2020ನೇ ಇಸವಿಯಲ್ಲಿ ಮಾರ್ಚ್ ನಲ್ಲಿ ತಲುಪಿದ್ದ ತಳ ಮಟ್ಟದಿಂದ ಷೇರು ಮಾರುಕಟ್ಟೆಯು ಈ ವರ್ಷ ಅದ್ಭುತ ಗಳಿಕೆ ಕಂಡಿದೆ. ಸೆನ್ಸೆಕ್ಸ್, ನಿಫ್ಟಿ ಎರಡಂಕಿಯ ಏರಿಕೆ ಕಂಡಿದೆ. ಈ ವರ್ಷದ ಆರಂಭಕ್ಕೆ ಹೋಲಿಸಿದರೆ ಬಿಎಸ್ ಇಯಲ್ಲಿ 200ರಷ್ಟು ಷೇರುಗಳು 100 ಪರ್ಸೆಂಟ್ ಗೂ ಹೆಚ್ಚು ಏರಿಕೆ ಕಂಡಿವೆ.
2020ರಲ್ಲಿ ಬಯೋಫಿಲ್ ಕೆಮಿಕಲ್ಸ್ ಅಂಡ್ ಫಾರ್ಮಾಸ್ಯುಟಿಕಲ್ಸ್ ದೊಡ್ಡ ಮಟ್ಟದ ಸಂಪತ್ತು ಸೃಷ್ಟಿಸಿದೆ. ಕಳೆದ ವರ್ಷ ಡಿಸೆಂಬರ್ 31ರಂದು ರು. 17.06 ಇದ್ದದ್ದು ಈ ವರ್ಷದ ಡಿಸೆಂಬರ್ 23ರಂದು ರು. 222.95 ಇತ್ತು. ಇದನ್ನು ಬಿಡಿಸಲು ಹೇಳಬೇಕು ಅಂದರೆ, ಬಯೋಫಿಲ್ ನಲ್ಲಿ ಕಳೆದ ವರ್ಷ 10,000 ರುಪಾಯಿ ಹೂಡಿಕೆ ಮಾಡಿದ್ದರೆ ಇವತ್ತಿಗೆ ಆ ಮೊತ್ತ 1.30 ಲಕ್ಷ ರುಪಾಯಿ ಆಗಿರುತ್ತದೆ.
ಈ ಪಟ್ಟಿಯಲ್ಲಿ ಇತರ ಕಂಪೆನಿಗಳೆಂದರೆ ತನ್ಲಾ ಪ್ಲಾಟ್ ಫಾರ್ಮ್ಸ್ (795% ಏರಿಕೆ), ಅಲೋಕ್ ಇಂಡಸ್ಟ್ರೀಸ್ (606% ಏರಿಕೆ), ಅದಾನಿ ಗ್ರೀನ್ ಎನರ್ಜಿ (527% ಏರಿಕೆ) ಮತ್ತು ಮೇಕರ್ಸ್ ಲ್ಯಾಬೊರೇಟರೀಸ್ (527% ಏರಿಕೆ). ಈ ವರ್ಷದಲ್ಲಿ ಎರಡನೇ ಅತಿ ದೊಡ್ಡ ಗಳಿಕೆ ಕಂಡಿರುವುದೆಂದರೆ, ತನ್ಲಾ ಪ್ಲಾಟ್ ಫಾರ್ಮ್ಸ್. ಇದು ಕ್ಲೌಡ್ ಕಮ್ಯುನಿಕೇಷನ್ ಸರ್ವೀಸ್ ಒದಗಿಸುತ್ತದೆ. ಕಳೆದ ಎರಡು ವರ್ಷದಲ್ಲೇ ಹೂಡಿಕೆದಾರರಿಗೆ 1000 ಪರ್ಸೆಂಟ್ ಹೆಚ್ಚು ರಿಟರ್ನ್ಸ್ ನೀಡಿದೆ.

ಭಾರತ್ ಇಮ್ಯುನಾಲಾಜಿಕಲ್ಸ್ ಅಂಡ್ ಬಯಾಲಾಜಿಕಲ್ಸ್, ವೀನಸ್ ರೆಮಿಡೀಸ್, ವರ್ಧಮಾನ್ ಪಾಲಿಟೆಕ್ಸ್, ಎಜಿಸಿ ನೆಟ್ ವರ್ಕ್ಸ್, ಸ್ಟ್ಯಾಂಡರ್ಡ್ ಬ್ಯಾಟರೀಸ್, ಆರತಿ ಡ್ರಗ್ಸ್, ಸಬೆಕ್ಸ್, ಲಾರಸ್ ಲ್ಯಾಬ್ಸ್, ಗುಜರಾತ್ ಥೆಮೀಸ್ ಬಯೋಸಿನ್, ಮಂಗಲಂ ಡ್ರಗ್ಸ್, ಐಒಎಲ್ ಕೆಮಿಕಲ್ಸ್ ಅಂಡ್ ಸಿಜಿ ಪವರ್ ಷೇರುಗಳು 280%ನಿಂದ 525% ತನಕ ಈ ವರ್ಷದ ಡಿಸೆಂಬರ್ 31ರ ತನಕ ಲಾಭ ಗಳಿಸಿವೆ.
ಡಿಸೆಂಬರ್ 31, 2019ರಂದು 41,253 ಪರ್ಸೆಂಟ್ ಇದ್ದ ಮಾರ್ಕೆಟ್, 13% ಹೆಚ್ಚಳವಾಗಿ, ಡಿಸೆಂಬರ್ 23ರಂದು 46.444 ಇತ್ತು. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ದೇಶದಾದ್ಯಂತ ಲಾಕ್ ಡೌನ್ ಹೇರಿದ್ದ ಸಮಯದಲ್ಲಿ ಸೆನ್ಸೆಕ್ಸ್ 52 ವಾರಗಳ ಕನಿಷ್ಠ ಮಟ್ಟವಾದ 25,639 ಪಾಯಿಂಟ್ ಮುಟ್ಟಿತ್ತು.
ಸೆನ್ಸೆಕ್ಸ್ ಗುಚ್ಛದಲ್ಲಿ ಇರುವ ಡಾ ರೆಡ್ಡೀಸ್ ಲ್ಯಾಬ್ಸ್ 82% ಏರಿಕೆಯಾಗುವ ಮೂಲಕ ಟಾಪ್ ಗೇಯ್ನರ್ ಆಗಿದೆ. ನಂತರದ ಸ್ಥಾನದಲ್ಲಿ ಇನ್ಫೋಸಿಸ್ (71%), ಎಚ್ ಸಿಎಲ್ ಟೆಕ್ನಾಲಜೀಸ್ (62%), ಏಷ್ಯನ್ ಪೇಂಟ್ಸ್ (48%) ಮತ್ತು ಟಿಸಿಎಸ್ (34%) ಕೂಡ ಏರಿಕೆ ಆಗಿವೆ. ಇನ್ನು ಇಳಿಕೆ ಆಗಿರುವ ಷೇರುಗಳ ಕಡೆ ಗಮನಿಸಿದರೆ ಇಂಡಸ್ ಇಂಡ್ ಬ್ಯಾಂಕ್, ಒಎನ್ ಜಿಸಿ, ಆಕ್ಸಿಸ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ವರ್ಷ ಇಲ್ಲಿಯ ತನಕ 21%ಗೂ ಹೆಚ್ಚು ಇಳಿಕೆ ಆಗಿದೆ.
ಐಡಿಬಿಐ ಕ್ಯಾಪಿಟಲ್ ರೀಸರ್ಚ್ ಹೆಡ್ ಎ.ಕೆ. ಪ್ರಭಾಕರನ್ ಹೇಳುವ ಪ್ರಕಾರ, 2021ರ ಕೊನೆ ಹೊತ್ತಿಗೆ ನಿಫ್ಟಿ 15,000 ಮತ್ತು ಸೆನ್ಸೆಕ್ಸ್ 51,000 ಪಾಯಿಂಟ್ ಮುಟ್ಟಬಹುದು.


Click it and Unblock the Notifications