ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಬೆಂಗಳೂರಿನ ಇಂದಿನ ಚಿನ್ನದ ಬೆಲೆ ಚೆಕ್‌ ಮಾಡಿ

ಬೆಂಗಳೂರು: ಚಿನ್ನದ ಮಾರಕಟ್ಟೆಯಲ್ಲಿ ಬಂಗಾರದ ಬೆಲೆ ಕಳೆದ ವಾರ ಏರಿಳಿತಗಳನ್ನು ಕಂಡಿತು ಆದರೆ, ಈ ವಾರದ ಆರಂಭದಲ್ಲಿ ಚಿನ್ನದ ಬೆಲೆಯಲ್ಲಿ ಯಾವ ವ್ಯತ್ಯಯವೂ ಆಗಿಲ್ಲ. ಬೆಳ್ಳಿ ಬೆಲೆಯೂ ಕೂಡ ಯಥಾಸ್ಥಿತಿಯಲ್ಲಿ ಇದೆ. ಹಾಗಿದ್ರೆ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಎಷ್ಟಿದೆ? ಇಲ್ಲಿದೆ ಹೆಚ್ಚಿನ ಮಾಹಿತಿ

ಪ್ರಸ್ತುತ ಬೆಂಗಳೂರಲ್ಲಿ 22 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂ.ಗೆ 71,400 ರೂಪಾಯಿಯಲ್ಲಿ ವಹಿವಾಟಾಗುತ್ತಿದೆ. 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ 10 ಗ್ರಾಂ.ಗೆ 77,890ರೂಪಾಯಿ ಇದ್ದು, 24K, 22K, ಮತ್ತು 18K ಚಿನ್ನದ ಬೆಲೆಗಳು ಯಥಾಸ್ಥಿತಿಯಲ್ಲಿ ಇವೆ. ಇನ್ನೂ ಬೆಳ್ಳಿಯ ಬೆಲೆಯಲ್ಲಿ ಸಹ ಯಾವುದೇ ಬದಲಾವಣೆ ಇಲ್ಲ. 18 ಕ್ಯಾರೆಟ್ ಚಿನ್ನದ ದರಗಳು ಪ್ರಸ್ತುತ 100 ಗ್ರಾಂ.ಗೆ 5,84,200 ರೂಪಾಯಿ ಇದ್ದು, ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ದರೆ ಯಾವುದೇ ಬದಲಾವಣೆಗಳು ಇಲ್ಲ.

ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ : ಇಲ್ಲಿದೆ  ಮಾಹಿತಿ

ಚಿನ್ನದ ಬೆಲೆಯೂ ಇತ್ತೀಚಿಗೆ ತೀವ್ರ ಕುಸಿತವನ್ನು ಅನುಭವಿಸುತ್ತಿದ್ದು, ಬೆಂಗಳೂರಿನ ಚಿನ್ನದ ದರಗಳು ಸತತ ಮೂರನೇ ಅವಧಿಗೆ ಸ್ಥಿರವಾಗಿದೆ.ಮಾರುಕಟ್ಟೆ ವೀಕ್ಷಕರು ಮತ್ತು ಹೂಡಿಕೆದಾರರಿಂದ ಗಮನವನ್ನು ಚಿನ್ನದ ಬೆಲೆ ಸೆಳೆದಿದೆ. ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರು ಫೆಡರಲ್ ರಿಸರ್ವ್ ತನ್ನ ಮುಂಬರುವ ಸಭೆಯಲ್ಲಿ ಡಿಸೆಂಬರ್ 17 ಮತ್ತು 18 ರಂದು ಸಂಭಾವ್ಯ ಬಡ್ಡಿದರ ಕಡಿತವನ್ನು ನಿರೀಕ್ಷಿಸಿದ್ದರಿಂದ ಸೋಮವಾರ ಚಿನ್ನದ ಬೆಲೆಗಳು ಸ್ವಲ್ಪ ಏರಿಕೆ ಕಂಡಿವೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು

ಕ್ರಮ
ಸಂಖ್ಯೆ
ನಗರಗಳು24 ಕ್ಯಾರೆಟ್22 ಕ್ಯಾರೆಟ್
1ದೆಹಲಿ78,040 ರೂ71,550 ರೂ
2ಮುಂಬೈ77,890ರೂ71,400ರೂ
3ಚೆನ್ನೈ77,890 ರೂ71,400 ರೂ
4ಕೋಲ್ಕತ್ತಾ77,890 ರೂ71,400 ರೂ

ಬೆಂಗಳೂರಿನಲ್ಲಿ ಚಿನ್ನದ ಬೆಲೆ, ಡಿಸೆಂಬರ್‌-14: 22k/100g ಚಿನ್ನ 9,000 ರೂ. ಇಳಿಕೆ, ಬೆಳ್ಳಿ ಬೆಲೆ ರೂ. 1000/kg ಇಳಿಕೆ

ಬೆಂಗಳೂರಿನಲ್ಲಿ ಇಂದಿನ ಬೆಳ್ಳಿ ಬೆಲೆ

ಬೆಂಗಳೂರಿನಲ್ಲಿ 1 ಕಿಲೋಗ್ರಾಂ ಬೆಳ್ಳಿ ಯಾವುದೇ ಬದಾಲಾವಣೆಗಳು ಇಲ್ಲ. 1 ಕಿಲೋಗ್ರಾಂ ಬೆಳ್ಳಿಗೆ ಪ್ರಸ್ತುತ 89,500 ರೂಪಾಯಿ ಇದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 8,950 ರೂಪಾಯಿ ಇದೆ. ಈ ವಾರದ ಆರಂಭದಲ್ಲಿ ಸತತ ಕುಸಿತದ ನಂತರ ಬಿಳಿ ಲೋಹದ ಬೆಲೆಗಳು ಕಳೆದ ಎರಡು ದಿನಗಳಿಂದ ಯಥಾಸ್ಥಿಯಲ್ಲಿ ಇವೆ.

MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ಚಿನ್ನದ ಬೆಲೆಯೂ ಇಂದು ಶೇ.0.15 ರಷ್ಟು ಕಡಿಮೆ ವಹಿವಾಟು ನಡೆಸುತ್ತಿದೆ. ರೂ. 10 ಗ್ರಾಂಗೆ 77,019 ರೂಪಾಯಿಯ ವಹಿವಟುವಿದ್ದು,ಇದಕ್ಕೆ ವ್ಯತಿರಿಕ್ತವಾಗಿ, ಮಾರ್ಚ್ 5, 2025 ರ ಬೆಳ್ಳಿ ಬೆಲೆಯೂ ಕಳೆದ ಎರಡು ಸೆಷನ್‌ಗಳಿಂದ ಲಾಭಗಳನ್ನು ವಿಸ್ತರಿಸುತ್ತಿದೆ. ಶೇ. 0.07 ರಷ್ಟು ಏರಿಕೆಯಾಗಿದೆ.

ಡಿಸೆಂಬರ್ 16 ರಂದು ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು

ರಾಯಿಟರ್ಸ್ ಪ್ರಕಾರ ಸ್ಪಾಟ್ ಚಿನ್ನವು ಜಾಗತಿಕ ಮಟ್ಟದಲ್ಲಿ ಶೇ. 0.1 ರಷ್ಟು ಏರಿಕೆಯಾಗಿತು.05:32 GMT ನಂತೆ ಪ್ರತಿ ಔನ್ಸ್‌ಗೆ $2,650.86 ನಂತೆ ವಹಿವಾಟು ನಡೆಸಿತು.ಯುಎಸ್ ಚಿನ್ನದ ಬೆಲೆಯೂ ಸ್ವಲ್ಪ ಕುಸಿತವನ್ನು ಕಂಡಿದ್ದು,ಶೇ.0.2 ರಷ್ಟು ಕುಸಿದು $2,669.00ನಲ್ಲಿದೆ.

ಸ್ಪಾಟ್ ಸಿಲ್ವರ್ ಜಾಗತಿಕ ಮಟ್ಟದಲ್ಲಿ ಶೇ.0.2 ಕುಸಿತ ಕಂಡಿದೆ. ಪ್ರತಿ ಔನ್ಸ್ಗೆ $30.50 ಕ್ಕೆ ಸ್ಥಿರವಾಗಿದೆ. ಈ ವಾರದ ನಂತರ ಯುಎಸ್ ಫೆಡರಲ್ ರಿಸರ್ವ್ ಸಂಭಾವ್ಯ ಬಡ್ಡಿದರ ಕಡಿತವನ್ನು ಹೂಡಿಕೆದಾರರು ನಿರೀಕ್ಷಿಸುತ್ತಿರುವುದರಿಂದ ಚಿನ್ನದ ಬೆಲೆಗಳಲ್ಲಿ ಸಾಧಾರಣ ಏರಿಕೆ ಕಂಡಿದೆ.

ಭಾರತೀಯರು ಚಿನ್ನದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ.ಮಹಿಳೆಯರು ಹಬ್ಬಗಳು, ಶುಭ ಕಾರ್ಯಗಳು ಮತ್ತು ಇತರ ಆಚರಣೆಗಳಲ್ಲಿ ಚಿನ್ನದ ಆಭರಣಗಳನ್ನು ಖರೀದಿಸುತ್ತಾರೆ. ಅದರಲ್ಲೂ ವರ್ಷ ಅಂತ್ಯ ಡಿಸೆಂಬರ್‌ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಗಮನಕ್ಕೆ ಚಿನ್ನವನ್ನು ಹೆಚ್ಚು ಖರೀದಿ ಮಾಡುತ್ತಾರೆ. ಈ ಕಾರಣದಿಂದಾಗಿ, ಈ ಸಮಯದಲ್ಲಿ ಸಾಮಾನ್ಯವಾಗಿ ಚಿನ್ನಕ್ಕೆ ಉತ್ತಮ ಬೇಡಿಕೆ ಇರುತ್ತದೆ. ಇದೀಗ ಚಿನ್ನದ ಬೆಲೆ ಇಳಿಕೆ ಆಗಿರುವುದರಿಂದ ಆಭರಣ ಖರೀದಿಗೆ ಉತ್ತಮ ಸಮಯ ಎನ್ನಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+