ಮಾರುಕಟ್ಟೆ ಮೌಲ್ಯ: ಟಾಪ್ 3 ಸಂಸ್ಥೆಗಳಿಗೆ 1.22 ಲಕ್ಷ ಕೋಟಿ ನಷ್ಟ

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಕಳೆದ ವಾರ(ಸೆ. 3ರ ತನಕ) 3 ಕಂಪನಿಗಳ ಮೌಲ್ಯ ಭಾರಿ ಬದಲಾಗಿದ್ದು, 1.22 ಲಕ್ಷ ಕೋಟಿ ರು ನಷ್ಟ ಅನುಭವಿಸಿವೆ.

ಕಳೆದ ವಾರ ಎಲ್ಲಾ ಟಾಪ್ 10 ಕಂಪನಿಗಳ ಪೈಕಿ ದೇಶದ ಅತಿದೊಡ್ಡ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಭಾರಿ ನಷ್ಟ ಅನುಭವಿಸಿದ್ದರೆ, ಅತಿ ದೊಡ್ಡ ಐಟಿ ಸಂಸ್ಥೆಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಹಾಗೂ ಇನ್ಫೋಸಿಸ್ ಟೆಕ್ನಾಲಜೀಸ್ ಹಿನ್ನಡೆ ಅನುಭವಿಸಿದೆ.

ಕಳೆದ ವಾರ, ಬೆಂಚ್‌ಮಾರ್ಕ್ 30 ಷೇರು ಬಿಎಸ್‌ಇ ಸೆನ್ಸೆಕ್ಸ್ 30.54 ಪಾಯಿಂಟ್‌ಗಳು ಅಥವಾ ಶೇಕಡಾ 0.05 ಇಳಿಕೆ ಕಂಡಿತ್ತು. ಕಳೆದ ವಾರದಲ್ಲಿ ಹೂಡಿಕೆದಾರರು ಸುರಕ್ಷೆಯ ವಿಧಾನ ಅನುಸರಿಸಿ, ಹೆಚ್ಚಿನ ಹೂಡಿಕೆಗೆ ಮುಂದಾದರು. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ಯಾವ ಕಂಪನಿಗಳಿಗೆ ಲಾಭ

ಯಾವ ಕಂಪನಿಗಳಿಗೆ ಲಾಭ

ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಬ್ಯಾಂಕ್ ಬಡ್ಡಿದರ ಏರಿಕೆ, ಆಮದು -ರಫ್ತು ನಿರ್ಬಂಧ ಮುಂತಾದ ವಿದ್ಯಮಾನ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ. ಎಚ್ ಡಿ ಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿ ಎಫ್ ಸಿ, ಬಜಾಜ್ ಫೈನಾನ್ಸ್ ಹಾಗೂ ಅದಾನಿ ಟ್ರಾನ್ಸ್ ಮಿಷನ್ ಲಾಭ ಗಳಿಸಿವೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮೌಲ್ಯ 60,176.75 ಕೋಟಿ ರು ಕುಸಿತ ಕಂಡು 17,11,468.58 ಕೋಟಿ ರು ತಲುಪಿದೆ. ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 33,663.28 ಕೋಟಿ ರು ಕುಸಿತ ಕಂಡು 11,45,155.01ಕೋಟಿ ರು ಮೌಲ್ಯಕ್ಕೆ ಇಳಿದಿದೆ. ಇನ್ಫೋಸಿಸ್ ಸಂಸ್ಥೆ 29,012.22 ಕೋಟಿ ರು ಇಳಿಕೆ ಕಂಡು 6,11,339.35 ಕೋಟಿ ರು ಮೌಲ್ಯಕ್ಕೆ ಕುಸಿದಿದೆ

ಐಸಿಐಸಿಐ ಬ್ಯಾಂಕು

ಐಸಿಐಸಿಐ ಬ್ಯಾಂಕು

ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳಾದ ಎಚ್ ಡಿ ಎಫ್ ಸಿ, ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯ ಏರಿಕೆ ಕಂಡಿವೆ. ಎಚ್ ಡಿ ಎಫ್ ಸಿ ಬ್ಯಾಂಕ್ 12,653.69 ರು ಹೆಚ್ಚಳ ಕಂಡು 8,26,605.74ಕೋಟಿ ರು ತಲುಪಿದೆ. ಎಚ್ ಡಿ ಎಫ್ ಸಿ ಮೌಲ್ಯ 9,408.48 ಕೋಟಿ ರು ಹಿಗ್ಗಿ 4,44,052.84 ಕೋಟಿ ರು ಆಗಿದೆ. ಐಸಿಐಸಿಐ ಬ್ಯಾಂಕು 1,022.41 ಕೋಟಿ ರು ಏರಿಕೆ ಕಂಡು 6,07,352.52 ಕೋಟಿ ರು ಮೌಲ್ಯಕ್ಕೇರಿದೆ.

ಅದಾನಿ ಸಂಸ್ಥೆ ಎಂಟ್ರಿ

ಅದಾನಿ ಸಂಸ್ಥೆ ಎಂಟ್ರಿ

ಕಳೆದ ಮಂಗಳವಾರ ಆಗಸ್ಟ್ 30ರಂದು ಷೇರುಪೇಟೆಗೆ ಎಂಟ್ರಿ ಕೊಟ್ಟ ಅದಾನಿ ಟ್ರಾನ್ಸ್ ಮಿಷನ್ ಟಾಪ್ 10 ಅತಿ ಹೆಚ್ಚು ಮೌಲ್ಯಯುತ ಕಂಪನಿಗಳ ಪಟ್ಟಿಯಲ್ಲೂ ಕಾಣಿಸಿಕೊಂಡಿದೆ. ಕಳೆದವಾರ ಅದಾನಿ ಕಂಪನಿ 12,494.32 ಕೋಟಿ ರು ಹೆಚ್ಚಳ ಕಂಡು 4,30,842.32 ಕೋಟಿ ರು ತಲುಪಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಇದೇ ವೇಳೆ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 11,289.64 ಕೋಟಿ ರು ವ್ಯತ್ಯಾಸ ಕಂಡು 4,78,760.80 ಕೋಟಿ ರು ತಲುಪಿದೆ.

ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆ ಮೌಲ್ಯ 7,612.68 ಕೋಟಿ ರು ಹೆಚ್ಚಳ ಕಂಡು 6,11,692.59 ಕೋಟಿ ರು ತಲುಪಿದೆ. ಬಜಾಜ್ ಫೈನಾನ್ಸ್ ಸಂಸ್ಥೆ 7,740.41 ಕೋಟಿ ರು ಹೆಚ್ಚಳ ಕಂಡು 4,35,346 ಕೋಟಿ ರು ಮುಟ್ಟಿದೆ.

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿ ಎಫ್ ಸಿ, ಬಜಾಜ್ ಫೈನಾನ್ಸ್ ಹಾಗೂ ಅದಾನಿ ಟ್ರಾನ್ಸ್ ಮಿಷನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+