ಬೆಂಗಳೂರಿನಲ್ಲಿ ಪ್ರತಿನಿತ್ಯವೂ ಒಂದೆಲ್ಲಾ ಒಂದು ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಸಂಚಾರ ದಟ್ಟಣೆಯನ್ನು ತಪ್ಪಿಸಲು ಸಂಚಾರಿ ಪೊಲೀಸರು ಒಂದೆಲ್ಲಾ ಪರ್ಯಾಯ ಮಾರ್ಗಗಳನ್ನು ಸೂಚನೆಯನ್ನು ಮಾಡುತ್ತಲೇ ಇರುತ್ತಾರೆ. ಅದೇ ರೀತಿ ಈ ಬಾರಿಮೂರು ತಿಂಗಳ ಕಾಲ ಈ ಮಾರ್ಗದಲ್ಲಿ ಸಂಚಾರ ಬಂದ್ ಆಗಿರುತ್ತದೆ ಯಾವುದು ಆ ಮಾರ್ಗ..? ಪರ್ಯಾಯ ಮಾರ್ಗಗಳು ಯಾವುವು? ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ.
ಹೌದು,ರೈಲ್ವೇ ಇಲಾಖೆ ವತಿಯಿಂದ ಕೆಆರ್.ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೆನ್ನಿಗಾನಹಳ್ಳಿಯಿಂದ ಕಸ್ತೂರಿನಗರ ಕಡೆ ಹೋಗುವ ರೈಲ್ವೇ ಪ್ಯಾರಲಲ್ ರಸ್ತೆಯಲ್ಲಿ ಬ್ರಿಡ್ಜ್ ನಿರ್ಮಾಣ ಕಾಮಗಾರಿ ನಡೆಯಲಿದೆ. ಇದಕ್ಕಾಗಿ ಇಂದಿನಿಂದ ಮೂರು ತಿಂಗಳ ಕಾಲ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ. ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸಂಚಾರಿ ಸಲಹೆಯನ್ನು ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ ಹಂಚಿಕೊಂಡಉ ಪರ್ಯಯ ಮಾರ್ಗಗಳನ್ನು ಕೂಡ ಸೂಚಿಸಿದ್ದಾರೆ.
ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆಗಳ ವಿವರ
ಬೆನ್ನಿಗಾನಹಳ್ಳಿ (ಸದಾನಂದನಗರ ಬ್ರಿಡ್ಜ್) ಕಡೆಯಿಂದ ಹಳೆ ಮದ್ರಾಸ್ ರಸ್ತೆಗೆ ಸೇರುವ ಕೋಕೊ ಕೋಲಾ ಗೋಡಾನ್ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರನ್ನು ತಾತ್ಕಾಲಿಕವಾಗಿ ನಿರ್ಬಂಧವನ್ನು ಮಾಡಲಾಗಿದೆ. ಸಾರ್ವಕನಿಕರಿಗೆ ಇದರಿಂದ ಹೆಚ್ಚಿನ ತೊಂದರೆಯ ಜೊತೆಗೆ ತಲುಪಯವ ಸಮಯ ಕೂಡ ಹೆಚ್ಚಾಗುತ್ತದೆ. ಸುತ್ತಿ ಬಳಸಿ ಬೇರೆ ಕಡೆ ಹೋಗುವುದರಿಂದ ಇಂಧನದ ಬಳಕೆ ಕೂಡ ಹೆಚ್ಚಾಗುತ್ತದೆ.
ಪರ್ಯಾಯ ಮಾರ್ಗಗಳು ಯಾವ್ಯಾವು..?
ಹಳೆ ಮದ್ರಾಸ್ ರಸ್ತೆ ಬೆನ್ನಿಗಾನಹಳ್ಳಿ ರೈಲ್ವೆ ಬ್ರಿಡ್ಜ್ ಕಡೆಯಿಂದ ಕಸ್ತೂರಿನಗರ ಕಡೆಗೆ ಹೋಗುವ ವಾಹನ ಸವಾರರು ಬೈಪಾಸ್ ಹೆಬ್ಬಾಳ ರಿಂಗ್ ರಸ್ತೆಯ ಮೂಲಕ ಕಸ್ತೂರಿನಗರದ ಕಡೆಗೆ ಹೋಗಬಹುದು ಇನ್ನೂ ಕಸ್ತೂರಿನಗರ ಕಡೆಯಿಂದ ಹಳೆ ಮದ್ರಾಸ್ ರಸ್ತೆ ಕಡೆಗೆ ಹೋಗುವ ವಾಹನ ಸವಾರರು ಸದಾನಂದನಗರ ಕಡೆಯಿಂದ ಎನ್.ಜಿ.ಇ.ಎಫ್ ಸಿಗ್ನಲ್ ಮೂಲಕ ಹಳೆ ಮದ್ರಾಸ್ ರಸ್ತೆ ಕಡೆಗೆ ಸಂಚರ ಮಾಡಬೇಕು ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ಸಂಚಾರ ದಟ್ಟಣೆ ಪಾರಲು ಇಲ್ಲಿವೆ ಕೆಲವು ಸಲಹೆಗಳು
- ಬೆಂಗಳೂರಿನಲ್ಲಿ ಪ್ರತಿನಿತ್ಯ ಪ್ರಯಾಣ ಮಾಡುವವರು ಸಂಚಾರಿ ಪೊಲೀಸರು ನೀಡುವ ಅಪ್‌ಡೇಟ್‌ಗಳನ್ನು ತಪ್ಪದೇ ಅನುಸರಿಸಬೇಕು.
- ಅತಿಹೆಚ್ಚು ಟ್ರಾಫಿಕ್ ಇರುವ ಸಮಯದಲ್ಲಿ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವುದು ಉತ್ತಮ.
- ವೇಗ ನಿಯಮವನ್ನು ಉಲ್ಲಂಘಿಸಬೇಡಿ.
- ಹೆಚ್ಚಿನ ಮಾಹಿತಿಗಾಗಿ ಸಂಚಾರಿ ಪೊಲೀಸ್ ಸಾಮಾಜಿಕ ಜಾಲತಾಣಗಳನ್ನು ಪೋಲೋ ಆಪ್ ಮಾಡಿ.
- ನೀವು ಕಚೇರಿಗೆ ಅಥವಾ ಇನ್ನೂ ಯಾವುದೋ ಕೆಲಸಕ್ಕೆ ಹೊರಟಟ್ಟರೆ ಒಂದು ಗಂಟೆ ಮೊದಲೇ ಮನಯನ್ನು ಬಿಡಿ.
ಕೆಆರ್ ಪುರದಲ್ಲಿ ಇಂದು ಸಂಚಾರ ಸಂಪರ್ಕ ದಿವಸ
ಇಂದು ಕೆಆರ್ ಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮವನ್ನು ಹಮ್ಮಿಗೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕೆಆರ್ ಪುರಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ನಾಗರಿಕರು ಸಂಚಾರ ಸಂಬಂಧಿತ ಯಾವುದೇ ಸಮಸ್ಯೆಗಳು ಅಭಿಪ್ರಾಯ, ಸಲಹೆಗಳನ್ನು ಕುರಿತು ಅಧಿಕಾರಿಗಳೊಂದಿಗೆ ಮುಕ್ತವಾಗಿ ಮಾತನಾಡುವ ಅವಕಾಶವನ್ನು ನೀಡಲಾಗಿದೆ. ಸ್ಥಳೀಯ ಸಂಚಾರ ವ್ಯವಸ್ಥೆ ಬಗ್ಗೆ ಉತ್ತಮ ಬದಲಾವಣೆ ತರಲು ಸಾರ್ವಜನಿಕರ ಸಹಭಾಗಿತ್ವ ಮುಖ್ಯ ಎಂದು ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಸಂಚಾರ ಸಮಸ್ಯೆಗಳಿಂದ ಬಳಲುತ್ತಿರುವವರು ಇದೋಂದು ಉತ್ತಮ ವೇದಿಕೆ.
ಒಟ್ಟಾರೆಯಾಗಿ ಹೇಳುವುದಾದರೆ ವೇಗವಾಗಿ ಬೆಖೆಯುತ್ತಿರುವ ಬೆಂಗಳೂರಿನಲ್ಲಿ ಒಂದೆಲ್ಲಾ ಒಂದು ಸಮಸ್ಯೆಗಳು ಇದ್ದೇ ಇರುತ್ತದೆ. ಅದರಲ್ಲಿ ಪ್ರಮುಖವಾಗಿ ಸಂಚಾರ ದಟ್ಟಣೆ ಸಮಸ್ಯೆಯಂತೂ ಜನರಿಗೆ ಪ್ರತಿನಿತ್ಯವೂ ತಲೆಬಿಸಿ ಮಾಡುತ್ತಲೇ ಇರುತ್ತದೆ. ಇದಕ್ಕೆ ಪೊಲೀಸ್‌ರು ಎಷ್ಟೇ ಸರ್ಕಾಸ್ ಮಾಡಿದ್ದರೂ ಈ ಸಮಸ್ಸೆಗಳು ಆಗಿಯೇ ಇರುತ್ತೇವೆ.


Click it and Unblock the Notifications