ಕಳೆದ ವಾರ ಭಾರತ ಷೇರು ಮಾರುಕಟ್ಟೆಯಲ್ಲಿ ಮಹಾ ಕುಸಿತವಾಗಿದೆ. ದೇಶೀಯವಾಗಿ ಅತ್ಯಂತ ಮೌಲ್ಯಯುತ ಟಾಪ್ ಟೆನ್ ಕಂಪೆನಿಗಳ 3.35 ಲಕ್ಷ ಕೋಟಿ ರುಪಾಯಿ ಬಂಡವಾಳ ಮೌಲ್ಯ ಕರಗಿಹೋಗಿದೆ. ಕೊರೊನಾ ವೈರಾಣು ಭೀತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲಾಗಿದೆ.
ನಷ್ಟ ಹೊಂದಿದ ಷೇರುಗಳಲ್ಲೇ ಮುಂಚೂಣಿಯಲ್ಲಿ ಇರುವುದು ರಿಲಯನ್ಸ್ ಇಂಡಸ್ಟ್ರೀಸ್. 99,430.93 ಕೋಟಿ ಕೊಚ್ಚಿಹೋಗಿ, ಮಾರುಕಟ್ಟೆಯ ಒಟ್ಟು ಬಂಡವಾಳ ಮೌಲ್ಯ 8,42,262.64 ಕೋಟಿ ರುಪಾಯಿಗೆ ಕುಗ್ಗಿದೆ.ಫೆಬ್ರವರಿ 28ನೇ ತಾರೀಕಿನಂದು ಸೆನ್ಸೆಕ್ಸ್ ಸೂಚ್ಯಂಕವು ಇತಿಹಾಸದಲ್ಲೇ ಎರಡನೇ ಬಾರಿಗೆ ಒಂದು ದಿನದಲ್ಲಿ ಗರಿಷ್ಠ ಕುಸಿತಕ್ಕೆ ಸಾಕ್ಷಿಯಾಯಿತು.

ಫೆಬ್ರವರಿ 28ಕ್ಕೆ ಕೊನೆಯಾದ ಆ ಒಂದು ವಾರದಲ್ಲಿ ಸೆನ್ಸೆಕ್ಸ್ 2,872.83 ಪಾಯಿಂಟ್ ಕುಸಿತ ಕಂಡರೆ, ನಿಫ್ಟಿ 879.10 ಪಾಯಿಂಟ್ ಇಳಿಯಿತು. ಇನ್ನು ಯಾವ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ ಎಷ್ಟು ಕರಗಿತು ಎಂಬ ವಿವರ ಹೀಗಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 58,293.29 ಕೋಟಿ
ಎಚ್ ಡಿಎಫ್ ಸಿ 33,222.99 ಕೋಟಿ
ಹಿಂದೂಸ್ತಾನ್ ಯುನಿಲಿವರ್ 15,792.31 ಕೋಟಿ
ಎಚ್ ಡಿಎಫ್ ಸಿ ಬ್ಯಾಂಕ್ 21,369.47 ಕೋಟಿ
ಇನ್ಫೋಸಿಸ್ 27,830.35 ಕೋಟಿ
ಕೊಟಕ್ ಮಹೀಂದ್ರಾ ಬ್ಯಾಂಕ್ 12,821.28 ಕೋಟಿ
ಐಸಿಐಸಿಐ ಬ್ಯಾಂಕ್ 32,736.06 ಕೋಟಿ
ಎಸ್ ಬಿಐ 22,088.41 ಕೋಟಿ
ಭಾರ್ತಿ ಏರ್ ಟೆಲ್ 11,702.17 ಕೋಟಿ
ಈಕ್ವಿಟಿ ಮಾರ್ಕೆಟ್ ಹೂಡಿಕೆದಾರರ 5,45,452.52 ಕೋಟಿ ರುಪಾಯಿ ಸಂಪತ್ತು ನಷ್ಟವಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಗುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಷೇರು ಮಾರುಕಟ್ಟೆ ಇಂದು: ಟಿಸಿಎಸ್ ಫಲಿತಾಂಶದ ಅನಿರೀಕ್ಷಿತ ತಿರುವು!

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?



Click it and Unblock the Notifications