ಭಾರತದ ಸಿಲಿಕಾನ್ ವ್ಯಾಲಿ ಎಂದು ಹೆಸರಾಗಿರುವ ಬೆಂಗಳೂರಿಗೆ ಹೈದರಾಬಾದ್ ಮತ್ತು ಗುರುಗ್ರಾಮ್‌ನಂತಹ ಮಹಾನಗರಗಳಿಂದ ಮಾತ್ರವಲ್ಲದೆ, ತುಮಕೂರಿನಂತಹ ಜಿಲ್ಲೆಗಳಿಂದಲ್ಲೂ ತೀವ್ರ ಪೈಪೋಟಿ ಎದುರಾಗುತ್ತಿದೆ. ತುಮಕೂರು ನಗರವು ಕೂಡವು ಬೆಂಗಳೂರಿನಂತೆ ವೇಗವಾಗಿ ಬೆಳೆಯಲು ಸಜ್ಜಾಗುತ್ತಿದೆ. ಹೂಡಿಕೆದಾರರ ಗಮನವನ್ನು ಸಳೆಯಲು ಹೊಸ ಪ್ರಯತ್ನಗಳನ್ನು ಮಾಡುತ್ತಿದೆ.

ತುಮಕೂರನ್ನು ಮುಂದಿನ ಐಟಿ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಸಕಲ ತಯಾರಿಯನ್ನು ನಡೆಸಲು ಜಿಲ್ಲಾ ಉಪ ಆಯುಕ್ತ (ಡಿಸಿ) ಶುಭಾ ಕಲ್ಯಾಣ್ ಅವರು ಐಟಿ ಉದ್ಯಮಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಸಭೆ ನಡೆಸಿದರು.
ಈ ಸಭೆಯಲ್ಲಿ ಜಿಲ್ಲೆಯಲ್ಲಿ ಐಟಿ ಕಂಪನಿಗಳಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಬಗ್ಗೆ ಚರ್ಚೆಯನ್ನು ಮಾಡಲಾಗಿದೆ. ನಮ್ಮ ತುಮಕೂರಿನಿಂದ ಪ್ರತಿ ದಿನ ಸುಮಾರು 4,000 ವೃತ್ತಿಪರರು ಈಗಾಗಲೇ ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯೇ ಕಂಪನಿಗಳನ್ನು ತೆರೆದರೆ ಅವರ ಪ್ರಯಾಣ ಸುಲಭವಾಗುತ್ತದೆ, ಕೆಲಸ ಮತ್ತು ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಕುಟುಂಬ ಜೀವನಕ್ಕೂ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಐಟಿ ಕಂಪನಿಗಳು ತುಮಕೂರಿಗೆ ಬಂದ್ರೆ ಏನು ಪ್ರಯೋಜನ?
ಐಟಿ ಕಂಪನಿಗಳು ತುಮಕೂರು ಜಿಲ್ಲೆಗೆ ಬಂದರೆ ಬಿಎಸ್ಸಿ, ಬಿಇ, ಎಂಸಿಎ ಪದವಿಗಳನ್ನು ಹೊಂದಿರುವ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗುತ್ತೇವೆ.ಇದರಿಂದ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಸಹಾಯವಾಗುತ್ತದೆ. ಇದಲ್ಲದೇ ರಸ್ತೆಗಳು, ವಿದ್ಯುತ್ ಸರಬರಾಜು ಮತ್ತು ಡಿಜಿಟಲ್ ಸಂಪರ್ಕದಂತಹ ಮೂಲಸೌಕರ್ಯಗಳೂ ಅಭಿವೃದ್ಧಿಗಳು ಹೆಚ್ಚಳವಾಗಿ ಆಗುತ್ತದೆ ಎಮದು ಹೇಳಿದ್ಧಾರೆ.
ಆರ್ಥಿಕ, ಶೈಕ್ಷಣಿಕ ಬೆಳವಣಿ
ಐಟಿ ಕಂಪನಿಗಳು ತುಮಕೂರಿನತ್ತ ಮುಖವನ್ನು ಮಾಡಿದ್ದರೆ ಆರ್ಥಿಕ ಮತ್ತು ಶೈಕ್ಷಣಿಕ ಬೆಳವಣಿಗೆಯಟಾಗುತ್ತದೆ. ತುಮಕೂರಿನಲ್ಲಿ ಕಾಲೇಜುಗಳು ಮತ್ತು ತರಬೇತಿ ಸಂಸ್ಥೆಗಳು ಐಟಿ ಆಧಾರಿತ ಕೋರ್ಸ್‌ಗಳನ್ನು ನೀಡಲು ಪ್ರಾರಂಭಿಸುವುದರಿಂದ, ಕೌಶಲ್ಯ ಹೆಚ್ಚಾಗುವುದರ ಜೊತೆಗೆ ಡಿಜಿಟಲ್ ಸಾಕ್ಷರತೆ ಕೂಡ ಹೆಚ್ಚಾಗುತ್ತದೆ. ಇದರಿಂದ ಸೈಬರ್ ಜಾಗೃತಿ ಮತ್ತು ಉದ್ಯೋಗ ಸೃಷ್ಟಿಗೆ ಅನುಕೂಲವಾಗುತ್ತದೆ.
36 ಐಟಿ ಉದ್ಯಮಿಗಳ ನಿಯೋಗ ಮೂಲಸೌಕರ್ಯ ತಾಣಗಳಿಗೆ ಭೇಟಿ
ಈಗಾಗಲೇ ತುಮಕೂರಿಗೆ 36 ಐಟಿ ಉದ್ಯಮಿಗಳ ನಿಯೋಗವು ಮೂಲಸೌಕರ್ಯ ತಾಣಗಳಿಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದೆ.ಎಂಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿರುವ 2,000 ಚದರ ಅಡಿ ವಿಸ್ತೀರ್ಣದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಅಲ್ಲದೆ, ಜಿಲ್ಲಾ ಗ್ರಂಥಾಲಯವನ್ನು ಸಹ ಪರಿಶೀಲಿಸಿ, ಅಗತ್ಯ ಬದಲಾವಣೆಗಳನ್ನು ಮಾಡುವ ಬಗ್ಗೆ ಚಿಂತಿಸಲಾಯಿತು. ಈ ಉಪಕ್ರಮಕ್ಕೆ ಬೆಂಬಲ ಸೂಚಿಸಿದ ನಿಯೋಗದ ಸದಸ್ಯರು, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಸಮುದಾಯಗಳನ್ನು ಉನ್ನತೀಕರಿಸಬಹುದು ಎಂದು ಮಾಹಿತಿಯನ್ನು ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, "ಐಟಿ ಕಂಪನಿಗಳು ಇಲ್ಲಿಗೆ ಬಂದರೆ, ಬಿಎಸ್ಸಿ, ಬಿಇ, ಎಂಸಿಎ ಪದವಿಗಳನ್ನು ಹೊಂದಿರುವ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಇದರಿಂದ ಸ್ಥಳೀಯ ಪ್ರತಿಭೆಗಳಿಗೆ ಅನುಕೂಲವಾಗುತ್ತದೆ ಎಂಧೂ ಅಭಿಪ್ರಾಯವನ್ನು ಪಟ್ಟಿದ್ದಾರೆ.
ಡಿಜಿಟಲ್ ಪ್ರವೇಶವು ಐಷಾರಾಮಿ ಅಲ್ಲ, ಇದು ಎಲ್ಲರನ್ನೂ ಒಳಗೊಂಡ ಬೆಳವಣಿಗೆಗೆ ಮೂಲಭೂತ ಅವಶ್ಯವಾಗಿದೆ" ಎಂದರು. ಡಿಜಿಟಲ್ ಸಂಪರ್ಕದ ಮೂಲಕ ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಅಂತರವನ್ನು ಕಡಿಮೆ ಮಾಡುವ ಬಗ್ಗೆಯೂ ತಂಡವು ಗಮನವನ್ನು ಹರಿಸುತ್ತಿದೆ ಎಂದು ಅಧಿಕಾರಿಗಳು ಬಬ್ಬರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ದರಗಳು, ಟ್ರಾಫಿಕ್ ಮತ್ತು ಮೂಲಸೌಕರ್ಯದ ಮೇಲಿನ ಒತ್ತಡದಿಂದಾಗಿ, ಕಂಪನಿಗಳು ಬೇರೆ ದಾರಿಗಳನ್ನು ಹುಡುಕುತ್ತಿವೆ. ಆಡಳಿತಾತ್ಮಕ ಬೆಂಬಲ ಮತ್ತು ಬೆಳೆಯುತ್ತಿರುವ ಮೂಲಸೌಕರ್ಯದೊಂದಿಗೆ ತುಮಕೂರು ಉತ್ತಮ ಸ್ಪರ್ಧಿಯಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯವನ್ನುಪಟ್ಟಿದ್ಧಾರೆ. ಬೆಂಗಳೂರು ವೇಗವಾಗಿ ಬೆಳೆಯದಿದ್ದರೆ, ಅದರ ಪಕ್ಕದಲ್ಲಿರುವ ಮುಂಬರುವ ಕೇಂದ್ರಗಳಿಂದ ಹಿಂದಿಕ್ಕಲ್ಪಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ ಐಟಿ ವಲಯವನ್ನು ಅಭಿವೃದ್ಧಿಪಡಿಸುವ ಪ್ರಯತ್ನವು ಆರ್ಥಿಕ ಬೆಳವಣಿಗೆಗೆ ಮತ್ತು ಉದ್ಯೋಗ ಸೃಷ್ಟಿಗೆ ದಾರಿಯಾಗುತ್ತೇವೆ,


Click it and Unblock the Notifications