ಜೀವನದಲ್ಲಿ ಒಮ್ಮೆಯಾದರೂ ತಿರುಪತಿಗೆ ಹೋಗಿ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಬೇಕು ಎಂಬ ಬಯಕೆ ಭಕ್ತರಿಗೆ ಇದ್ದೇ ಇರುತ್ತದೆ ಆದರೆ, ಅಲ್ಲಿಗೆ ಹೋಗ್ಬೇಕು ಅಂದರೆ ನೀವು ಮೊದಲೇ ಟಿಕೆಟ್ ಬುಕ್ ಮಾಡಬೇಕು ಅಥವಾ ಅಲ್ಲಿಗೆ ಹೋಗಿ ಕ್ಯೂ ನಿಲ್ಲಬೇಕು ಅಲ್ಲಿರುವ ಜನ ಮಂದಿಯನ್ನು ನೋಡಿದ್ರೆ ಸಾಕಪ್ಪಾ ಸಾಕು ಅನ್ನೋವಷ್ಟರ ಮಟ್ಟಕ್ಕೆ ಜನ ಸಾಗರವೇ ಇರುತ್ತದೆ. ನೀವು ಈ ಸ್ಥಳಕ್ಕೆ ಭೇಟಿ ನೀಡಲು ತಿಂಗಳುಗಳ ಮೊದಲೇ ಬುಕ್ ಮಾಡಬೇಕಾಗಿದೆ.ಅದ್ರೆ ಇದೀಗ ಭಕ್ತರಿಗೆ ಸಿಹಿಸುದ್ದಿಯೊಂದನ್ನು ಸಿಕ್ಕಿದ್ದು, ನೀವು ಮೇ ತಿಂಗಳ ವಿಶೇಷ ದರ್ಶನದ ಟಿಕೆಟ್‌ಗಳನ್ನು ಈ ಕೂಡಲೇ ಬುಕ್ ಮಾಡಿಕೊಳ್ಳಬಹುದು.ಟಿಕೆಟ್ ಬುಕ್ ಮಾಡುವುದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು ಎಂಬ ಹೆಚ್ಚಿನ ಮಾಹಿತಿ ಈ ಲೇಳನದಲ್ಲಿ ತಿಳಿಯೋಣ ಬನ್ನಿ...
ಹೌದು, ತಿರುಪತಿಗೆ ಹೋಗಲು ಮೇ ತಿಂಗಳ 300 ರೂ,ಗಳ ವಿಶೇಷ ದರ್ಶನದ ಟಿಕೆಟ್‌ಗಳನ್ನು ಟಿಟಿಡಿ ಅಧಿಕಾರಿಗಳು ಇಂದು ಬಿಡುಗಡೆ ಮಾಡಿದ್ದಾರೆ.ಬುಕಿಂಗ್ ಈಗಾಗಲೇ ಆರಂಭವಾಗಿದ್ದು,ನೀವು ಟಿಕೆಟ್ ಬುಕ್ ಮಾಡಿಕೊಳ್ಳಬಹುದು.

ಅಧಿಕೃತ ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಿ
ಮೇ ತಿಂಗಳಲ್ಲಿ ತಿರುಮಲಕ್ಕೆ ಭೇಟಿ ನೀಡಲು ಯೋಜಿಸುವ ಭಕ್ತರು ಅಧಿಕೃತ ವೆಬ್‌ಸೈಟ್ ttdevasthanams.ap.gov.in ಮೂಲಕ ತಮ್ಮ ಟಿಕೆಟ್ ಕಾಯ್ದಿರಿಸಬಹುದು ಹೆಚ್ಚಿನ ಬೇಡಿಕೆಯ ಕಾರಣ, ಭಕ್ತರು ತಮ್ಮ ಬುಕಿಂಗ್ ಅನ್ನು ಸಾಧ್ಯವಾದಷ್ಟು ಬೇಗ ಪಡೆದುಕೊಳ್ಳಲು ಸಲಹೆ ನೀಡಲಾಗುತ್ತದೆ.
ಟಿಕೆಟ್ ಬುಕ್ ಮಾಡುವುದು ಹೇಗೆ?
ಅಧಿಕೃತ TTD ವೆಬ್‌ಸೈಟ್‌ಗೆ https://www.tirumala.org/Home.aspx ಹೋಗಿ ಖಾತೆಗಾಗಿ ಹೆಸರು ನೋಂದಾಯಿಸಿ ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ ನಿಮ್ಮ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಪಾಸ್‌ಪೋರ್ಟ್‌ನಂತಹ ನಿಮ್ಮ ಫೋಟೋ ಮತ್ತು ಗುರುತಿನ ಪುರಾವೆಯನ್ನು ಅಪ್‌ಲೋಡ್ ಮಾಡಿ. ನಿಮ್ಮ ಪಾವತಿ ವಿಧಾನವನ್ನು ಆಯ್ಕೆಮಾಡಿ ದರ್ಶನ ಮತ್ತು ಸೇವೆಯ ಪ್ರಕಾರವನ್ನು ಆಯ್ಕೆಮಾಡಿಕೊಂಡು ನೀವು ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
ಯಾವೆಲ್ಲಾ ದಾಖಲೆಗಳು ಬೇಕು?
ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಪಾಸ್‌ಪೋರ್ಟ್ ಸೇಜ್ ಫೋಟೋ ದಾಖಲೆಗಳು ಬೇಕಾಗುತ್ತದೆ.
ಟಿಟಿಡಿ ವೆಬ್‌ಸೈಟ್‌ನಲ್ಲಿ ವಸತಿಗಾಗಿ ರೂಮ್ಸ್ ಕೂಡ ಬುಕ್ ಮಾಡಬಹುದು.
ನಿಮ್ಮಗೆ ದರ್ಶನ ಟಿಕೆಟ್‌ಗಳ ಜೊತೆಗೆ, ತಿರುಮಲ ಮತ್ತು ತಿರುಪತಿಯ ವಸತಿ ಕೋಟಾವನ್ನು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ತಂಗಲು ಕೊಠಡಿಗಳನ್ನು ಬಯಸುವ ಯಾತ್ರಾರ್ಥಿಗಳು TTD ಪೋರ್ಟಲ್ ಮೂಲಕ ಅವುಗಳನ್ನು ಬುಕ್ ಮಾಡಬಹುದು. ಭಾರೀ ಜನಸಂಖ್ಯೆಯ ನಿರೀಕ್ಷೆಯ ಕಾರಣ, ಬೇಗನೆ ಬುಕ್ ಮಾಡಿಕೊಳ್ಳಿ.
ನೀವು ವಂಚನೆಯ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರ ವಹಿಸಿ ಮತ್ತು ಅಧಿಕೃತ ಪೋರ್ಟಲ್ ಮೂಲಕ ಮಾತ್ರ ಟಿಕೆಟ್‌ಗಳನ್ನು ಕಾಯ್ದಿರಿಸುವಂತೆ ಟಿಟಿಡಿ ಭಕ್ತರಿಗೆ ಈಗಾಗಲೇ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಇನ್ನು, ತೀರ್ಥಯಾತ್ರೆ ಮಾಡಲು ಸಹ ದರ್ಶನ ಕಾರ್ಯವಿಧಾನಗಳು, ಸುರಕ್ಷತಾ ಕ್ರಮಗಳು ಮತ್ತು ದೇವಾಲಯದ ಪ್ರೋಟೋಕಾಲ್‌ಗಳಿಗೆ ಸಂಬಂಧಿಸಿದಂತೆ ಟಿಟಿಡಿ ಹೊರಡಿಸಿದ ಯಾವುದೇ ಅಪ್ಡೇಟ್ ಅಥವಾ ಮಾರ್ಗಸೂಚಿಗಳನ್ನು ಪರಿಶೀಲಿಸಲು ಸಲಹೆಗಳನ್ನು ಸಹ ನೀಡಲಾಗಿದೆ.
ಭಕ್ತರಿಗೆ ವಿವಿಧ ಟಿಕೆಟ್ ಕೋಟಾಗಳನ್ನು ಬಿಡುಗಡೆ
ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಮೇ ತಿಂಗಳಲ್ಲಿ ತಿರುಮಲ ಶ್ರೀವಾರಿಯ ದರ್ಶನಕ್ಕೆ ಬಯಸುವ ಭಕ್ತರಿಗೆ ವಿವಿಧ ಟಿಕೆಟ್ ಕೋಟಾಗಳನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. ಫೆಬ್ರವರಿ 22 ರಂದು, ಟಿಟಿಡಿ ಅಂಗಪ್ರದಕ್ಷಿಣಂ ಟೋಕನ್‌ಗಳನ್ನು ಬೆಳಗ್ಗೆ 10 ಗಂಟೆಗೆ ಬಿಡುಗಡೆ ಮಾಡಿದೆ.
ಶ್ರೀವಾಣಿ ಟ್ರಸ್ಟ್ ಟಿಕೆಟ್‌ಗಳನ್ನು ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡಿದೆ. ಹಾಗೆ, ಮಧ್ಯಾಹ್ನ 3 ಗಂಟೆಗೆ, ವಿಶೇಷವಾಗಿ ವಯೋವೃದ್ಧರು, ಅಂಗವಿಕಲರು ಮತ್ತು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಉಚಿತ ವಿಶೇಷ ದರ್ಶನ ಟೋಕನ್‌ಗಳನ್ನು ಬಿಡುಗಡೆ ಮಾಡಲಾಗಿದ್ದು, ಅವರು ಸಹ ತಿರುಮಲದಲ್ಲಿ ಆಶೀರ್ವಾದ ಪಡೆಯಲು ಅವಕಾಶವನ್ನು ಮಾಡಿಕೊಂಡಲಾಗಿದೆ.


Click it and Unblock the Notifications