ಇತ್ತೀಚೆಗೆ ಭಾರೀ ನಷ್ಟದಿಂದ ಮುಚ್ಚಲ್ಪಟ್ಟ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ನಾರ್ತ್ ಕರೋಲಿನಾ ಮೂಲದ ಫಸ್ಟ್ ಸಿಟಿಜನ್ಸ್ ಬ್ಯಾಂಕ್ ಅಧಿಕೃತವಾಗಿ ಖರೀದಿ ಮಾಡಲಿದ್ದು ಇದು ಸುಮಾರು 2.7 ಬಿಲಿಯನ್ ಡಾಲರ್‌ನ ಡೀಲ್ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇನ್ನು ಕೆಲವು ಬ್ಯಾಂಕ್‌ಗಳು ಮುಚ್ಚುವ ಸೂಚನೆಗಳ ನಡುವೆ ಈ ಬೆಳವಣಿಗೆ ಕಂಡು ಬಂದಿದೆ. ಹಾಗೆಯೇ 2008ರ ಬಳಿಕ ನಡೆದ ಅತೀ ದೊಡ್ಡ ಬ್ಯಾಂಕಿಂಗ್ ವೈಫಲ್ಯ ಇದಾಗಿದೆ.
ಕ್ಯಾಲಿಫೋರ್ನಿಯಾ ಸಂತ ಕ್ಲಾರಾ ಮೂಲದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಬಿಕ್ಕಟ್ಟಿನಲ್ಲಿ ಇರುವ ವಿಚಾರ ಹೊರಬರುತ್ತಿದ್ದಂತೆ ಗ್ರಾಹಕರು ಬ್ಯಾಂಕ್‌ನಲ್ಲಿರುವ ತಮ್ಮ ಹಣವನ್ನು ವಿತ್‌ಡ್ರಾ ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ ಬ್ಯಾಂಕ್‌ನಲ್ಲಿ ಭಾರೀ ನಷ್ಟ ಉಂಟಾಗಿದೆ. ಭಾರೀ ನಷ್ಟದಲ್ಲಿದ್ದ ಈ ಬ್ಯಾಂಕ್ ಅನ್ನು ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾಪೋರೇಷನ್ ವಶಕ್ಕೆ ಪಡೆದು ಮುಚ್ಚಿದೆ.

ಎಸ್‌ವಿಬಿ ಹಾಗೂ ಸಿಗ್ನೇಚರ್ ಬ್ಯಾಂಕ್ ನಷ್ಟದಲ್ಲಿ ಮುಚ್ಚಲ್ಪಟ್ಟ ಬಳಿಕ ಎರಡು ಬ್ಯಾಂಕ್‌ಗಳನ್ನು ಮತ್ತೆ ಆರಂಭಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಾಗೆಯೇ ಇತರೆ ಬ್ಯಾಂಕುಗಳು ಯಾವುದೇ ನಷ್ಟಕ್ಕೆ ಒಳಗಾಗದಂತೆ ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾಪೋರೇಷನ್ ಮತ್ತು ಇತರೆ ರೆಗ್ಯೂಲೇಟರ್‌ಗಳು ಗಮನಹರಿಸುತ್ತಿದೆ. ಭಾನುವಾರ ಸಿಲಿಕಾನ್ ವ್ಯಾಲಿ ಬ್ಯಾಂಕ್ - ಫಸ್ಟ್ ಸಿಟಿಜನ್ ಡೀಲ್ ಬಗ್ಗೆ ಘೋಷಣೆಯನ್ನು ಮಾಡಲಾಗಿದೆ.
ಬ್ಯಾಂಕ್ ಡೀಲ್ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ
ಇನ್ನು ನಿನ್ನೆ ಅಂದರೆ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಮಧ್ಯಮ ಬಂಡವಾಳದ ಬ್ಯಾಂಕುಗಳಾದ ಕೀಕಾರ್ಪ್, ಜಿಯಾನ್, ಫಸ್ಟ್ ಹೊರಿಜನ್ ಷೇರುಗಳು ಶೇಕಡ 8ರಷ್ಟು ಏರಿಕೆ ಕಂಡಿದೆ. ಇನ್ನು ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಶೇಕಡ 23ರಷ್ಟು ಜಿಗಿದಿದೆ. ಮಧ್ಯಮ ಗಾತ್ರದ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಫಸ್ಟ್ ರಿಪಬ್ಲಿಕ್ ಬ್ಯಾಂಕ್, ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಂತೆಯೇ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಕೂಡಾ ಇದೇ ರೀತಿಯ ಬಿಕ್ಕಟ್ಟನ್ನು ಎದುರಿಸುತ್ತಿದ್ದು ಇದು ಹೂಡಿಕೆದಾರರಿಗೆ ಆತಂಕ ಉಂಟು ಮಾಡಿದೆ. ಈ ಬ್ಯಾಂಕ್ ಕೂಡಾ ಕುಸಿತವಾಗಬಹುದು ಎಂಬ ಆತಂಕ ಹೂಡಿಕೆದಾರರಲ್ಲಿ ಇದೆ. ಇದರಿಂದಾಗಿ ದೇಶದ 11 ದೊಡ್ಡ ಬ್ಯಾಂಕ್‌ಗಳು 30 ಬಿಲಿಯನ್ ಡಾಲರ್ ರೆಸ್ಕ್ಯೂ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ವಶಕ್ಕೆ ಪಡೆದ ಫಸ್ಟ್ ಸಿಟಿಜನ್ ಬ್ಯಾಂಕ್ 1898ರಲ್ಲಿ ಆರಂಭವಾಗಿದೆ. ಒಟ್ಟಾಗಿ 100 ಬಿಲಿಯನ್ ಡಾಲರ್ ಆಸ್ತಿಯನ್ನು ಬ್ಯಾಂಕ್ ಹೊಂದಿದೆ. ಹಾಗೆಯೇ 500ಕ್ಕಿಂತ ಅಧಿಕ ಬ್ರಾಂಚ್‌ಗಳನ್ನು ಹೊಂದಿದೆ. ಯುಎಸ್‌ನ 21 ಸ್ಟೇಟ್‌ಗಳಲ್ಲಿ ಈ ಬ್ಯಾಂಕ್‌ಗಳು ಇದೆ. ಇದರ ಕಳೆದ ತ್ರೈಮಾಸಿಕದಲ್ಲಿ ಫಸ್ಟ್ ಸಿಟಿಜನ್ ಬ್ಯಾಂಕ್‌ನ ನಿವ್ವಳ ಲಾಭವು 243 ಮಿಲಿಯನ್ ಡಾಲರ್ ಆಗಿದೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತವು ಯುಎಸ್‌ನ ಇತಿಹಾಸದಲ್ಲೇ ಅತೀ ಎರಡನೇ ಬ್ಯಾಂಕ್ ವೈಫಲ್ಯವಾಗಿದೆ. ಈ ಹಿಂದೆ 2008ರಲ್ಲಿ ವಾಷಿಂಗ್ಟನ್ ಮ್ಯೂಚುವಲ್ ಬ್ಯಾಂಕ್ ನಷ್ಟ ಯುಎಸ್‌ನ ಅತೀ ದೊಡ್ಡ ಬ್ಯಾಂಕಿಂಗ್ ವೈಫಲ್ಯವಾಗಿದೆ. ಮಾರ್ಚ್ 12ರಂದು ನ್ಯೂಯಾರ್ಕ್ ಮೂಲದ ಸಿಗ್ನೇಚರ್ ಬ್ಯಾಂಕ್ ಕೂಡಾ ನಷ್ಟದೊಂದಿಗೆ ಮುಚ್ಚಲ್ಪಟ್ಟಿದೆ. ಇದು ಯುಎಸ್‌ನ ಮೂರನೇ ಅತೀ ದೊಡ್ಡ ಬ್ಯಾಂಕ್ ವೈಫಲ್ಯವಾಗಿದೆ.
ಎರಡು ಪ್ರಕರಣದಲ್ಲಿ ಸರ್ಕಾರವು 250,000 ಬಿಲಿಯನ್ ಡಾಲರ್ ಫೆಡರಲ್ ವಿಮಾ ಮಿತಿಯನ್ನು ಮೀರಿದ ಠೇವಣಿಗಳನ್ನು ಕವರ್ ಮಾಡಲು ಒಪ್ಪಿಕೊಂಡಿದೆ. ಆದ್ದರಿಂದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಮತ್ತು ಸಿಗ್ನೇಚರ್ ಬ್ಯಾಂಕ್‌ನಲ್ಲಿ ಠೇವಣಿದಾರರು ತಮ್ಮ ಹಣವನ್ನು ಪಡೆಯಲು ಸಾಧ್ಯವಾಗಿದೆ. ಇನ್ನು ಫಸ್ಟ್ ಬ್ಯಾಂಕ್ ಮತ್ತು ಸಿಲಿಕಾನ್ ವ್ಯಾಲಿ ನಡುವೆ ಸುಮಾರು 2.7 ಬಿಲಿಯನ್ ಡಾಲರ್‌ನ ಡೀಲ್ ನಡೆಯುತ್ತಿದೆ.


Click it and Unblock the Notifications