ಭಾರತದ ಮಾರುಕಟ್ಟೆಯಲ್ಲಿ ಸೋಮವಾರದಂದು (ಜನವರಿ 4, 2021) ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯ ಟ್ರೆಂಡ್ ಅನುಸರಿಸಿ, ಭಾರತದಲ್ಲೂ ಬೆಲೆ ಹೆಚ್ಚಳ ಆಗಿದೆ. ಎಂಸಿಎಕ್ಸ್ ನಲ್ಲಿ ಫೆಬ್ರವರಿ ಚಿನ್ನದ ಫ್ಯೂಚರ್ಸ್ ಪ್ರತಿ 10 ಗ್ರಾಮ್ ಗೆ 600 ರುಪಾಯಿ ಹೆಚ್ಚಳವಾಗಿ 50,826ರಲ್ಲಿ ವಹಿವಾಟು ನಡೆಸಿದರೆ, ಬೆಳ್ಳಿ ದರವು ಕೇಜಿಗೆ 1700 ರುಪಾಯಿ ಮೇಲೇರಿ 69,800 ರುಪಾಯಿಯಲ್ಲಿ ವ್ಯವಹಾರ ನಡೆಸಿತು.
ಕಳೆದ ಎರಡು ವಾರದಿಂದ ಚಿನ್ನದ ಬೆಲೆಯಲ್ಲಿ ಅಂಥ ಏರಿಕೆ ಕಂಡಿರಲಿಲ್ಲ. ವಿಶ್ವದ ಹಲವು ಭಾಗಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದ ಆತಂಕವನ್ನು ಲಸಿಕೆಯು ನಿವಾರಣೆ ಮಾಡಿದಂತಿದೆ. ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ಬೆಲೆಯಲ್ಲಿ 0.17% ಏರಿಕೆ ಕಂಡಿದ್ದರೆ, ಬೆಳ್ಳಿ ಬೆಲೆಯು ಚಲನೆ ಕಂಡಿರಲಿಲ್ಲ.
ಇತರ ಬೆಲೆ ಬಾಳುವ ಲೋಹಗಳ ದರ
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರವು ಇಂದು ಎರಡು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿತು. ಡಾಲರ್ ಮೌಲ್ಯದಲ್ಲಿನ ದುರ್ಬಲತೆ ಹಾಗೂ ವಿಶ್ವಾದ್ಯಂತ ಹೆಚ್ಚುತ್ತಿರುವ ಕೊರೊನಾ ಹೊಸ ಪ್ರಕರಣಗಳು ಇದಕ್ಕೆ ಬೆಂಬಲವಾಯಿತು. ಸ್ಪಾಟ್ ಮಾರ್ಕೆಟ್ ನಲ್ಲಿ ಚಿನ್ನದ ದರವು 1% ಮೇಲೇರಿ, ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1917.76ರಂತೆ ವಹಿವಾಟು ನಡೆಸಿತು. ಇನ್ನು ಇತರ ಬೆಲೆ ಬಾಳುವ ಲೋಹಗಳ ಬೆಲೆಯನ್ನು ಗಮನಿಸುವುದಾದರೆ, ಬೆಳ್ಳಿಯು ಪ್ರತಿ ಔನ್ಸ್ ಗೆ 2.4% ಮೇಲೇರಿ, 26.98 ಯುಎಸ್ ಡಿಯಲ್ಲಿ ವ್ಯವಹರಿಸಿತು. ಪ್ಲಾಟಿನಂ 0.6% ಹೆಚ್ಚಳವಾಗಿ $ 1075.15ರಲ್ಲಿ ಹಾಗೂ ಪಲ್ಲಾಡಿಯಂ 0.6% ಏರಿ, $ 2461.95ರಲ್ಲಿ ವ್ಯವಹಾರ ನಡೆಸಿದವು.
$ 1830ಕ್ಕೆ ಕೆಳಗೆ ಇಳಿದರೆ ದುರ್ಬಲ ಆಗಬಹುದು
ಯುಎಸ್ ನಿಂದ ದೊಡ್ಡ ಮಟ್ಟದ ಆರ್ಥಿಕ ಉತ್ತೇಜನ ಕ್ರಮಗಳ ನಿರೀಕ್ಷೆ, ಯುಎಸ್ ಡಾಲರ್ ದುರ್ಬಲತೆ ವಿಸ್ತರಣೆ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೊಸ ಕೊರೊನಾ ಪ್ರಕರಣಗಳ ಹೆಚ್ಚಳದಿಂದಾಗಿ ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂಬಂತೆ ಭಾವ ಮೂಡಿಸಿದೆ. ಈ ಮಧ್ಯೆ ಆರ್ಥಿಕ ಚೇತರಿಕೆ ಸುಳಿವು ಮತ್ತು ಲಸಿಕೆ ಬಗ್ಗೆ ಭರವಸೆಯ ಕಾರಣಕ್ಕೆ ಕಮಾಡಿಟಿಯಲ್ಲಿ ದೊಡ್ಡ ಮಟ್ಟದ ಗಳಿಕೆಯನ್ನು ಮಿತಿಗೊಳಿಸಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ ಕಮಾಡಿಟೀಸ್ ರೀಸರ್ಚ್ ಹೆಡ್ ವಿ. ಹರೀಶ್ ಅಭಿಪ್ರಾಯ ಪಡುತ್ತಾರೆ. ಎಲ್ಲಿಯ ತನಕ ಚಿನ್ನದ ಬೆಲೆ ಔನ್ಸ್ ಗೆ $ 1890ರ ಮೇಲೆ ಇರುತ್ತದೋ ಅಲ್ಲಿಯ ತನಕ ಚಿನ್ನ ಮೇಲೇರುವ ಅವಕಾಶ ಇದ್ದೇ ಇದೆ. ಒಂದು ವೇಳೆ $ 1830ಕ್ಕೆ ಕೆಳಗೆ ಇಳಿದರೆ ದುರ್ಬಲ ಆಗಬಹುದು ಎಂದು ಸೇರಿಸುತ್ತಾರೆ.
ಯುಎಸ್ ಸೆನೆಟ್ ಫಲಿತಾಂಶದ ಕಡೆಗೆ ಚಿನ್ನದ ಹೂಡಿಕೆದಾರರ ಚಿತ್ತ
ಯು.ಎಸ್.ನ ಎರಡು ಸೆನೆಟ್ ಸ್ಥಾನಗಳ ಫಲಿತಾಂಶಕ್ಕಾಗಿ ಚಿನ್ನದ ವರ್ತಕರು ಎದುರು ನೋಡುತ್ತಿದ್ದಾರೆ. ಮಂಗಳವಾರದಂದು ಜಾರ್ಜಿಯಾದ ಎರಡು ಸ್ಥಾನಗಳ ಫಲಿತಾಂಶ ಬರಲಿದೆ. ಆ ಮೂಲಕ ಯಾರ ಹತೋಟಿಗೆ ಸಿಗಲಿದೆ ಚೇಂಬರ್ ಎಂಬುದು ನಿರ್ಧಾರ ಆಗಲಿದೆ. ಇದರ ಜತೆಗೆ ಬುಧವಾರದಂದು ಫೆಡ್ ಸಭೆಯಲ್ಲಿ ಚರ್ಚೆಯಾದ ಅಂಶಗಳು ಹೊರಬೀಳಲಿವೆ. ಇನ್ನು ಯುಎಸ್ ನಿರುದ್ಯೋಗ ದತ್ತಾಂಶ ಶುಕ್ರವಾರದಂದು ಗೊತ್ತಾಗುತ್ತದೆ. ಇನ್ನು ಡಾಲರ್ ಸೂಚ್ಯಂಕವು ಪ್ರತಿಸ್ಪರ್ಧಿ ಕರೆನ್ಸಿಗಳ ವಿರುದ್ಧ ದುರ್ಬಲವಾಗಿದ್ದು, ಇತರ ಕರೆನ್ಸಿಗಳು ಇರುವವರ ಪಾಲಿಗೆ ಚಿನ್ನದ ಖರೀದಿ ಅಗ್ಗವಾಗಿ, ಆಕರ್ಷಕವಾಗಿ ಕಂಡಿದೆ. ಇಟಿಎಫ್ ಒಳಹರಿವಿನಿಂದಾಗಿ ಚಿನ್ನದ ಖರೀದಿಯಲ್ಲಿ ಆಸಕ್ತಿ ತೋರಿದ್ದಾರೆ. ಈ ಮಧ್ಯೆ ವಿಶ್ವದ ಅತಿ ದೊಡ್ಡ ಚಿನ್ನದ ಇಟಿಎಫ್ ಫಂಡ್ ಹೋಲ್ಡಿಂಗ್ಸ್ 0.08% ಏರಿಕೆಯಾಗಿ, ಗುರುವಾರ 1,170.74 ಟನ್ ಇತ್ತು.
ಈ ವರ್ಷ ಕೂಡ ಚಿನ್ನಕ್ಕೆ ಬೇಡಿಕೆ ನಿರೀಕ್ಷೆ
ಲಿಕ್ವಿಡಿಟಿ ಪ್ರಾಶಸ್ತ್ಯದ ಕಾರಣಕ್ಕೆ ಕಳೆದ ವರ್ಷ ಚಿನ್ನ ಮತ್ತು ಬೆಳ್ಳಿಯು ಉಳಿದ ಎಲ್ಲ ಆಸ್ತಿಗಿಂತ ಹೆಚ್ಚಳ ಕಂಡುಬಂತು. ಜಾಗತಿಕವಾಗಿ ಕೈಗಾರಿಕೆ ಚಟುವಟಿಕೆಗಳಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಬೆಳ್ಳಿಯಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಕೊಟಕ್ ಸೆಕ್ಯೂರಿಟೀಸ್ ಹೇಳಿದೆ. ಕಳೆದ ವರ್ಷದಲ್ಲಿ ಚಿನ್ನದ ಬೆಲೆಯು 25% ಏರಿಕೆ ಕಂಡಿದ್ದರೆ, ಬೆಳ್ಳಿ ಬೆಲೆಯಲ್ಲಿ 50%ಗೂ ಹೆಚ್ಚು ಮೇಲೇರಿದೆ. ಈ ವರ್ಷ ಕೂಡ ಚಿನ್ನದ ಬಗ್ಗೆ ಸಕಾರಾತ್ಮಕವಾದ ಭಾವವನ್ನು ಹಲವು ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ. ಈ ವರ್ಷ ಕೂಡ ಹಣಕಾಸು ನೀತಿ ಹಾಗೂ ಇತರ ಅಂಶಗಳು ಚಿನ್ನಕ್ಕೆ ಪೂರಕವಾಗಿಯೇ ಇವೆ ಎಂದು ರೆಲಿಗೇರ್ ಬ್ರೋಕಿಂಗ್ ಅಭಿಪ್ರಾಯ ಪಟ್ಟಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications