ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿ ಆಶೀರ್ವಾದಂ ಜಂಕ್ಷನ್‌ನಿಂದ ಬ್ರಿಗೇಡ್ ರಸ್ತೆಯ ಜಂಕ್ಷನ್‌ವರೆಗೆ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ವಾಹನ ಸಂಚಾರ ಬಂದ್ ಆಗಿದ್ದು,ಸಂಚಾರ ದಟ್ಟಣೆ ಹೆಚ್ಚಾಗಿದೆ. ದ್ವಿಚಕ್ರ ವಾಹನ ಸವಾರರು ಹಾಗೂ ವಾಹನ ಚಾಲಕರಿಗೆ ಪರದಾಡುವಂತಹ ಪರಿಸ್ಥಿತಿಯನ್ನು ಎದುರಾಗಿದೆ. ನಿನ್ನೆ ಕೂಡ ಇದೇ ವಾಹನ ದಟ್ಟಣೆ ಪರಿಸ್ಥಿತಿ ಇತ್ತು. ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆಯಾದರೂ, ಬ್ರಿಗೇಡ್ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ.
ಹೌದು, ಸಂಚಾರ ಪೊಲೀಸರು (ಬಿಟಿಪಿ) ಮೇ 31 ರವರೆಗೆ ರೆಸಿಡೆನ್ಸಿ ರಸ್ತೆಯ ಪ್ರಮುಖ ಭಾಗವನ್ನು ವೈಟ್-ಟಾಪಿಂಗ್‌ಗಾಗಿ ಮುಚ್ಚಿರುವುದರಿಂದ ಭಾನುವಾರ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ನ ಹಲವು ಭಾಗಗಳಲ್ಲಿ ವಾಹನಗಳು ಓಡಾಟ ಕಡಿಮೆಯಾಗಿದೆ.

ರೆಸಿಡೆನ್ಸಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ
ರೆಸಿಡೆನ್ಸಿ ರಸ್ತೆಯಲ್ಲಿ ಆಶೀರ್ವಾದಂ ಜಂಕ್ಷನ್ ನಿಂದ ಒಪೇರಾ ಜಂಕ್ಷನ್ ವರೆಗೆ ವೈಟ್ ಟ್ಯಾಪಿಂಗ್ ಮೇ 8 ರಂದು ಶುರುವಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ವಾಹನ ಸವಾರರ ಸುಗಮ ಸಂಚಾರದಿಂದ ಪರ್ಯಾಯ ಮಾರ್ಗವನ್ನು ಕಲ್ಲಿಸಲಾಗಿದೆ.
ಒಪೇರಾ ಹೌಸ್ ಜಂಕ್ಷನ್ ಮತ್ತು ಆಶೀರ್ವಾದಂ ಜಂಕ್ಷನ್ ಅನ್ನು ಸಂಪರ್ಕಿಸುವ ಹಾನಿಗೊಳಗಾದ ಪ್ರದೇಶದ ಎರಡೂ ತುದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ರಸ್ತೆ ಮುಚ್ಚುವಿಕೆಯಿಂದ ಸಾಮಾನ್ಯ ಸಂಚಾರಕ್ಕೆ ಅಡ್ಡಿಗಳು ಆಗುತ್ತಿವೆ.
ವಾಹನ ಸಂಚಾರದ ಮೇಲಿನ ನಿರ್ಬಂಧವು ಸೇಂಟ್ ಮಾರ್ಕ್ಸ್ ರಸ್ತೆ, ರಿಚ್ಯಂಡ್ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಂತಹ ಪಕ್ಕದ ರಸ್ತೆಗಳಲ್ಲಿ ದಟ್ಟಣೆಯನ್ನು ಉಂಟುಮಾಡುತ್ತಿದೆ.ಮಕ್ಯಾಶ್ ಫಾರ್ಮಸಿ ಜಂಕ್ಷನ್ ಮತ್ತು ಓಲ್ಡ್ ಪಿಎಸ್ ಜಂಕ್ಷನ್‌ನಂತಹ ಪ್ರಮುಖ ಸಹ ಈ ಬದಲಾವಣೆಗಳಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ಹಲಸೂರು, ವಿವೇಕನಗರ ಮತ್ತು ಅನಿಲ್ ಕುಂಬ್ಳೆ ವೃತ್ತದ ಕಡೆಗೆ ಹೋಗುವ ಪ್ರಯಾಣಿಕರಿಗೆ ಪ್ರಯಾಣದ ಸಮಯ ಹೆಚ್ಚಾಗುವ ನಿರೀಕ್ಷೆಯಿದೆ.
ಪರ್ಯಾಯ ಮಾರ್ಗಗಳು
ಸಂಚಾರ ದಟ್ಟಣೆಯನ್ನು ಮುಂದುವರಿಸಲು ಈ ಕೆಳಗಿನ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.
ರಿಕ್ಷ್ಮಂಡ್ ವೃತ್ತ ಮತ್ತು ರಿಚ್ಯಂಡ್ ಪ್ರೈಓವರ್‌ನಿಂದ ಸೇಂಟ್ ಮಾರ್ಕ್ಸ್ ರಸ್ತೆ ಮೂಲಕ ಎಚ್ ಎಎಲ್ ವಿಮಾನ ನಿಲ್ದಾಣ ಮತ್ತು ಮಾರತಹಳ್ಳಿ ಕಡೆಗೆ ಚಲಿಸುವ ವಾಹನಗಳು ಆಶೀರ್ವಾದಂ ವೃತ್ತದಲ್ಲಿ ಎಡಕ್ಕೆ ತಿರುಗಿ ಎಸ್‌ಬಿಐ ಜಂಕ್ಷನ್ ಮತ್ತು ಅನಿಲ್ ಕುಂಬ್ಳೆ ವೃತ್ತದ ಮೂಲಕ ಸಾಗಬೇಕು.
ಸೇಂಟ್ ಮಾರ್ಕ್ಸ್ ರಸ್ತೆಯಿಂದ ಹೊಸೂರು ರಸ್ತೆ ಮೂಲಕ ಆಡುಗೋಡಿ ಕಡೆಗೆ ಹೋಗುವ ವಾಹನಗಳಿಗೆ, ರೆಸಿಡೆನ್ಸಿ ರಸ್ತೆ, ಕಾನ್ವೆಂಟ್ ರಸ್ತೆ, ರಿಚ್ಯಂಡ್ ರಸ್ತೆ, ರೀನಿಯಸ್ ಕ್ರಾಸ್ ರಸ್ತೆ, ನಂಜಪ್ಪ ವೃತ್ತ ಮತ್ತು ಸಿಎಂಪಿ ಸೆಂಟರ್ ಜಂಕ್ಷನ್ ಶಿಫಾರಸು ಮಾಡಲಾಗಿದೆ.
ಹೊಸೂರು ರಸ್ತೆಯ ಆನೆಪಾಳ್ಯ ಜಂಕ್ಷನ್‌ನಿಂದ ಎಂಜಿ ರಸ್ತೆ ಕಡೆಗೆ ಸಂಚರಿಸುವ ಪ್ರಯಾಣಿಕರು ಸ್ಮಶಾನ ಅಡ್ಡ ರಸ್ತೆ, ನಂಜಪ್ಪ ವೃತ್ತ, ರಿಚ್ಯಂಡ್ ವೃತ್ತ, ಆರ್‌ಆರ್‌ಎಂಆರ್ ವೃತ್ತ, ಸಿದ್ದಲಿಂಗಯ್ಯ ವೃತ್ತ, ಅನಿಲ್ ಕುಂಬ್ಳೆ ವೃತ್ತದ ಮೂಲಕ ಸಂಚರಿಸಬೇಕು ಎಮದು ಮಾಹಿತಿಯನ್ನು ತಿಳಿಸಿದ್ದಾರೆ.
ಹೊಸೂರು ರಸ್ತೆಯ ಆನಪಾಳ್ಯ ಜಂಕ್ಷನ್‌ನಿಂದ ಎಂಜಿ ರಸ್ತೆ ಕಡೆಗೆ ಸಂಚರಿಸುವ ಪ್ರಯಾಣಿಕರು ಸ್ಮಶಾನ ಅಡ್ಡ ರಸ್ತೆ, ನಂಜಪ್ಪ ವೃತ್ತ, ರಿಚ್ಯಂಡ್ ವೃತ್ತ, ಆರ್‌ಆರ್‌ಎಂಆರ್ ವೃತ್ತ, ಸಿದ್ದಲಿಂಗಯ್ಯ ವೃತ್ತ, ಅನಿಲ್ ಕುಂಬ್ಳೆ ವೃತ್ತದ ಮೂಲಕ ಸಂಚರಿಸಬೇಕು.
ಆನೆಪಾಳ್ಯ ವೃತ್ತದಿಂದ ವಿವೇಕನಗರ ಮತ್ತು ಹಲಸೂರು ಕಡೆಗೆ ಚಲಿಸುವವರು ಹಳೆ ಪಿಎಸ್ ಜಂಕ್ಷನ್‌ನಲ್ಲಿ ಯು-ಟರ್ನ್ ತೆಗೆದುಕೊಂಡು ಕ್ಯಾಂಪ್ ಬೆಲ್ ಜಂಕ್ಷನ್ ಮತ್ತು ಮದರ್ ತೆರೇಸಾ ಜಂಕ್ಷನ್ ಮೂಲಕ ಮುಂದುವರಿಯಬೇಕು.
ಸಂಚಾಋ ದಟ್ಟನೆಯ ಕುರಿತು ಪುಲಕೇಶಿನಗರದ ನಿವಾಸಿ ಪುರುಷೋತ್ತಮ ಸೆಲ್ವಮಣಿ ಮಾತನಾಡಿ, ರೆಸಿಡೆನ್ಸಿ ರಸ್ತೆಯಲ್ಲಿ ಸಂಚಾರ ನಿರ್ಬಂಧವಿದ್ದ ಕಾರಣ, ಬಿಷಪ್ ಕಾಟನ್ ಬಾಲಕಿಯರ ಶಾಲೆಯಿಂದ ಅನಿಲ್ ಕುಂಬ್ಳೆ ವೃತ್ತದವರೆಗಿನ 1ಕಿ.ಮೀ ದೂರವನ್ನು ದ್ವಿಚಕ್ರ ವಾಹನದಲ್ಲಿ ಕ್ರಮಿಸಲು 20 ನಿಮಿಷಗಳನ್ನು ತೆಗೆದುಕೊಂಡ. ಟ್ರಾಫಿಕ್ ಕೆಟ್ಟದಾಗಿತ್ತು ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications