ಈ ಮಾವಿನ ಹಣ್ಣು ಒಂದಕ್ಕೇ 500 ರುಪಾಯಿ; ಏನಿದರ ವಿಶೇಷ ಗೊತ್ತೆ?

ಬೇಸಿಗೆ ಬಂತೆಂದರೆ ಬಿಸಿಲಿನ ತೀಕ್ಷ್ಣತೆಗೆ ಅದೆಷ್ಟು ಶಾಪ ಹಾಕಿಕೊಂಡರೂ ಮಾವಿನ ಹಣ್ಣಿನ ಸ್ವಾದವನ್ನು ಸವಿಯುವ ಸಲುವಾಗಿ ಬೇಸಿಗೆಯನ್ನು ಬಯಸುವವರು ಅದೆಷ್ಟು ಮಂದಿ ಹೇಳಿ. ಮಾವಿನ ಹಣ್ಣಿನಲ್ಲಿ ವಿಟಮಿನ್ ಎ, ಕಾಪರ್, ಐರನ್ ಮತ್ತು ಪೊಟ್ಯಾಷಿಯಂ ಅಂಶಗಳು ಇರುತ್ತವೆ. ಆದ್ದರಿಂದಲೇ ಅದನ್ನು 'ಹಣ್ಣುಗಳ ರಾಜ' ಎನ್ನಲಾಗುತ್ತದೆ.

ಮಾವಿನ ಹಣ್ಣಿನಲ್ಲಿ ನಾನಾ ತಳಿಗಳಿವೆ. ಆದರೆ ಆ ಪೈಕಿ ಒಂದನ್ನು 'ಮಾವಿನ ಹಣ್ಣುಗಳ ರಾಣಿ' ಎಂದು ಕರೆಯಲಾಗುತ್ತಿದೆ. ಈ ಲೇಖನದಲ್ಲಿ ಅತ್ಯಂತ ಖ್ಯಾತವಾದ 'ನೂರ್ ಜಹಾನ್' ಬಗ್ಗೆ ತಿಳಿಸಲಾಗುತ್ತಿದೆ. ಅಫ್ಗಾನಿಸ್ತಾನ ಮೂಲದ ಈ ತಳಿ ಬಲು ವಿರಳ. ಇವು ಮಧ್ಯಪ್ರದೇಶದ ಅಲಿರಾಜ್ ಪುರ್ ಜಿಲ್ಲೆಯಲ್ಲಿ ದೊರೆಯುತ್ತವೆ.

ಈ ಮಾವಿನ ಹಣ್ಣಿನ ಬೀಜದ ತೂಕವೇ 150ರಿಂದ 200 ಗ್ರಾಮ್ ತೂಗುತ್ತದೆ. ಒಂದು ಅಡಿ ತನಕ ಬೆಳೆಯುತ್ತದೆ. ಇದರ ವಿಶೇಷತೆಗಾಗಿ ಬೆಲೆಯು 500 ರುಪಾಯಿ ತನಕ ಆಗುತ್ತದೆ. 2.5 ಕೇಜಿ ತೂಗುವ ಹಣ್ಣು, ಒಂದು ಹಣ್ಣು 3.5 ಕೇಜಿಯಿಂದ 3.75 ಕಿಲೋಗ್ರಾಮ್ ತೂಗುತ್ತಂತೆ.

ಈ ಮಾವಿನ ಹಣ್ಣು ಒಂದಕ್ಕೇ 500 ರುಪಾಯಿ; ಏನಿದರ ವಿಶೇಷ ಗೊತ್ತೆ?

ಕಳೆದ ವರ್ಷ ಪ್ರಾಕೃತಿಕ ವಿಕೋಪದಿಂದ 'ನೂರ್ ಜಹಾನ್' ಇಳುವರಿ ಸರಿಯಾಗಿ ಆಗಿರಲಿಲ್ಲ. ಆದರೆ ಈ ವರ್ಷ ದೊಡ್ಡ ಪ್ರಮಾಣದಲ್ಲಿ ಹಣ್ಣಿನ ಫಸಲು ಬಂದಿದೆ. ಮಾವಿನ ಹಣ್ಣಿನ ಉತ್ಪಾದನೆಯಲ್ಲಿ ಭಾರತಕ್ಕೆ ಪ್ರಮುಖ ಸ್ಥಾನ. ಇಡೀ ವಿಶ್ವದಲ್ಲಿ 1400ಕ್ಕೂ ಹೆಚ್ಚು ಬಗೆಯ ಹಣ್ಣುಗಳು ಕಂಡೂಬಂದರೆ, ಆ ಪೈಕಿ 1 ಸಾವಿರ ಬಗೆಯ ಹಣ್ಣು ಭಾರತದಲ್ಲೇ ಬೆಳೆಯುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+