For Quick Alerts
ALLOW NOTIFICATIONS  
For Daily Alerts

ಮೊಬೈಲ್ ಟವರ್ ಹಾನಿಯ ಜಿಯೋ ಆರೋಪ ನಿರಾಧಾರ ಎಂದ ವೊಡಾಫೋನ್ ಐಡಿಯಾ

|

ಪಂಜಾಬ್- ಹರ್ಯಾಣದಲ್ಲಿ ಜಿಯೋ ಮೊಬೈಲ್ ಟವರ್ ಗಳಿಗೆ ಹಾನಿ ಆಗಿರುವುದಕ್ಕೆ ಪ್ರತಿಸ್ಪರ್ಧಿಗಳ ವಿರುದ್ಧ ರಿಲಯನ್ಸ್ ಇಂಡಸ್ಟ್ರೀಸ್ ಮಾಡಿದ ಆರೋಪವನ್ನು ವೊಡಾಫೋನ್ ಐಡಿಯಾ ನಿರಾಕರಿಸಿದೆ. ಈ ಹಿಂದೆಯೇ ಭಾರ್ತಿ ಏರ್ ಟೆಲ್ ಈ ಆರೋಪವನ್ನು ನಿರಾಕರಿಸಿತ್ತು. ಇದೀಗ ವೊಡಾಫೋನ್ ಐಡಿಯಾ ಸೇರ್ಪಡೆ ಆಗಿದೆ.

"ದೇಶದ ಯಾವುದೇ ಆಪರೇಟರ್ ನೆಟ್ ವರ್ಕ್ ಇನ್ ಸ್ಟಲೇಷನ್ ಗಳಿಗೆ ಹಾನಿ ಆಗುವಂತೆ VIL ಎಂದಿಗೂ ಇಂಥ ಚಟುವಟಿಕೆಯಲ್ಲಿ ಭಾಗಿಯಾಗಲ್ಲ. ವಿಐಎಲ್ ಗೆ ತೊಂದರೆ ಮಾಡುವ ಮತ್ತು ದುಷ್ಪರಿಣಾಮ ಬೀರುವಂಥ ಕಾಲ್ಪನಿಕ ಪಿತೂರಿಯಂತಿದೆ ಇದು," ಎಂದು ಕಂಪೆನಿ ವಕ್ತಾರ ಹೇಳಿದ್ದಾರೆ.

ಪಂಜಾಬ್ ನಲ್ಲಿ ಜಿಯೋ ಮೊಬೈಲ್ ಟವರ್ ಗಳಿಗೆ ಹಾನಿ ಮಾಡಿದ ಪ್ರತಿಭಟನಾನಿರತರುಪಂಜಾಬ್ ನಲ್ಲಿ ಜಿಯೋ ಮೊಬೈಲ್ ಟವರ್ ಗಳಿಗೆ ಹಾನಿ ಮಾಡಿದ ಪ್ರತಿಭಟನಾನಿರತರು

ಅಗತ್ಯ ಸೇವೆಗೆ ಅಡೆತಡೆ ಮಾಡುವಂತೆ ಟೆಲಿಕಾಂ ಮೂಲಸೌಕರ್ಯ ಹಾನಿಗೊಳಿಸುವುದನ್ನು ವೊಡಾಫೋನ್ ಐಡಿಯಾ ಪ್ರಬಲವಾಗಿ ಖಂಡಿಸುತ್ತದೆ ಎಂದಿದೆ.

ಮೊಬೈಲ್ ಟವರ್ ಹಾನಿಯ ಜಿಯೋ ಆರೋಪ ನಿರಾಧಾರ ಎಂದ ವೊಡಾಫೋನ್ ಐಡಿಯಾ

"ರೈತರ ಪ್ರತಿಭಟನೆ ವೇಳೆ ನೆಟ್ ವರ್ಕ್ ಹಾನಿ ಮತ್ತು ಜಿಯೋದಿಂದ ಏರ್ ಟೆಲ್ ಗೆ ಗ್ರಾಹಕರು ವರ್ಗಾವಣೆ ಆಗುವುದರ ಹಿಂದೆ ಏರ್ ಟೆಲ್ ಇದೆ ಎಂಬ ಆರೋಪ ನಿರಾಧಾರ," ಎಂದು ಏರ್ ಟೆಲ್ ನಿಂದ ನಿಯಂತ್ರಕರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿತ್ತು.

ಜಿಯೋ ನೆಟ್ ವರ್ಕ್ ಗೆ ಹಾನಿ ಮಾಡಿ ಹಾಗೂ ಸಲ್ಲದ ಆರೋಪ ಹೊರೆಸಿ ಅದರ ಲಾಭವನ್ನು ಪಡೆಯಲು ಪ್ರತಿಸ್ಪರ್ಧಿ ಟೆಲಿಕಾಂ ಆಪರೇಟರ್ ಗಳು ಪ್ರಯತ್ನಿಸುತ್ತಿವೆ ಎಂದು ಟ್ರಾಯ್ ಗೆ ಜಿಯೋ ದೂರು ನೀಡಿತ್ತು. ಈ ದೂರು "ಸದಭಿರುಚಿಯಿಂದ ಕೂಡಿದ್ದಲ್ಲ" ಎಂದು ಏರ್ ಟೆಲ್ ಪ್ರತ್ಯುತ್ತರ ನೀಡಿದೆ.

English summary

Tower Disruption Allegation Of Reliance Jio Baseless, Said Vodafone Idea Limited

Mobile tower disruption allegation made by Reliance Jio is baseless, VIL said on Monday.
Story first published: Monday, January 4, 2021, 15:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X