ಟಿವಿಎಸ್ ಮೋಟಾರ್ ಕಂಪೆನಿ ಉದ್ಯೋಗಿಗಳಿಗೆ 20 ಪರ್ಸೆಂಟ್ ತನಕ ವೇತನ ಕಡಿತ

ಕೊರೊನಾ ವೈರಸ್ ಪರಿಣಾಮದಿಂದಾಗಿ ಟಿವಿಎಸ್ ಮೋಟಾರ್ ಕಂಪೆನಿಯು ತನ್ನ ಉದ್ಯೋಗಿಗಳಿಗೆ 20 ಪರ್ಸೆಂಟ್ ತನಕ ವೇತನ ಕಡಿತ ಘೋಷಣೆ ಮಾಡಿದೆ. ಈ ತಾತ್ಕಾಲಿಕ ವೇತನ ಕಡಿತವು ಆರು ತಿಂಗಳ ಅವಧಿಗೆ ಮಾತ್ರ ಎಂದು ಕಂಪೆನಿಯು ತಿಳಿಸಿದೆ. ಮಾರಾಟದಲ್ಲಿ ಭಾರೀ ಪ್ರಮಾಣದ ಇಳಿಕೆ ಆಗಿರುವುದರಿಂದ ದ್ವಿಚಕ್ರ ವಾಹನಗಳ ಮಾರಾಟ ಕಂಪೆನಿ ಟಿವಿಎಸ್ ಈ ತೀರ್ಮಾನಕ್ಕೆ ಬಂದಿದೆ.

ಅನಿರೀಕ್ಷಿತ ಆರ್ಥಿಕ ಬಿಕ್ಕಟ್ಟು ಉದ್ಭವಿಸಿರುವ ಕಾರಣಕ್ಕೆ ಟಿವಿಎಸ್ ಮೋಟಾರ್ ಕಂಪೆನಿಯು 2020ರ ಮೇ ತಿಂಗಳಿಂದ ಅಕ್ಟೋಬರ್ ತನಕ ಆರು ತಿಂಗಳ ಕಾಲ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ತಾತ್ಕಾಲಿಕ ವೇತನ ಕಡಿತ ಮಾಡಲಿದೆ ಎಂದು ಮಾಹಿತಿಯನ್ನು ನೀಡಲಾಗಿದೆ.

ಈ ವೇತನ ಕಡಿತವು ಕಾರ್ಮಿಕರ ಹಂತದಲ್ಲಿ ಮಾಡುವುದಿಲ್ಲ. ಇದೇನಿದ್ದರೂ ಉದ್ಯೋಗಿಗಳಿಗೆ ಅನ್ವಯಿಸಲಿದೆ. ಜೂನಿಯರ್ ಎಕ್ಸ್ ಕ್ಯೂಟಿವ್ ಹಂತದವರಿಗೆ 5 ಪರ್ಸೆಂಟ್, ಸೀನಿಯರ್ ಮ್ಯಾನೇಜ್ ಮೆಂಟ್ ಹಂತದವರಿಗೆ 15ರಿಂದ 20 ಪರ್ಸೆಂಟ್ ವೇತನ ಕಡಿತ ಮಾಡಲಾಗುವುದು.

ಟಿವಿಎಸ್ ಮೋಟಾರ್ ಕಂಪೆನಿ ಉದ್ಯೋಗಿಗಳಿಗೆ  20% ತನಕ ವೇತನ ಕಡಿತ

ಕಳೆದ ವರ್ಷಕ್ಕೆ ಹೋಲಿಸಿದರೆ ಟಿವಿಎಸ್ ಮೋಟಾರ್ ಕಂಪೆನಿಯ ದ್ವಿಚಕ್ರ ವಾಹನಗಳ ಮಾರಾಟವು ಮಾರ್ಚ್ ನಲ್ಲಿ 55 ಪರ್ಸೆಂಟ್ ಇಳಿಕೆ ಕಂಡಿದೆ. ಏಪ್ರಿಲ್ ತಿಂಗಳು ಪೂರ್ತಿಯಾಗಿ ಕೊರೊನಾ ಲಾಕ್ ಡೌನ್ ಇದ್ದುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಒಂದೇ ಒಂದು ವಾಹನ ಕೂಡ ಮಾರಾಟ ಮಾಡಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+