತಮ್ಮ ಎನ್‌ಜಿಒ ಸಹಯೋಗ ಹೊಂದಿದೆ ಎಂದು ಹೇಳುತ್ತಾರೆ ಲೊಯೋಲಾ ಸೆಂಟರ್ ಫಾರ್ ಸೋಶಿಯಲ್ ಕನ್ಸರ್ನ್‌ನ ನಿರ್ದೇಶಕ ಫಾ. ಡಾನ್ ಪ್ರೇಮ್ ಲೋಬೋ. ಯಂತ್ರೋಪಕರಣಗಳನ್ನು ಒದಗಿಸಲು ಫಲಾನುಭವಿಗಳಿಗೆ ನಾವು ಸಹಾಯ ಮಾಡುತ್ತೇವೆ. ಈ ಕಾರ್ಯಕ್ರಮಕ್ಕಾಗಿ 400 ಕಡಕ್ ರೊಟ್ಟಿಗಳನ್ನು ತಯಾರಿಸಲು ಯಂತ್ರೋಪಕರಣಗಳು ಸಹಾಯ ಪಡೆದುಕೊಂಡಿದ್ದೇನೆ ಎನ್ನುತ್ತಾರೆ ಶಿರೋಮಣಿ .
ವಲಸೆಯನ್ನು ತಡೆಗಟ್ಟಲು ಉದ್ಯಮಶೀಲತಾ ಚಟುವಟಿಕೆಗಳನ್ನು ಗ್ರಾಮಮಟ್ಟದಲ್ಲಿ ಪ್ರೋತ್ಸಾಹಿಸಲಾಗುತ್ತದೆ. ಜನರು ದೊಡ್ಡ ನಗರಗಳಿಗೆ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಬಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದ್ದರಿಂದ ನಾವು ವರ್ಷದಲ್ಲಿ ಸುಮಾರು 100 ಯುವಕ್/ಯುವತಿಯರಿಗೆ ತರಬೇತಿ ನೀಡುತ್ತೇವೆ. ಇವರ ಉತ್ಪನ್ನಗಳನ್ನು ಮಾರಾಟ ಮಾಡಲು, ಅವರ ವ್ಯಾಪಾರವನ್ನು ಉಳಿಸಿಕೊಳ್ಳಲು ಅವರಿಗೆ ಉಚಿತ ಮಾರುಕಟ್ಟೆಯನ್ನು ಒದಗಿಸುತ್ತೇವೆ" ಎಂದು ತಮ್ಮ ಈ ಯೋಜನೆಗಳ ಕುರಿತು ಫಾ.ಲೋಬೊ ವಿವರಿಸುತ್ತಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications