ಕೇಬಲ್ ಟಿವಿ ಗ್ರಾಹಕರಿಗೆ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ವರ್ಷದ ಆರಂಭದಲ್ಲೇ ಗುಡ್ ನ್ಯೂಸ್ ನೀಡಿದೆ. ತನ್ನ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ತರಲು ಮುಂದಾಗಿದ್ದು, ಇನ್ಮುಂದೆ ಕಡಿಮೆ ಬೆಲೆಗೆ ಹೆಚ್ಚು ಚಾನೆಲ್ ಲಭ್ಯವಾಗಲಿವೆ.
2020 ಮಾರ್ಚ್ 1ರಿಂದ ಅನ್ವಯವಾಗುವಂತೆ ಟ್ರಾಯ್ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದ್ದು, ಗ್ರಾಹಕರು ಕಡಿಮೆ ಹಣ ಪಾವತಿಸಿ ಹೆಚ್ಚು ಚಾನೆಲ್ ಪಡೆಯಬಹುದಾಗಿದೆ. ಕೇಬಲ್ ದರಗಳು ಜಾಸ್ತಿ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಬದಲಾವಣೆ ತರಲು ಮುಂದಾಗಿದೆ.
160 ರುಪಾಯಿಗೆ ಎಲ್ಲಾ ಉಚಿತ ಚಾನೆಲ್‌ಗಳು
ಟ್ರಾಯ್ ಹೊಸ ನಿಯಮದ ಪ್ರಕಾರ ಗ್ರಾಹಕರು 160 ರುಪಾಯಿ (ತೆರಿಗೆ ಬಿಟ್ಟು) ಪಾವತಿಸಿದರೆ ಅದಕ್ಕೆ ಲಭ್ಯವಿರುವ ಎಲ್ಲಾ ಉಚಿತ ಚಾನೆಲ್‌ಗಳನ್ನು ನೀಡಬೇಕು. ಈ ಮೂಲಕ ಕಡಿಮೆ ಹಣ ಪಾವತಿಸಿ ಹೆಚ್ಚಿನ ಚಾನೆಲ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಜನವರಿ 15 ರೊಳಗೆ ಕೇಬಲ್ ಟಿವಿ ಪ್ರಸಾರಕರು ಟ್ರಾಯ್ ಹೊಸ ನಿಯಮದನ್ವಯ ದರಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿಬೇಕು. ಆದರೆ ಈ ನಿಯಮಗಳು ಮಾರ್ಚ್ 1ರಿಂದ ಜಾರಿಗೆ ಬರಲಿವೆ.
200 ಚಾನೆಲ್‌ಗಳು ಫ್ರೀ
ಟ್ರಾಯ್ ಹೊಸ ನಿಯಮದ ಪ್ರಕಾರ ಗ್ರಾಹಕರು 153 ರುಪಾಯಿ (ತೆರಿಗೆ ಸೇರಿ) ಪಾವತಿಸಿದರೆ ಕನಿಷ್ಠ 200 ಚಾನೆಲ್‌ಗಳನ್ನು ಉಚಿತವಾಗಿ ನೀಡುವುದು ಕಡ್ಡಾಯವಾಗಿದೆ. ಕಡ್ಡಾಯವಾಗಿ ಪ್ರಸಾರ ಮಾಡಬೇಕು ಎಂದು ಕೇಂದ್ರ ಪ್ರಕಟಿಸಿದ್ದ 200 ಚಾನೆಲ್‌ಗಳು ಎಸ್‌ಸಿಎಫ್ ವ್ಯಾಪ್ತಿಗೆ ಬರುವುದಿಲ್ಲ. ಈ ಚಾನೆಲ್‌ಗಳನ್ನು ಹೊರತುಪಡಿಸಿ ಕೇಬಲ್ ಆಪರೇಟರ್‌ಗಳು 200 ಚಾನೆಲ್ ಉಚಿತವಾಗಿ ನೀಡಬೇಕಿದೆ.
130 ರುಪಾಯಿ ಎನ್‌ಸಿಎಫ್ ಶುಲ್ಕ
ಎನ್‌ಸಿಎಫ್ ಶುಲ್ಕ ಮಾರ್ಚ್ 1ರಿಂದ ಕಡಿಮೆ ಆಗಲಿದೆ. ಮಾಸಿಕ ಕಡ್ಡಾಯವಾಗಿ ಪಾವತಿ ಮಾಡಬೇಕಿರುವ ಎನ್‌ಸಿಎಫ್ ಶುಲ್ಕವನ್ನು 130 ರುಪಾಯಿಗೆ(ತೆರಿಗೆ ಬಿಟ್ಟು) ಸೀಮಿತಗೊಳಿಸಲಾಗಿದೆ. ಈ ಮೂಲಕ ತೆರಿಗೆ ಸೇರಿ 153 ರುಪಾಯಿ ಪಾವತಿಸಿದರೆ ಕೇಂದ್ರ ಸರ್ಕಾರದ ಕಡ್ಡಾಯ ಪ್ರಸಾರ ಮಾಡಬೇಕಿರುವ ಚಾನೆಲ್‌ಗಳು ಹೊರತುಪಡಿಸಿ 200 ಚಾನೆಲ್‌ಗಳು ಫ್ರೀ ಆಗಿ ಸಿಗಲಿದೆ.
ಒಂದಕ್ಕಿಂತ ಹೆಚ್ಚು ಕನೆಕ್ಷನ್‌ಗೆ ಗರಿಷ್ಠ 40 ಪರ್ಸೆಂಟ್ ಶುಲ್ಕ
ಕೇಬಲ್ ಗ್ರಾಹಕರು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಕನೆಕ್ಷನ್ ಹೊಂದಿದ್ದರೆ ಮೊದಲ ಕನೆಕ್ಷನ್ ಹೊರತುಪಡಿಸಿ ನಂತರ ಪಡೆಯುವ ಪ್ರತಿ ಕನೆಕ್ಷನ್‌ಗೆ ಗರಿಷ್ಠ 40 ಪರ್ಸೆಂಟ್ ಎನ್‌ಸಿಎಫ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಮೂಲಕ ಹೆಚ್ಚುವರಿ ಕನೆಕ್ಷನ್‌ಗೆ ಮೊದಲ ಕನೆಕ್ಷನ್‌ನಷ್ಟೇ ಹಣ ಪಾವತಿಸುವುದು ತಪ್ಪಲಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications