ಎಲ್ಲರ ಚಿತ್ತ ಸಿಎಂ ಸಿದ್ದರಾಮಯ್ಯ ಬಜೆಟ್ ನತ್ತ ನೆಟ್ಟಿದೆ... ಹೌದು,2025-26ನೇ ಸಾಲಿನ ರಾಜ್ಯ ಸರ್ಕಾರದ ಆಯವ್ಯಯ ಮಂಡನೆಗೆ ದಿನಗಣನೆ ಶುರುವಾಗಿದೆ.ಈ ಬಾರಿ ಸಿಎಂ ಸಿದ್ದರಾಮಯ್ಯ 16ನೇ ಬಜೆಟ್ ಮಂಡನೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ.ಹಾಗಿದ್ರೆ ಈ ಬಾರಿಯ ಬಜೆಟ್ ಅತಿ ಹೆಚ್ಚಾಗಿ ಗಮನವರಿಸಬಹುದಾದ ಬಜೆಟ್ ಪ್ರಮುಖ ಅಂಶಗಳು ಯಾವುವು? ಎಂಬ ಹೆಚ್ಚಿನ ವಿವರ ಇಲ್ಲಿದೆ.
ಈಗಾಗಲೇ ರಾಜ್ಯ ವಿಧಾನಮಂಡಲದಲ್ಲಿ ಅಧಿವೇಶನದ ಆರಂಭವಾಗಿದೆ.ಈ ಅಧಿವೇಶ ಮಾರ್ಚ್ 3 ರಿಂದ 21ರವರೆಗೆ ನಡೆಯಲಿದೆ. ಗುರುವಾರ ವಂದನಾ ನಿರ್ಣಯ ಕೈಗೊಳ್ಳಲಾಗುವುದು. ಮಾರ್ಚ್ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ 2025 -26 ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಮಾ. 10 ರಿಂದ 21ರವರೆಗೆ ಬಜೆಟ್ ಮೇಲೆ ಚರ್ಚೆಗಳು ನಡೆಯುತ್ತವೆ.

ಸಿಎಂ ಇದುವರೆಗೂ ಮಂಡಿಸಿರುವ ಬಜೆಟ್‌ಗಳ ವಿವರ
ಸಿಎಂ ಸಿದ್ದರಾಮಯ್ಯ ಕರ್ನಾಟಕದ ಹಣಕಾಸು ಸಚಿವರಾಗಿ 1994ರಲ್ಲಿ ಮೊದಲ ಬಾರಿ ಬಜೆಟ್ ಮಂಡಿಸಿದರು.ಆನಂತರ ಎರಡು ಬಾರಿ ಡಿಸಿಎಂ, ಎರಡು ಬಾರಿ ಸಿಎಂ ಆಗಿ ಬಜೆಟ್ ಮಂಡನೆ ಮಾಡುತ್ತಲೇ ಇದ್ದಾರೆ.ಈ ಬಾರಿ 16ನೇ ದಾಖಲೆಯನ್ನು ಬಜೆಟ್ ಮಂಡಿಸಲಿದ್ದು,ಈ ಬಜೆಟ್ ಮೇಲೆ ಜನಸಾಮಾನ್ಯರು ನಿರೀಕ್ಷೆಗಳ ಮಹಾಪರ್ವವನ್ನೇ ಇಟ್ಟುಕೊಂಡಿದ್ದಾರೆ. ಕರ್ನಾಟಕದಲ್ಲಿ ಇಷ್ಟು ಪ್ರಮಾಣದಲ್ಲಿ ಬಜೆಟ್ ಮಂಡಿಸಿದವರು ಸಿದ್ದರಾಮಯ್ಯ ಮಾತ್ರ.
ಬಜೆಟ್ ಗಾತ್ರ ಅಂದಾಜು 4 ಲಕ್ಷ ಕೋಟಿ ರೂ..
ಮೊದಲ ಬಾರಿಗೆ ಬಜೆಟ್ ಗಾತ್ರ ಅಂದಾಜು 4 ಲಕ್ಷ ಕೋಟಿ ರೂಗಳವರೆಗೆ ದಾಟಲಿದೆ ಎಂದು ಅಂದಾಜು ಮಾಡಲಾಗಿದೆ.ಇದಕ್ಕೂ ಮುಂಚಿತವಾಗಿ 2023-24ನೇ ಸಾಲಿನ ಬಜೆಟ್‌ನಲ್ಲಿ 3,12,708 ಕೋಟಿ ರೂ. ಪರಿಷ್ಕೃತ ಅಂದಾಜಿನ ಬದಲಾಗಿ, 2024-25ನೇ ಸಾಲಿನ ರಾಜ್ಯ ಬಜೆಟ್‌ನ ಒಟ್ಟು ವೆಚ್ಚ 3,71,383 ಕೋಟಿ ರೂ. ಎಂದು ನಿಗದಿಪಡಿಸಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದರು.
ಬಜೆಟ್ ಕೆಲವು ಪ್ರಮುಖಾಂಶಗಳ ವಿವರ
ಕಳೆದ ವರ್ಷದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ 27,353 ಕೋಟಿ ರೂ. ರಾಜಸ್ವ ಕೊರತೆಯ ಬಜೆಟ್ ಮಂಡನೆ ಮಾಡಿದ್ದರು.ಆದರೆ ಈ ಬಾರಿಯ ಬಜೆಟ್‌ನಲ್ಲಿ ರಾಜಸ್ವ ಕೊರತೆಯ ಬಜೆಟ್ ಮಂಡಿಸುವುದು ಬಹುತೇಕ ಖಚಿತವಾಗಿದೆ 21,900 ಕೋಟಿ ರೂ. ರಾಜಸ್ವ ಕೊರತೆ ಜಿಗಿತವಾಗುವ ಸಾಧ್ಯತೆ ಹೆಚ್ಚು ಇದೆ.
2024-25ನೇ ಸಾಲಿನ ಬಜೆಟ್‌ನಲ್ಲಿ ರಾಜಸ್ವ ವೆಚ್ಚ 2,90,531 ಕೋಟಿ ರೂ. ಎಂದು ಅಂದಾಜು ಮಾಡಲಾಗಿತ್ತು. ಆದರೆ, ಈ ಸಲದ ಬಜೆಟ್‌ನಲ್ಲಿ ವೇತನ ಪರಿಷ್ಕರಣೆ, ಬಡ್ಡಿ ಪಾವತಿ ಹೆಚ್ಚಳ, ಪಿಂಚಣಿ ಹೊರೆ, ಆಡಳಿತಾತ್ಮಕ ವೆಚ್ಚಗಳು ಹೆಚ್ಚಾಗುವ ಹಿನ್ನೆಲೆ ರಾಜಸ್ವ ವೆಚ್ಚ 3.20 ಲಕ್ಷ ಕೋಟಿ ರೂ. ದಾಟುವ ಅಂದಾಜು ಇದೆ.
- 2025-26ನೇ ಸಾಲಿನಲ್ಲಿ ಬಡ್ಡಿ ಪಾವತಿ ಅಂದಾಜು 45,000 ಕೋಟಿ ರೂ. ಏರಿಕೆಯಾಗುವ ಸಾಧ್ಯತೆ ಅಂತೂ ಇದೆ.
- ಕಳೆದ ವರ್ಷದ ಬಜೆಟ್‌ನಲ್ಲಿ ಸುಮಾರು 1,05,246 ಕೋಟಿ ರೂ. ಸಾಲ ಮಾಡಲು ಅಂದಾಜಿಸಿದ್ದರು. 2025-26ನೇ ಸಾಲಿನಲ್ಲಿ ಇನ್ನೂ ಹೆಚ್ಚಿನ ಸಾಲದ ಮೊರೆ ಹೋಗಲು ಚಿಂತನೆಯನ್ನು ನಡೆಸಲಾಗುತ್ತಿದೆ.
- ಈ ಸಲದ ಬಜೆಟ್‌ನಲ್ಲಿ ಸುಮಾರು 1.25 ಲಕ್ಷ ಕೋಟಿ ರೂ.ಸಾಲವನ್ನು ಮಾಡಲು ಆರ್ಥಿಕ ಇಲಾಖೆ ಅಧಿಕಾರಿಗಳು ನೀಡಿದ್ದು ಸಾಲದ ಪ್ರಮಾಣದಲ್ಲಿ ಏರಿಕೆಯಾಗಬಹುದು.
- ಕರ್ನಾಟಕ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳಿಗೆ ಸುಮಾರು 52 ಸಾವಿರ ಕೋಟಿ ರೂ. ಹಣವನ್ನು ಮೀಸಲಿಡುತ್ತಿದೆ, ಆದರೆ ಈ ವರ್ಷ ಗೃಹ ಲಕ್ಷ್ಮಿ ಯೋಜನೆ, ಅನ್ನ ಭಾಗ್ಯ ಯೋಜನೆಗಳಿಗೆ ಆರ್ಥಿಕ ಅಡೆತಡೆಯಾಗಿದೆ. ಇದರೊಂದಿಗೆ, ಬಾಕಿ ಬಿಡುಗಡೆಗಾಗಿ ಸರ್ಕಾರ ನಿರೀಕ್ಷೆಯಲ್ಲಿದೆ. ಈ ವರ್ಷದ ಬಜೆಟ್‌ನಲ್ಲಿ ಈ ಯೋಜನೆಗಳನ್ನು ಮುಂದುವಸುತ್ತದೆಯೋ
- ಅಥವಾ ಬದಲಾಯಿಸಲು ಹೊಸ ನೀತಿಗಳನ್ನು ಜಾರಿಗೊಳಿಸಲು ಕೆಲವೊಂದು ನಿರ್ಧಾರಳನ್ನು ತೆಗೆದುಕೊಳ್ಳತ್ತದೆಯೋ ಎಂಬುದು ಸಹ ನಿರ್ದಾರವಾಗುತ್ತದೆ.
- ತೆರಿಗೆ ಏರಿಸುವ ಪ್ರಯತ್ನವೂ ಈ ಬಾರಿಯೂ ಬಜೆಟ್‌ನ ಪ್ರಮುಖ ಅಂಶ ಅಬಕಾರಿ ಸೇರಿದಂತೆ ಅಗತ್ಯ ವಸ್ತುಗಳ ತೆರಿಗೆಯಲ್ಲಿ ಏರಿಕೆ ಮಾಡುವ ಸಾಧ್ಯತೆಗಳಿವೆ.
- ಬಜೆಟ್‌ಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಹಾರ ಮತ್ತು ನಾಗರಿಕ ಸರಬರಾಜು, ಸಮಾಜ ಕಲ್ಯಾಣ ಇಲಾಖೆ, ಕೃಷಿ, ತೋಟಗಾರಿಕೆ, ವಸತಿ,ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಲಿದ್ದಾರೆ. ಶಿಕ್ಷಣ, ಆರೋಗ್ಯ, ಕೃಷಿ ಇಲಾಖೆಗಳಿಗೆ ಹೆಚ್ಚಿನ ನೆರವು ನೀಡಬಹುದು
- ಸಾಂಸ್ಕೃತಿಕ ನಗರಿಯಾಗಿರುವ ಮೈಸೂರಿನ ಅಭಿವೃದ್ದಿ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಂದ ನಿರೀಕ್ಷಿತ ಕೊಡುಗೆ ಸಿಕ್ಕಿಲ್ಲ ಎನ್ನುವ ಅಭಿಪ್ರಾಯವಿದೆ.ಮೈಸೂರಿನ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಯಿದೆ.
- ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ವ್ಯಾಪ್ತಿ ದೊಡ್ಡದಾಗಿ ಅಭಿವೃದ್ದಿಗೆ ಅಡ್ಡಿಯಾಗುತ್ತಿದೆ ಎನ್ನುವ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಬಿಬಿಎಂಪಿಯನ್ನು ಏಳು ಪಾಲಿಕೆಗಳಾಗಿ ವಿಂಗಡಿಸಿ ಆಡಳಿತ ವಿಕೇಂದ್ರೀಕರಣ ಒತ್ತು ನೀಡುವ ನಿರೀಕ್ಷೆಗಳು ಇವೆ.ನಮ್ಮ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಹಿಂದೆ ಬಿದ್ದಿಲ್ಲ. ಕೃಷಿಕರಿಗೆ ಪೂರಕವಾಗಿ ಇರ್ತೀನಿ ಎಂಬ ಮಾತು ಕೊಡ್ತೀನಿ ಎಂದು ಹೇಳಿಕೆಯನ್ನುನ ಸಹ ನೀಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿಕರಿಗೂ ಹೆಚ್ಚಿನ ಒತ್ತು ನೀಡಲಿದ್ದಾರೆ.
ಕಾವೇರಿ ನೀರಿನ ಬೆಲೆ ಏರಿಕೆ, ಮುಡಾಪ್ರಕರಣ, ಗ್ಯಾರಂಟಿ ಯೋಜನೆಗಳ ಅಸಮರ್ಪಕ ಅನುಷ್ಠಾನ, ಸಾಲದ ಸುಳಿಯಲ್ಲಿ ಸರ್ಕಾರ, ಬೆಲೆ ಏರಿಕೆ. ಮೆಟ್ರೋ ದರ ಏರಿಕೆ, ಕೆಎಸ್‌ಆರ್ ಟಿಸಿ ದರ ಏರಿಕೆ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಸರ್ಕಾರದ ವಿರುದ್ಧ ಸಮರ ಸಾರಲು ಮುಂದಾಗಿವೆ.


Click it and Unblock the Notifications