ತಿರುಮಲ ತಿರುಪತಿ ದೇವಸ್ಥಾನದ ಎಸ್‌ವಿ ಪ್ರಾಣದಾನ ಟ್ರಸ್ಟ್‌ಗೆ 1 ಕೋಟಿ ರೂ. ಗೂಗಲ್ ಉಪಾಧ್ಯಕ್ಷ ತೋಟ ಚಂದ್ರಶೇಖರ್ ದೇಣಿಗೆ ನೀಡಿದ್ದಾರೆ ಎಂದು ದೇವಾಲಯದ ಟ್ರಸ್ಟ್ ಮಾಹಿತಿಯನನ್ನು ತಿಳಿಸಿದ್ದಾರೆ.
ಹೌದು,ತಿರುಮಲ ತಿರುಪತಿ ದೇವಸ್ಥಾನಕ್ಕೆ ಚಂದ್ರಶೇಖರ್ ಅವರು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರಿಗೆ ಟಿಟಿಡಿಯ ಎಸ್‌ವಿ ಪ್ರಾಣದಾನ ಟ್ರಸ್ಟ್‌ಗೆ 1 ಕೋಟಿ ರೂ ಚೆಕ್ ಹಸ್ತಾಂತರಿಸಿದ್ದಾರೆ ಎಂದು ದೇವಾಲಯದ ಮಂಡಳಿಯ ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ತಿರುಮಲ ದೇವಸ್ಥಾನವು (Tirupati Tirumala Devasthanam) ಸುತ್ತಲೂ ಬೆಟ್ಟಗಳಿಂದ ನೆಲೆಗೊಂಡಿರುವ ಪ್ರಸಿದ್ಧ ಹಿಂದೂ ದೇವಾಲಯ. ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯ ಎಂದು ಪ್ರಸಿದ್ದಿಯನ್ನು ಪಡೆದಿದ್ದು, ಪ್ರತಿನಿತ್ಯವೂ ಲಕ್ಷಂತರ ಭಕ್ತಾದಿಗಳು ತಿರುಮಲ ದರ್ಶನ ಪಡೆಯಲು ತಿರುಪತಿ ಆಗಮಮಿಸುತ್ತಾರೆ.
ವಿಶ್ವದ ಅತ್ಯಂತ ತಿರುಪತಿ ತಿರುಮಲ ದೇವಾಲಯವು ಇಂದು ಅತ್ಯಂತ ಶ್ರೀಮಂತ ದೇವಾಲಯ ಟ್ರಸ್ಟ್ ಆಗಿದೆ. ವರದಿಯ ಪ್ರಕಾರ 2024ರ ದೇವಾಲಯದ ಟ್ರಸ್ಟ್ 1161 ಕೋಟಿ ರೂಪಾಯಿಗಳ ನೂತನ ನಿಗದಿತ ಠೇವಣಿಯನ್ನು (FD) ಮಾಡಿದೆ ಇದು ಇತಿಹಾಸದಲ್ಲಿನ ಅತ್ಯಧಿಕ ಎಫ್‌ಡಿ ಮೊತ್ತವಾಗಿದೆ. ತಿರುಮಲ ದೇವಸ್ಥಾನಕ್ಕೆ ಕಳೆದ 12 ವರ್ಷಗಳಿಂ ಪ್ರತಿವರ್ಷ 500 ಕೋಟಿ ರೂಪಾಯಿಗಳಷ್ಟು ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಎಫ್ ಡಿ ಆಗಿ ನಿಗದಿತ ಮಾಡುತ್ತಿರುವ ಭಾರತದ ಏಕೈಕ ದೇವಾಲಯ ಇದಾಗಿದೆ. ವೈಕುಂಠ ಏಕಾದಶಿಯಂದು ಜನಸಾಗರವೇ ಸೇರುತ್ತದೆ.
ಪ್ರಾಣದಾನ ಟ್ರಸ್ಟ್ ಎಂದರೇನು..?
ತಿರುಮಲ ತಿರುಪತಿ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್ (Sri Venkateswara Pranadana Trust) ಎಂಬುದು ತಿರುಪತಿ ತಿರುಮಲ ದೇವಾಲಯ (TTD) ಸ್ಥಾಪಿಸಿದ ಒಂದು ಮಹತ್ವದ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಯೋಜನೆ. ಇಲ್ಲಿಗೆ ನೀಡುವಂತಹ ಹಣವನ್ನು ಆರ್ಥಿಕವಾಗಿ ದುರ್ಬಲರಾದ, ಬಡ ಮತ್ತು ರೋಗ ಪೀಡಿತರಾಗಿರುವ ರೋಗಿಗಳಿಗೆ ಉಚಿತವಾಗಿ ಅಥವಾ ಕಡಿಮೆ ವೆಚ್ಚದಲ್ಲಿ ಮೆಡಿಕಲ್ ಚಿಕಿತ್ಸೆ ಮತ್ತು ಆರೋಗ್ಯ ಸೇವೆಗಳನ್ನು ಒಗಿಸುದಕ್ಕಾಗಿ ಬಳಕೆಯನ್ನು ಮಾಡಿಕೊಳ್ಳಲಾಗುತ್ತದೆ.
ಶ್ರೀಮಂತಿಕೆಗೆ ಹೆಸರಾದ ದೇವಾಲಯ ತಿರುಮಲ
ಬೆಟ್ಟದಲ್ಲಿನ ವೆಂಕಟೇಶ್ವರ ಸ್ವಾಮಿ ದೇವಾಲಯವು ವಿಶ್ವದ ಶ್ರೀಮಂತ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಶ್ರೀಮಂತಿಕೆಗೆ ಹಾಗೂ ಭಾರೀ ಹುಂಡಿ ಹಣ ಸಂಗ್ರಹದ ಮೂಲಕವೇ ಹೆಸರುವಾಸಿಯಾದ ಈ ದೇವಾಲಯದಲ್ಲಿ 2022ರಲ್ಲಿ ಹುಂಡಿ ಸಂಗ್ರಹವು ಭಾರೀ ಪ್ರಮಾಣದಲ್ಲಿ ಆಗಿದೆ.
ತಿರುಪತಿ ದೇವಾಲಯದಲ್ಲಿ 2022ರಲ್ಲಿ 1450 ಕೋಟಿ ರೂಪಾಯಿ ಹುಂಡಿಗೆ ಭಕ್ತರು ಹಾಕಿದ ಕಾಣಿಕೆಯ ಮೂಲಕ ಸಂಗ್ರಹವಾಗಿದೆ. 2022ರಲ್ಲಿ ತಿರುಮಲ ದೇವಾಲಯಕ್ಕೆ ಬರೋಬ್ಬರಿ 2.37 ಕೋಟಿ ಭಕ್ತರು ಆಗಮಿಸಿದ್ದಾರೆ. 2021ರಲ್ಲಿ ದೇವಾಲಯಕ್ಕೆ ಹುಂಡಿಗೆ ಭಕ್ತರು ಹಾಕಿದ ಹಣದ ಮೂಲಕ ಸುಮಾರು 853.41 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಹಾಗೆಯೇ ಸುಮಾರು 1.04 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ಈ ವರ್ಷ ಭಕ್ತರ ಸಂಖ್ಯೆಯು ದುಪ್ಪಟ್ಟಾಗಿದೆ. ಹುಂಡಿ ಸಂಗ್ರಹವೂ ಕೂಡಾ ಅಧಿಕವಾಗಿದೆ.
ಷ್ಣುವಿಗೆ ಸಮರ್ಪಿತವಾಗಿರುವ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ತಿರುಪತಿ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. ತಿರುಮಲ ಬೆಟ್ಟದ ಮೇಲಿರುವ ಈ ದೇವಾಲಯವು ಬೆಟ್ಟದ ತಪ್ಪಲಿನಲ್ಲಿರುವ ತಿರುಪತಿ ಪಟ್ಟಣದ ಸಂಪೂರ್ಣ ದೃಶ್ಯವನ್ನು ನೋಡಲು ಪ್ರವಾಸಿಗರಿಗೆ ಉತ್ತಮ ಸ್ಥಳವಾಗಿದೆ.
ಪ್ರತಿದಿನ ಸುಮಾರು 3 ಲಕ್ಷ ಲಡ್ಡು ಮಾರಾಟ
ತಿರುಪತಿ ಬಾಲಾಜಿ ಟ್ರಾವೆಲ್ಸ್ ಪ್ರಕಾರ, ಇಲ್ಲಿನ ಲಡ್ಡುಗಳು ಮೂರು ಗಾತ್ರಗಳಲ್ಲಿ ಅಂದರೆ ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರಗಳಲ್ಲಿ ಲಭ್ಯವಿದೆ. ಇವುಗಳು ಕ್ರಮವಾಗಿ 40 ಗ್ರಾಂ, 175 ಗ್ರಾಂ ಮತ್ತು 750 ಗ್ರಾಂ ತೂಕವನ್ನು ಹೊಂದಿರುತ್ತದೆ. ವೆಂಕಟೇಶ್ವರ ದೇವಸ್ಥಾನದಲ್ಲಿ ವಿತರಿಸಲಾಗುವ ಚಿಕ್ಕ ಲಡ್ಡುಗಳು ಎಲ್ಲಾ ಭಕ್ತರಿಗೆ ಉಚಿತವಾಗಿದ್ದು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಮಧ್ಯಮ ಗಾತ್ರದ ಲಡ್ಡುಗಳಿಗೆ ತಲಾ 50 ರೂಪಾಯಿ, ದೊಡ್ಡ ಗಾತ್ರದ ಲಡ್ಡುಗಳಿಗೆ 200 ರೂ. ಬೆಲೆ ಇದೆ. ಪ್ರತಿ ದಿನ ಟಿಟಿಡಿ ತಿರುಮಲದಲ್ಲಿ ಸುಮಾರು 3 ಲಕ್ಷ ಲಡ್ಡು ಮಾರಾಟದಿಂದ ವಾರ್ಷಿಕವಾಗಿ ಸುಮಾರು 500 ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ.
ತಿರುಮಲದಲ್ಲಿ ಹೆಚ್ಚು ಭೇಟಿ ನೀಡುವ ಪವಿತ್ರ ಸ್ಥಳಗಳು
ಆಕಾಶಗಂಗಾ ತೀರ್ಥಂ. ಜಪಾಲಿ ಹನುಮಾನ್ ದೇವಸ್ಥಾನ. ಜಪಾಲಿ ತೀರ್ಥಂ. ಸಿಲತೋರಣಂ. ಪಾಪವಿನಾಸಂ. ವೇಣುಗೋಪಾಲ ಸ್ವಾಮಿ ದೇವಸ್ಥಾನ. ವರಾಹ ಸ್ವಾಮಿ ದೇವಸ್ಥಾನ. ಚಕ್ರತೀರ್ಥಂ. ಶ್ರೀವಾರಿ ಪಾದಗಳು ಗಳು ಇವೆ ನೀವು ಇಲ್ಲಿಗೂ ಕೂಡ ಭೇಟಿ ನೀಡಬಹುದು.


Click it and Unblock the Notifications