For Quick Alerts
ALLOW NOTIFICATIONS  
For Daily Alerts

Today Gold Rate: 50 ಸಾವಿರಕ್ಕಿಂತ ಕೆಳಗೆ ಚಿನ್ನ, 60 ಸಾವಿರಕ್ಕಿಂತ ಕಡಿಮೆ ಬೆಳ್ಳಿ ವಹಿವಾಟು

|

ವಿದೇಶಗಳಲ್ಲಿನ ಟ್ರೆಂಡ್ ಗೆ ವಿರುದ್ಧವಾಗಿ ಭಾರತದಲ್ಲಿ ಬುಧವಾರ (ಸೆಪ್ಟೆಂಬರ್ 23, 2020) ಚಿನ್ನದ ಬೆಲೆಯಲ್ಲಿ ಇಳಿಕೆಯಾಯಿತು. MCXನಲ್ಲಿ ಚಿನ್ನದ ಫ್ಯೂಚರ್ಸ್ ಅಕ್ಟೋಬರ್ ಡೆಲಿವರಿ ಬೆಳಗ್ಗೆ 11 ಗಂಟೆ ಹೊತ್ತಿಗೆ 462 ರುಪಾಯಿ ಇಳಿಕೆ ಕಂಡು, ಪ್ರತಿ 10 ಗ್ರಾಮ್ ಗೆ 49,919 ರುಪಾಯಿಯಲ್ಲಿ ವಹಿವಾಟು ನಡೆಸಿತು.

ಕೊರೊನಾದಿಂದ ವಿಮಾನ ಹಾರಾಟಕ್ಕೆ ನಿರ್ಬಂಧ; ಚಿನ್ನ ಕಳ್ಳಸಾಗಣೆಗೆ ಬ್ರೇಕ್ಕೊರೊನಾದಿಂದ ವಿಮಾನ ಹಾರಾಟಕ್ಕೆ ನಿರ್ಬಂಧ; ಚಿನ್ನ ಕಳ್ಳಸಾಗಣೆಗೆ ಬ್ರೇಕ್

ಇನ್ನು ಬೆಳ್ಳಿ ಪ್ರತಿ ಕೇಜಿಗೆ 2,246 ರುಪಾಯಿಯ ಭಾರೀ ಇಳಿಕೆ ಕಂಡು, 58,967ರಲ್ಲಿ ವಹಿವಾಟು ನಡೆಸಿತು. ಈ ಹಿಂದೆ ಬೆಳ್ಳೆ ಪ್ರತಿ ಕೇಜಿಗೆ 68 ಸಾವಿರ ರುಪಾಯಿ ಇತ್ತು. ಇನ್ನು ಆಗಸ್ಟ್ 8ನೇ ತಾರೀಕಿನಂದು ಪ್ರತಿ 10 ಗ್ರಾಮ್ ಚಿನ್ನದ ದರವು 56,200 ರುಪಾಯಿ ತಲುಪಿಕೊಂಡಿತ್ತು.

ಅಂತರರಾಷ್ಟ್ರೀಯ ಚಿನ್ನದ ಬೆಲೆ

ಅಂತರರಾಷ್ಟ್ರೀಯ ಚಿನ್ನದ ಬೆಲೆ

ಮತ್ತೆ ಚೀನಾ ಹಾಗೂ ಅಮೆರಿಕ ಮಧ್ಯೆ ಉದ್ವಿಗ್ನತೆ ಕಾಣಿಸಿಕೊಂಡಿರುವುದರಿಂದ ಹಾಗೂ ಇದರ ಜತೆಗೆ ಆರ್ಥಿಕ ಚೇತರಿಕೆ ಬಗ್ಗೆಯೂ ಇರುವ ಆತಂಕದ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಚಿನ್ನದ ದರ ಏರಿಕೆ ಕಂಡಿತು. ಆದರೆ ಪ್ರಬಲವಾದ ಡಾಲರ್ ಕಾರಣಕ್ಕೆ ಲಾಭದ ಪ್ರಮಾಣಕ್ಕೆ ಮಿತಿ ಬಿದ್ದಿತು. ಶಿಕಾಗೋ ಫೆಡ್ ಅಧ್ಯಕ್ಷ ಚಾರ್ಲ್ಸ್ ಇವಾನ್ ದರ ಏರಿಕೆ ಮಾಡಬಹುದು ಎಂದಿದ್ದಾರೆ. ಎರಡು ಪರ್ಸೆಂಟ್ ಗೆ ನಾವು ಸರಾಸರಿ ಮಾಡಿಕೊಳ್ಳುವ ಮುನ್ನ ಕೇಂದ್ರ ಬ್ಯಾಂಕ್ ನಿಂದ ದರ ಏರಿಕೆ ಮಾಡಬಹುದು. ಕೇಂದ್ರ ಬ್ಯಾಂಕ್ ನಿಂದ ಈಗಲೂ ಹೊಸದಾದ ಹಣದುಬ್ಬರ ಸರಾಸರಿ ಗುರಿಯ ಮೇಲೆ ಕೆಲಸ ಮಾಡಬಹುದು ಎಂದಿದ್ದಾರೆ. ಕಡಿಮೆ ಬಡ್ಡಿ ದರದ ಕಾಲ ಘಟ್ಟದಲ್ಲಿ ಏನೂ ಪ್ರತಿಫಲ ನೀಡದ ಚಿನ್ನದ ಗಟ್ಟಿಯನ್ನು ಇರಿಸಿಕೊಳ್ಳಲು ತಗುಲುವ ವೆಚ್ಚ ಕಡಿಮೆ.

ಹೂಡಿಕೆದಾರರರು ಈಗೇನು ಮಾಡಬೇಕು?

ಹೂಡಿಕೆದಾರರರು ಈಗೇನು ಮಾಡಬೇಕು?

ವಿಶ್ಲೇಷಕರು ಹಾಗೂ ತಜ್ಞರು ಹೇಳುವ ಪ್ರಕಾರ, ಯಾವಾಗೆಲ್ಲ ಚಿನ್ನದ ಬೆಲೆ 50 ಸಾವಿರ ರುಪಾಯಿಗಿಂತ ಕೆಳಗೆ ಇಳಿಯುತ್ತದೋ ಆಗೆಲ್ಲ ಖರೀದಿ ಮಾಡಬಹುದು. ಇವತ್ತಿನ ವ್ಯವಹಾರದ ರೀತಿಯಲ್ಲೇ ಐವತ್ತು ಸಾವಿರ ರುಪಾಯಿಗಿಂತ ಕೆಳಗೆ ಪ್ರತಿ ಹತ್ತು ಗ್ರಾಮ್ ಚಿನ್ನದ ದರ ಹೋದರೆ ಖರೀದಿ ಮಾಡಬೇಕು. ಅಲ್ಲಿಂದ ಆಚೆಗೂ ಏನಾದರೂ ಇಳಿದಲ್ಲಿ ಪ್ರತಿ ಗ್ರಾಮ್ ಗೆ ಐನೂರು, ಆರುನೂರು ರುಪಾಯಿ ಇಳಿದಾಗ ಸರಾಸರಿ ಮಾಡಿಕೊಳ್ಳಬಹುದು ಎನ್ನುತ್ತಾರೆ.

ಒಂದೆರಡು ವಾರದಲ್ಲಿ 53 ಸಾವಿರ ರುಪಾಯಿ

ಒಂದೆರಡು ವಾರದಲ್ಲಿ 53 ಸಾವಿರ ರುಪಾಯಿ

ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಮ್ ಗೆ ಐವತ್ತು ಸಾವಿರ ರುಪಾಯಿಗಿಂತ ಕೆಳಗೆ ಹೋಗುವ ನಿರೀಕ್ಷೆ ಹೆಚ್ಚಿದೆ. ಯಾರಿಗೆ ಹೆಚ್ಚಿನ ಲಾಭ ಕಾಣಬೇಕು ಅಂತಿರುತ್ತದೋ ಹಾಗೂ ಹೆಚ್ಚುವರಿ ಹಣ ಇರುತ್ತದೋ ಅಂಥವರು ಹೂಡಿಕೆ ಮಾಡಬಹುದು. ತಮ್ಮ ಪೋರ್ಟ್ ಫೋಲಿಯೋಗೆ ಚಿನ್ನವನ್ನು ಸೇರಿಸಿಕೊಳ್ಳುವುದಕ್ಕೆ ಇದು ಸೂಕ್ತ ಕಾಲ. ಪ್ರತಿ ಹತ್ತು ಗ್ರಾಮ್ ಗೆ 49,700 ಹಾಗೂ 49,800 ರುಪಾಯಿ ಇದ್ದಾಗ ಖರೀದಿ ಮಾಡಬೇಕು. ಮತ್ತು 52,500ರಿಂದ 53000 ರುಪಾಯಿ ತಲುಪಿದಾಗ ಲಾಭವನ್ನು ತೆಗೆದುಕೊಳ್ಳಬೇಕು ಎಂದು ವಿಶ್ಲೇಷಕರು ಸಲಹೆ ನೀಡುತ್ತಾರೆ. ಒಂದು ಸಲ ದರದಲ್ಲಿ ಸ್ಥಿರತೆ ಕಂಡುಕೊಂಡ ಮೇಲೆ ಒಂದೆರಡು ವಾರದಲ್ಲಿ MCXನಲ್ಲಿ 10 ಗ್ರಾಮ್ ಗೆ 53 ಸಾವಿರ ರುಪಾಯಿ ತಲುಪಬಹುದು ಎನ್ನುತ್ತಾರೆ.

English summary

Today Gold Rate: Gold Below 50000 And Silver At 59000

Today gold rate for 10 grams in India's MCX come below 50,000 and silver rate below 60,000. Here is an analysis.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X