ಅಮೆರಿಕಾ ಅರ್ಥ ವ್ಯವಸ್ಥೆಯ ಪುನಶ್ಚೇತನ: ಸುಂದರ್ ಪಿಚೈ, ಸತ್ಯ ನಾದೆಲ್ಲಾ ಸೇರಿದಂತೆ 200 ದಿಗ್ಗಜರ ನೇಮಕ

ಅಮೆರಿಕಾದ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು ಡೊನಾಲ್ಡ್ ಟ್ರಂಪ್ ಸರ್ಕಾರವು 200 ಪರಿಣತರನ್ನು ನೇಮಕ ಮಾಡಿಕೊಂಡಿದ್ದು, ಈ ಉದ್ಯಮ ದಿಗ್ಗಜರ ತಂಡದಲ್ಲಿ ಭಾರತ ಮೂಲದ ಆರು ಮಂದಿ ಪ್ರತಿಭಾನ್ವಿತರು ಸೇರ್ಪಡೆಯಾಗಿದ್ದಾರೆ.

ಕೊರೊನಾವೈರಸ್‌ನಿಂದಾಗಿ ಅಮೆರಿಕಾದ ಆರ್ಥಿಕ ವ್ಯವಸ್ಥೆಗೆ ಭಾರೀ ಹಾನಿ ಆಗಿದೆ. ಈ ಬಿಕ್ಕಟ್ಟಿನ ಬಲೆ ಒಳಗೆ ಸಿಲುಕಿರುವ ಅಮೆರಿಕಾದ ಅರ್ಥ ವ್ಯವಸ್ಥೆಯನ್ನು ಚೇತರಿಕೆಯ ಹಾದಿಗೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು ಅಮೆರಿಕಾ ಸರ್ಕಾರವು 200 ಪರಿಣತರನ್ನು ಒಳಗೊಂಡ 18 ಬಗೆಯ ತಂಡಗಳನ್ನು ರಚಿಸಿದೆ.

ಅಮೆರಿಕಾ ಅರ್ಥ ವ್ಯವಸ್ಥೆಯ ಚೇತರಿಕೆಗೆ 200 ದಿಗ್ಗಜರ ನೇಮಕ

ಭಾರತ ಸಂಜಾತರಾದ ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್‌ನ ಸಿಇಒ ಸತ್ಯ ನಾದೆಲ್ಲಾ, ಐಬಿಎಂನ ಅರವಿಂದ ಕೃಷ್ಣಾ, ಮೈಕ್ರೋನ್ಸ್ ಸಂಜಯ್ ಮೆಹ್ರೋತ್ರಾ ಈ ತಂಡದಲ್ಲಿದ್ದಾರೆ. ಜೊತೆಗೆ ಆ್ಯಪಲ್ ಟಿಮ್ ಕುಕ್, ಒರ್ಯಾಕಲ್‌ನ ಲ್ಯಾರಿ ಎಲಿಸನ್ ಮತ್ತು ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್‌ ಕೂಡ ಪರಿಣತರ ತಂಡದಲ್ಲಿದ್ದಾರೆ.

ಕೃಷಿ, ಬ್ಯಾಂಕಿಂಗ್, ನಿರ್ಮಾಣ, ಕಾರ್ಮಿಕರು, ರಕ್ಷಣೆ, ಇಂಧನ, ಹಣಕಾಸು ಸೇವೆ, ಆಹಾರ, ತಯಾರಿಕೆ, ರಿಯಲ್ ಎಸ್ಟೇಟ್, ರಿಟೇಲ್, ಸಾರಿಗೆ ಮತ್ತು ಕ್ರೀಡಾ ವಲಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+