ಪ್ರತಿ ತಿಂಗಳ ಆರಂಭದಿಂದ ಕೆಲವು ಹೊಸ ಸರ್ಕಾರಿ ನಿಯಮಗಳು ಜಾರಿಗೆ ಬರುತ್ತವೆ. ಈ ಬಾರಿಯೂ ಇಂತಹ ಹಲವು ನಿಯಮಗಳು ಮಾರ್ಚ್ 1ರಿಂದ ಜಾರಿಗೆ ಬರುತ್ತಿದ್ದು, ಇದು ನೇರವಾಗಿ ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರಲಿದೆ.
ಫಾಸ್ಟ್ಯಾಗ್‌ನ KYC ಅನ್ನು ನವೀಕರಿಸಲು ಕೊನೆಯ ದಿನಾಂಕವನ್ನು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು (NHAI) ಫೆಬ್ರವರಿ 29 ಎಂದು ನಿಗದಿಪಡಿಸಿದೆ. ಈ ದಿನಾಂಕದೊಳಗೆ ನಿಮ್ಮ ಫಾಸ್ಟ್ಯಾಗ್‌ನ KYC ಅನ್ನು ನೀವು ಅಪ್‌ಡೇಟ್ ಮಾಡದೇ ಇದ್ದರೆ, ನಿಮ್ಮ ಫಾಸ್ಟ್ಯಾಗ್ ಅನ್ನು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ನಿಷ್ಕ್ರಿಯಗೊಳಿಸಬಹುದು ಮತ್ತು ಕಪ್ಪುಪಟ್ಟಿಗೆ ಸೇರಿಸಬಹುದು. ನಿಮ್ಮ ಫಾಸ್ಟ್ಯಾಗ್ KYC ಅನ್ನು ಫೆಬ್ರವರಿ 29 ರ ಮೊದಲು ಮಾಡಿಸಬೇಕಾಗುತ್ತದೆ.

ಪ್ರತಿ ತಿಂಗಳ ಆರಂಭದಲ್ಲಿ, ಎಲ್‌ಪಿಜಿ ಬೆಲೆಯನ್ನು ಸರ್ಕಾರವು ಪರಿಶೀಲಿಸುತ್ತದೆ ಮತ್ತು ಹೊಸ ಬೆಲೆಗಳನ್ನು ಬಿಡುಗಡೆ ಮಾಡುತ್ತದೆ. ಫೆಬ್ರವರಿ ಆರಂಭದಲ್ಲಿ ಎಲ್‌ಪಿಜಿ ಬೆಲೆಯನ್ನು ಹಿಂದಿನಂತೆ ಇರಿಸಲಾಗಿತ್ತು. 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ದೆಹಲಿಯಲ್ಲಿ ರೂ 1053, ಮುಂಬೈನಲ್ಲಿ ರೂ 1052.50, ಬೆಂಗಳೂರಿನಲ್ಲಿ ರೂ 1055.50, ಚೆನ್ನೈನಲ್ಲಿ ರೂ 1068.50 ಮತ್ತು ಹೈದರಾಬಾದ್‌ನಲ್ಲಿ ಪ್ರತಿ ಸಿಲಿಂಡರ್‌ಗೆ ರೂ 1,105.00. ಈ ದರದಲ್ಲೂ ವ್ಯತ್ಯಾಸವನ್ನು ಕಾಣವಹುದಾಗಿದೆ.
ಸರ್ಕಾರ ಇತ್ತೀಚೆಗೆ ಐಟಿ ನಿಯಮಗಳನ್ನು ಬದಲಾಯಿಸಿದೆ. ಇದರ ನಂತರ, X, Facebook, YouTube ಮತ್ತು Instagram ನಂತಹ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ಈ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಮಾರ್ಚ್‌ನಿಂದ ಯಾವುದೇ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸುದ್ದಿಗಳೊಂದಿಗೆ ಪ್ರಸಾರ ಮಾಡಿದರೆ, ಅದಕ್ಕೆ ದಂಡ ವಿಧಿಸಲಾಗುತ್ತದೆ. ಈ ಮೂಲಕ ಸಾಮಾಜಿಕ ಜಾಲತಾಣಗಳನ್ನು ಸುರಕ್ಷಿತಗೊಳಿಸುವುದು ಸರ್ಕಾರದ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ.
ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಮಾರ್ಚ್ 2023 ರಲ್ಲಿ ಸುಮಾರು 12 ದಿನಗಳವರೆಗೆ ಮುಚ್ಚಿರುತ್ತವೆ. ಇದರಲ್ಲಿ ಶನಿವಾರ ಮತ್ತು ಭಾನುವಾರದ ಎರಡು ರಜೆಗಳೂ ಸೇರಿವೆ.


Click it and Unblock the Notifications