Tirumala Temple: ತಿರುಮಲದಿಂದ ಗುಡ್ ನ್ಯೂಸ್! 'ಬುಕ್ ಪ್ರಸಾದಂ' ಶುರು.. ಏನಿದು ಹೊಸ ಯೋಜನೆ?

ಭೂಲೋಕದ ವೈಕುಂಟವೆಂದು ಕರೆಯಲಾಗುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ದಲ್ಲಿ ಇನ್ಮುಂದೆ ಲಡ್ಡು ಪ್ರಸಾದ ಜೊತೆಗೆ ವೆಂಕಟೇಶ್ವರನ ಮಹಿಮೆ ಇರುವಂತಹ ಪುಸ್ತಕವನ್ನು ಪ್ರಸಾದವಾಗಿ ನೀಡಲಾಗುತ್ತದೆ.

ಹೌದು, ಧಾರ್ಮಿಕ ಮತಾಂತರಗಳನ್ನು ತಡೆಯುವ ಮತ್ತು ಸನಾತನ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ "ಪುಸ್ತಕ ಪ್ರಸಾದ" ಕಾರ್ಯಕ್ರಮವನ್ನು ಟಿಟಿಡಿ ಪ್ರಾರಂಭಿಸಿದೆ. ಈ ಕಾರ್ಯಕ್ರಮವು ಭಕ್ತರಿಗೆ ಹಿಂದೂ ಸಂಪ್ರದಾಯಗಳು ಮತ್ತು ವೆಂಕಟೇಶ್ವರನ ಮಹಿಮೆಯ ಬಗ್ಗೆ ಮಾಹಿತಿಯನ್ನು ತಿಳಿಸುವ ಉದ್ದೇಶದಿಂದ ಈ ಪುಸ್ತಕವನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.

ತಿರುಮಲದಿಂದ ಗುಡ್ ನ್ಯೂಸ್! 'ಬುಕ್ ಪ್ರಸಾದಂ' ಶುರು

ಈ ಕಾರ್ಯಕ್ರಮವು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರ ಮಾರ್ಗದರ್ಶನದಲ್ಲಿ ಹಿಂದೂ ಧರ್ಮದ ಶ್ರೀಮಂತ ಪರಂಪರೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಲು ಇದನ್ನು ಮಾಡಲಾಗುತ್ತದೆ. ಇನ್ನು ಮುಂದೆ, ಸಾಂಪ್ರದಾಯಿಕ ಲಡ್ಡೂ ಜೊತೆಗೆ, ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಪುಸ್ತಕಗಳನ್ನು ಪ್ರಸಾದವಾಗಿ ನೀಡಲಾಗುತ್ತದೆ.

ಟಿಟಿಡಿಯ ಹಿಂದೂ ಧರ್ಮ ಪ್ರಚಾರ ಪರಿಷತ್ತಿನ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಆಂಧ್ರಪ್ರದೇಶದಾದ್ಯಂತ ಹಳ್ಳಿಗಳು ಮತ್ತು ಏಜೆನ್ಸಿ ಪ್ರದೇಶಗಳು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಆಧ್ಯಾತ್ಮಿಕ ಗ್ರಂಥಗಳನ್ನು ಉಚಿತವಾಗಿ ವಿತರಣೆಯನ್ನು ಮಾಡಲಾಗುತ್ತದೆ.

ಪುಸ್ತಕ ಪ್ರಸಾದ ವಿತರಣೆ

ತಿರುಮಲದಲ್ಲಿರುವ ವೈಕುಂಠನ ದರ್ಶನಕ್ಕೆ ಕ್ಯೂ ಕಾಂಪ್ಲೆಕ್ಸ್‌ನ ಕಂಪಾರ್ಟ್‌ಮೆಂಟ್‌ಗಳಲ್ಲಿ ಕಾಯುತ್ತಿರುವ ಭಕ್ತರಿಗೆ ಪುಸ್ತಕವನ್ನು ನೀಡಲಾಗುತ್ತದೆ.

ಇತ್ತೀಚೆಗೆ ತಿರುಮಲ ಕ್ಯಾಂಪ್ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿಟಿಡಿ ಅಧಿಕಾರಿಗಳು ಅಧ್ಯಕ್ಷ ಬಿಆರ್ ನಾಯ್ಡು ಅವರಿಗೆ ವಿತರಿಸಲು ಉದ್ದೇಶಿಸಲಾದ ಪುಸ್ತಕಗಳ ಶ್ರೇಣಿಯನ್ನು ನೀಡಿದರು. ಈ ಸಂಗ್ರಹವು ಶ್ರೀ ವೆಂಕಟೇಶ್ವರ ವೈಭವಂ, ವಿಷ್ಣು ಸಹಸ್ರನಾಮಂ, ವೆಂಕಟೇಶ್ವರ ಸುಪ್ರಭಾತಂ, ಭಜ ಗೋವಿಂದಂ, ಲಲಿತಾ ಸಹಸ್ರನಾಮಂ, ಶಿವ ಸ್ತೋತ್ರಂ, ಭಗವದ್ಗೀತೆ ಮತ್ತು ಪ್ರಭಾವಿ ವ್ಯಕ್ತಿಗಳ ಜೀವನ ಚರಿತ್ರೆಗಳಂತಹ ಪೂಜ್ಯ ಗ್ರಂಥಗಳನ್ನು ಈ ಪುಸ್ತೊಕ ಒಖಗೊಂಡಿದೆ.

ವೆಂಕಟೇಶ್ವರನ ಮಹಿಮೆ ಈ ಪುಸ್ತಕಗಳನ್ನು ಮುದ್ರಿಸುವ ಸಂಪೂರ್ಣ ವೆಚ್ಚವನ್ನು ದಾನಿಗಳಿಂದಲ್ಲೇ ಭರಿಸಿಕೊಳ್ಳತ್ತಾದೆ.
ಇದು ತಿರುಮಲದವಟಿಟಿಡಿ ನಿಧಿಯ ಬಳಕೆಯನ್ನು ತಡೆಯುತ್ತದೆ. ಈ ಲೋಕೋಪಕಾರಿ ಬೆಂಬಲದೊಂದಿಗೆ, ಕೈಪಿಡಿಗಳನ್ನು ಆರಂಭದಲ್ಲಿ ತೆಲುಗಿನಲ್ಲಿ ಮುದ್ರಿಸಲಾಗುತ್ತದೆ ಮತ್ತು ನಂತರ ರಾಷ್ಟ್ರವ್ಯಾಪಿ ವಿತರಣೆಗಾಗಿ ಇತರ ಭಾಷೆಗಳಿಗೆ ಭಾ‍ಷಾಂತರವನ್ನು ಮಾಡಿ ಪ್ರಕಟಿಸಲಾಗುತ್ತದೆ.

ಹಿಂದೂ ಧರ್ಮವನ್ನು ಪ್ರಚಾರ ಮಾಡುವಲ್ಲಿ ಮತ್ತು ಧಾರ್ಮಿಕ ಮತಾಂತರಗಳನ್ನು ತಡೆಯಲು ಸಕ್ರಿಯವಾಗಿ ಕೆಲಸ ಮಾಡುವಲ್ಲಿ ಈ ಕಾರ್ಯಕ್ರಮ ಹೆಚ್ಚಿನ ಅನುಕೂಲವನ್ನು ನೀಡುತ್ತದೆ ಎಂದು ಟಿಟಿಡಿ ಅಧ್ಯಕ್ಷರು ಹೇಳಿದ್ದಾರೆ.ಈ ಪುಸ್ತಕ ಪ್ರಸಾದವು ಆಧ್ಯಾತ್ಮಿಕ ಕಲ್ಯಾಣವನ್ನು ಉತ್ತೇಜನವನ್ನು ಮಾಡುವುದು. ಮತ್ತು ಸನಾತನ ಧರ್ಮವನ್ನು ಸಂರಕ್ಷಿಸುವುದು ಆಗಿದೆ.

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಸಂಪತ್ತಿನಲ್ಲಿ ದೇಶದಲ್ಲೇ ಮೊದಲ ಸ್ಥನಾವನ್ನು ಪಡೆದುಕೊಂಡಿದೆ. ಶೇಷಾಚಲ ಬೆಟ್ಟಗಳ ನಡುವೆ ನೆಲೆಸಿರುವ ಈ ದೇವಾಲಯಕ್ಕೆ ಪ್ರತಿದಿನ 50,000ಕ್ಕೂ ಹೆಚ್ಚು ಭಕ್ತರು ದೇಶ-ವಿದೇಶಗಳಿಂದ ತಿಮ್ಮಪನ ದರ್ಶನಕ್ಕೆ ಬರುತ್ತಾರೆ. ದೇವಾಲಯದ ನಿವ್ವಳ ಮೌಲ್ಯ ಸುಮಾರು 3 ಲಕ್ಷ ಕೋಟಿ ರೂ. ಎಂದು ಅಂದಾಕು ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+