ಬೆಂಗಳೂರು ಟ್ರಾಫಿಕ್ ಹಬ್, ಟ್ರಾಫಿಕ್ ಸಿಟಿ ಅಂತಲೇ ಹೆಸರುವಾಸಿ. ಟ್ರಾಫಿಕ್ ನಿಯಂತ್ರಣಕ್ಕೆ ಬೆಂಗಳೂರು ಸಂಚಾರಿ ಪೊಲೀಸರು ಮಾಡದೇ ಇರುವ ಕಸರತ್ತಿಲ್ಲ. ದಿನೇ ದಿನೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನ ಹಲವೆಡೆ ಟ್ರಾಫಿಕ್‌ದೇ ಜಾಸ್ತಿ ಗೋಳಾಗಿದೆ. ಸಂಚಾರ ದಟ್ಟನೆ ನಿಯಂತ್ರಿಸುವುದಕ್ಕೆ ಕಷ್ಟಕರವಾಗಿದೆ.
ಹೌದು, ಬಿಡಬ್ಲ್ಯೂಎಸ್ಎಸ್ಬಿಯಿಂದ ಸುರಂಗ ಒಳಚರಂಡಿ ವ್ಯವಸ್ಥೆಯ ನಿರ್ಮಾಣಕ್ಕೆ ಅನುಕೂಲವಾಗುವಂತೆ ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ದೇವರಬೀಸನಹಳ್ಳಿ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಿದ್ದಾರೆ.

20 ದಿನಗಳ ಕಾಲ ವಾಹನ ಸಂಚಾರ ಬಂದ್
ಮಾರ್ಚ್ (7) ಶುಕ್ರವಾರದಿಂದ 20 ದಿನಗಳ ಕಾಲ ದೇವರಬೀಸನಹಳ್ಳಿ ಜಂಕ್ಷನ್‌ನಿಂದ (ಉಡುಪಿ ಗೋಕುಲ್ ಹೋಟೆಲ್ ಮುಂಭಾಗ) ಶ್ರೀ ಗೋಪಾಲಕೃಷ್ಣ ದೇವಸ್ಥಾನದವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಈ ಬಗ್ಗೆ ಪ್ರಕಟಣೆ ಸಂಚಾರ ಪೊಲೀಸರು, ಹೆಚ್.ಎ.ಎಲ್ ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಬೀಸನಹಳ್ಳಿ ಮುಖ್ಯ ರಸ್ತೆಯ ದೇವರಬೀಸನಹಳ್ಳಿ ಜಂಕ್ಷನ್ (ಉಡುಪಿ ಗೋಕುಲ್ ಹೋಟೆಲ್ ಮುಂದೆ) ನಿಂದ ಗೋಪಾಲಕೃಷ್ಣ ದೇವಸ್ಥಾನದ ವರೆಗೆ BWSSB ವತಿಯಿಂದ ಒಳಚರಂಡಿ ನಿರ್ಮಾಣ ಕಾಮಗಾರಿ ನಡೆಯಲಿದೆ.
ಆದ್ದರಿಂದ 14.03.2025 ರಿಂದ 20 ದಿನಗಳ ಕಾಲ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರ ನಿಯಮವನ್ನು ಬದಲಾವಣೆ ಮಾಡಲಾಗಿರುತ್ತದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ಪರ್ಯಾಯ ಮಾರ್ಗಗಳು ಯಾವುವು..?
ನೀವು ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ದೇವರಬೀಸನಹಳ್ಳಿ ಜಂಕ್ಷನ್ ಕಡೆಗೆ ಸಾಗುವ ವಾಹನಗಳು ದೇವರಬೀಸನಹಳ್ಳಿ ಗ್ರಾಮದ ಮೂಲಕ ಡಾ ಅಂಬೇಡ್ಕರ್ ಪ್ರತಿಮೆ ಮತ್ತು ನ್ಯೂ ಹಾರಿಜಾನ್ ಕಾಲೇಜು ಮೂಲಕ ಓಆರ್ಆರ್ ಮೂಲಕ ದೇವರಬೀಸನಹಳ್ಳಿ ಜಂಕ್ಷನ್ ತಲುಪಬೇಕು ಎಂದು ಮಾಹಿತಿಯನ್ನು ತಿಳಿಸಿದ್ದಾರೆ,
ಇನ್ನೂ ದೊಡ್ಡಕ್ಕನ್ನೆಲ್ಲಿ ರಸ್ತೆಯ ಮಾರ್ಗದಿಂದ ದೇವರಬೀಸನಹಳ್ಳಿ ಜಂಕ್ಷನ್ ಕಡೆಗೆ ಬರುವ ವಾಹನಗಳು ಎಟಿಸಿ ಜಂಕ್ಷನ್ ಮೂಲಕ ಪರ್ಯಾಯ ಮಾರ್ಗವನ್ನು ತೆಗೆದುಕೊಂಡು ಎಡ ತಿರುವು ಪಡೆದು ಇಕೋ ವರ್ಲ್ಡ್ ರಸ್ತೆ ಮೂಲಕ ದೇವರಬೀಸನಹಳ್ಳಿ ಜಂಕ್ಷನ್ ತಲುಪಬಹುದು ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಸದಾ ಟ್ರಾಫಿಕ್ ದಟ್ಟಣೆ ಹೆಚ್ಚಾಗಿರುತ್ತದೆ. ಹೀಗಾಗಿ ವಾಹನ ಸವಾರರಿಗಾಗಿ ಸಂಚಾರಿ ಪೊಲೀಸರು ಆಗಾಗ ಹಲವು ನಿರ್ಬಂಧಗಳನ್ನು ತರುತ್ತಾರೆ. ಇವುಗಳ ಉದ್ದೇಶ ಸಂಚಾರ ಅಡೆ-ತಡೆಗಳನ್ನು ಕಡಿಮೆ ಮಾಡುವುದಾಗಿದೆ. ಇದರ ಜೊತೆಗೆ ವಾಹನ ಸವಾರರ ಸುರಕ್ಷತೆಯೂ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ವಾಹನ ಸವಾರರು ಒಂದಷ್ಟು ಪ್ರಮುಖ ನಿಯಮಗಳನ್ನು ಅನುಸರಿಸಲೇ ಬೇಕಾಗುತ್ತದೆ.
ಸಂಚಾರ ದಟ್ಟಣೆ ನಿಯಂತ್ರಿಸಲು ಇಲ್ಲಿವೆ ಕೆಲವು ಸಲಹೆಗಳು
- ವಾಹನ ಸವಾರರು ಸಂಚಾರಿ ಪೊಲೀಸರ ಅಪ್‌ಡೇಟ್‌ಗಳನ್ನು ತಪ್ಪದೇ ಅನುಸರಿಸಬೇಕು
- ವಾಹನ ಸವಾರರು ಸಾಧ್ಯವಾದರೆ ಹೆಚ್ಚು ಟ್ರಾಫಿಕ್‌ನಿಂದ ಕೂಡಿದ ಸಮಯದಲ್ಲಿ ಸಂಚಾರ ತಪ್ಪಿಸಿದರೆ ಒಳ್ಳೆಯದು.
- ಅತಿಹೆಚ್ಚು ಟ್ರಾಫಿಕ್ ಇರುವ ಸಮಯದಲ್ಲಿ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವುದು ಉತ್ತಮ.-ಯಾವುದೇ ಕಾರಣಕ್ಕೂ, ಎಂಥದ್ದೇ ಸಂದರ್ಭದಲ್ಲೂ ವೇಗ ನಿಯಮ ಉಲ್ಲಂಘಿಸಬೇಡಿ
ಒಟ್ಟಿನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಇಲ್ಲದೇ ಇರುವುದನ್ನು ನೋಡುವುದೇ ಅಪರೂಪ. ಯಾವಗಲ್ಲೂ ಜನಜಂಗಳಿಯಿಂದ ಕೂಡಿರುತ್ತಲೇ ಇರುತ್ತದೆ.ಹಬ್ಬ-ಹರಿದಿನ, ಸರ್ಕಾರಿ ರಜಾ ದಿನಗಳು ಹೀಗೆ ಒಂದಷ್ಟು ದಿನಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಕೊಂಚ ಕಡಿಮೆ ಇರುತ್ತದೆ. ಆದರೆ ಹಬ್ಬದ ಹಿಂದಿನ ದಿನದವರೆಗೂ ಬೆಂಗಳೂರು ಟ್ರಾಫಿಕ್ ಮಯವಾಗಿರುತ್ತದೆ. ಇನ್ನು ಸರ್ಕಾರಿ ರಜೆಗಳಲ್ಲಿ ಅತಿಹೆಚ್ಚು ಜನ ಪ್ರಯಾಣ ಬೆಳೆಸಲು ರಸ್ತೆಗೆ ಇಳಿಯುವುದಿಲ್ಲ. ಇದೊಂದು ರೀತಿ ಟ್ರಾಫಿಕ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಆದರೆ ಪ್ರತಿದಿನ ಬೆಂಗಳೂರಿನಲ್ಲಿ ಟ್ರಾಫಿಕ್ ಅನ್ನೋದು ಒಂದಲ್ಲಾ ಒಂದು ರೀತಿಯಲ್ಲಿ ಬಿಸಿ ಪ್ರಯಾಣಿಕರಿಗೆ ಬಿಸಿ ಮುಟ್ಟಿಸುತ್ತಲೇ ಇರುತ್ತದೆ.


Click it and Unblock the Notifications