ಆತನ ಹೆಸರು ಸ್ಟೀವ್ ಥಾಮ್ಸನ್. ವಯಸ್ಸು ನಲವತ್ತೆರಡು ವರ್ಷ. ವೃತ್ತಿಯಿಂದ ಬಿಲ್ಡರ್. ಇನ್ನು ಆತನ ಪತ್ನಿ ಸ್ಲೊವೇಕಿಯನ್ ಅಂಗಡಿಯಲ್ಲಿ ಸಹಾಯಕಿಯಾಗಿ ದುಡಿಯುತ್ತಿದ್ದಾರೆ. ಇವರಿಬ್ಬರಿಗೂ ಈಗ ಜಾಕ್ ಪಾಟ್ ಹೊಡೆದಿದೆ. ಅದು ಅಂಥಿಂಥ ಜಾಕ್ ಪಾಟ್ ಅಲ್ಲ. ಯುರೋ ಮಿಲಿಯನ್ಸ್ ಲಾಟರಿ.
ಈ ದಂಪತಿಗೆ ಬಂದಿರುವ ಲಾಟರಿ ಮೊತ್ತ 105,100,701.90 ಪೌಂಡ್ಸ್. ಅದನ್ನು ಭಾರತೀಯ ರುಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ 966 ಕೋಟಿ. ಇನ್ನು ಅಮೆರಿಕನ್ ಕರೆನ್ಸಿ ಲೆಕ್ಕದಲ್ಲಿ $ 135 ಮಿಲಿಯನ್. ನ್ಯಾಷನಲ್ ಲಾಟರಿ ಅವರ 25ನೇ ವಾರ್ಷಿಕೋತ್ಸವದ ಮೊದಲ ಡ್ರಾ ನವೆಂಬರ್ 19ನೇ ತಾರೀಕು ನಡೆಯಿತು. ಅದರಲ್ಲಿ ಬಂದ ಬಂಪರ್ ಲಾಟರಿ ಮೊತ್ತ ಇದು.
ಸ್ಟೀವ್ ಥಾಮ್ಸನ್ ಹಾಗೂ ಆತನ 41 ವರ್ಷದ ಪತ್ಮಿ ಲೆಂಕಾ ಪಶ್ಚಿಮ ಸಸೆಕ್ಸ್ ನ ಸೆಲ್ಸೆಯಲ್ಲಿ ಇದ್ದಾರೆ. ಇವರಿಬ್ಬರಿಗೆ ಮದುವೆಯಾಗಿ 13 ವರ್ಷ ಕಳೆದಿದೆ. ಲೆಂಕಾಗೆ ಮೂವರು ಮಕ್ಕಳು. ವಾಸವಿರುವುದು 1,20,000 ಪೌಂಡ್ ಮೌಲ್ಯದ ಮನೆಯಲ್ಲಿ. ಆದರೆ ಈಗ ಹೊಸ ಮನೆ ಖರೀದಿಸುವ ಉಮೇದಿಯಲ್ಲಿದ್ದಾರೆ.

ಮೂವರು ಮಕ್ಕಳಿಗೂ ಪ್ರತ್ಯೇಕ ಕೋಣೆ ಇರುವಂಥ ಮನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂಬ ಸಮಾಧಾನ ಈ ದಂಪತಿಯಲ್ಲಿ ಇದೆ. ಕಳೆದ 25 ವರ್ಷಗಳಿಂದ ಸ್ಟೀವ್ ಲಾಟರಿ ಆಡುತ್ತಿದ್ದು, ಈ ಬಾರಿಯ ಕ್ರಿಸ್ ಮಸ್ ಗೂ ಮುಂಚೆ ಎಲ್ಲ ಕೆಲಸ ಮುಗಿಸುವುದಾಗಿ ಹೇಳಿದ್ದಾರೆ. ಯಾವಾಗ ಈ ಲಾಟರಿ ಡ್ರಾನಲ್ಲಿ ತಾನು ಗೆದ್ದಿದ್ದೇನೆ ಎಂಬುದು ಗೊತ್ತಾಯಿತೋ ಆಗ ಹೃದಯಾಘಾತ ಆಗಿಬಿಡುತ್ತದೇನೋ ಎನಿಸಿತ್ತಂತೆ ಸ್ಟೀವ್ ಥಾಮ್ಸನ್ ಗೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications