ಹ್ಯಾಕರ್ ಓರ್ವ ತಾನು ಸುಮಾರು 400 ಮಿಲಿಯನ್ ಟ್ವಿಟ್ಟರ್ ಬಳಕೆದಾರರ ಡೇಟಾವನ್ನು ಹೊಂದಿದ್ದೇನೆ ಎಂದು ಹೇಳಿದ್ದು ಸಾಕ್ಷಿಯಾಗಿ ಸಲ್ಮಾನ್ ಖಾನ್ ಹಾಗೂ ಸುಂದರ್ ಪಿಚೈ ಮೊದಲಾದವರ ಡೇಟಾವನ್ನು ಬಿಡುಗಡೆ ಮಾಡಿದ್ದಾರೆ. ಸುಮಾರು 400 ಮಿಲಿಯನ್ ಟ್ವಿಟ್ಟರ್ ಬಳಕೆದಾರರ ಡೇಟಾವನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ.
ಐರಿಷ್ ಡೇಟಾ ಪ್ರೊಟೆಕ್ಷನ್ ಕಮಿಷನ್ (ಡಿಪಿಸಿ) ಈ ಹಿಂದೆ ಸುಮಾರು 5.4 ಮಿಲಿಯನ್ ಟ್ವಿಟ್ಟರ್ ಬಳಕೆದಾರರ ಡೇಟಾ ಲೀಕ್ ಆದ ಬಗ್ಗೆ ತನಿಖೆ ಮಾಡಲಾಗುವುದು ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಈ ಸುದ್ದಿ ಬಂದಿದೆ. ಈ ಹಿಂದೆ ನವೆಂಬರ್‌ನಲ್ಲಿ ಟ್ವಿಟ್ಟರ್‌ನ ಡೇಟಾ ಲೀಕ್ ಆಗಿತ್ತು. ಇನ್ನು ತಾನು ಡೇಟಾವನ್ನು ಹ್ಯಾಕ್ ಮಾಡಿ ಕದ್ದಿದ್ದೇನೆ ಎಂದು ಹ್ಯಾಕರ್ ಸಾಬೀತು ಕೂಡಾ ಪಡಿಸಿದ್ದಾನೆ.
ಹ್ಯಾಕರ್ ಫಾರಮ್ಸ್‌ನಲ್ಲಿ ಈ ಹ್ಯಾಕರ್ ಸ್ಯಾಪಲ್ ಡೇಟಾವನ್ನು ಪೋಸ್ಟ್ ಮಾಡಿದ್ದಾರೆ. ಈ ಡೇಟಾದಲ್ಲಿ ಇಮೇಲ್ ಐಡಿ, ವಿಳಾಸ, ಯೂಸರ್ ನೇಮ್, ಫಾಲೋವರ್‌ಗಳ ಸಂಖ್ಯೆ, ಇಮೇಲ್ ಕ್ರಿಯೇಟ್ ಮಾಡಿದ ದಿನಾಂಕ, ಬಳಕೆದಾರರ ಫೋನ್ ಸಂಖ್ಯೆಯು ಕೂಡಾ ಇದೆ. ಇನ್ನು ಹ್ಯಾಕರ್ ಬಿಡುಗಡೆ ಮಾಡಿದ ಸ್ಯಾಪಲ್ ಡೇಟಾದಲ್ಲಿ ಪ್ರಮುಖ, ಪ್ರಸಿದ್ಧ ವ್ಯಕ್ತಿಗಳೇ ಇದ್ದಾರೆ. ಹಾಗಾದರೆ ಯಾರೆಲ್ಲ ಪ್ರಮುಖರ ಹೆಸರು ಇದೆ, ಏನಿದು ಡೇಟಾ ಲೀಕ್ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ಯಾರೆಲ್ಲ ಡೇಟಾ ಬಿಡುಗಡೆ?
- ಅಲೆಕ್ಸಾಂಡ್ರಿಯ ಒಕಾಸಿಯೊ ಕೋರ್ಟ್ಸ್
- ಸ್ಪೇಸ್ಎಕ್ಸ್ (SpaceX)
- ಸಿಬಿಎಸ್ ಮಿಡೀಯಾ
- ಡೊನಾಲ್ಡ್ ಟ್ರಂಪ್ ಜೂನಿಯರ್ (Donald Trump Jr.)
- ದೊಜಾ ಕ್ಯಾಟ್ (Doja Cat)
- ಚಾರ್ಲಿ ಪುತ್ (Charlie Puth)
- ಸುಂದರ್ ಪಿಚೈ
- ಸಲ್ಮಾನ್ ಖಾನ್
- ನಾಸಾದ ಜೆಡಬ್ಲ್ಯೂಎಸ್‌ಟಿ ಖಾತೆ (NASA's JWST account)
- ಎನ್‌ಬಿಎ
- ಭಾರತ ಸರ್ಕಾರದ ಮಾಹಿತಿ ಹಾಗೂ ಸಂವಹನ ಸಚಿವಾಲಯ (Ministry of Information and Broadcasting, India)
- ಶಾನ್ ಮೆಂಡೆಸ್
- ಡಬ್ಲ್ಯೂಎಚ್‌ಒನ ಸಾಮಾಜಿಕ ಜಾಲತಾಣ
ಡೇಟಾ ಲೀಕ್‌ನಿಂದ ಆಗುವುದೇನು?
ಇನ್ನು ಈ ಪ್ರಮುಖ ವ್ಯಕ್ತಿಗಳ ಡೇಟಾ ಬಿಡುಗಡೆ ಮಾಡಿರುವುದರಿಂದಾಗಿ ಆ ವ್ಯಕ್ತಿಗಳು ಭಾರೀ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಇನ್ನು ಈ ಪಟ್ಟಿಯಲ್ಲಿ ಭಾರತ ಸರ್ಕಾರದ ಸಚಿವಾಲಯ ಕೂಡಾ ಇರುವುದು ಆಶ್ಚರ್ಯ!. ಇಸ್ರೇಲ್‌ನ ಸೈಬಲ್ ಕ್ರೈಮ್ ಇಂಟಲಿಜೆಂಟ್ ಸಂಸ್ಥೆಯಾದ ಹಡ್ಸನ್ ರಾಕ್‌ನ ಸಹ ಸಂಸ್ಥಾಪಕ, ಸಿಟಿಒ ಅಲೋನ್ ಗಾಲ್ ಪ್ರಕಾರ ಈ ಡೇಟಾವನ್ನು ಎಪಿಐ ದುರ್ಬಲತೆ ಮೂಲಕ ಪಡೆಯಲಾಗಿದೆ. ಹಾಗೆಯೇ ನಟರು ಅಥವಾ ಪ್ರಮುಖ ವ್ಯಕ್ತಿಗಳಿಗೆ ಬೆದರಿಕೆ ನೀಡಲು ಅವಕಾಶ ಮಾಡಿಕೊಡುತ್ತದೆ.
ಹ್ಯಾಕರ್ ಹೇಳುವುದು ಹೀಗೆ
ಹ್ಯಾಕರ್ ತನ್ನ ಪೋಸ್ಟ್‌ನಲ್ಲಿ, "ಟ್ವಿಟ್ಟರ್ ಅಥವಾ ಎಲಾನ್ ಮಸ್ಕ್ ಇದನ್ನು ಓದುತ್ತಿದ್ದರೆ, ನೀವು ಈಗಾಗಲೇ 5.4 ಮಿಲಿಯನ್ ಡೇಟಾ ಲೀಕ್‌ನ ದಂಡವನ್ನು ಎದುರಿಸುತ್ತೀರಿ. ಆದರೆ ಒಮ್ಮೆ 400 ಮಿಲಿಯನ್ ಡೇಟಾ ಲೀಕ್‌ಗೆ ಸಂಬಂಧಿತ ದಂಡವನ್ನು ಲೆಕ್ಕ ಹಾಕಿಕೊಳ್ಳಿ ಅಥವಾ ಊಹಿಸಿಕೊಳ್ಳಿ. ನೀವು ಜಿಡಿಪಿಆರ್ ಪ್ರಕಾರವಾಗಿ ಫೇಸ್‌ಬುಕ್‌ನಂತೆ 276 ಮಿಲಿಯನ್ ಡಾಲರ್ ಅನ್ನು ಪಾವತಿ ಮಾಡುವುದನ್ನು ತಪ್ಪಿಸುವುದೇ ಉತ್ತಮ ಆಯ್ಕೆಯಾಗಿದೆ. ನೀವು ಈ ಡೇಟಾವನ್ನು ಖರೀದಿ ಮಾಡಿಕೊಂಡರೆ ಉತ್ತಮ," ಎಂದು ಹೇಳಿಕೊಂಡಿದ್ದಾರೆ.
ಡೇಟಾ ನೀವೇ ಖರೀದಿಸಿದರೆ ನಾನು ಬೇರೆಯವರಿಗೆ ಮಾರಲ್ಲ!
"ಡೇಟಾವನ್ನು ನೀವೇ ಖರೀದಿ ಮಾಡಿದರೆ ನಾನು ಬೇರೆ ಯಾರಿಗೂ ಡೇಟಾವನ್ನು ಮಾರಾಟ ಮಾಡುವುದಿಲ್ಲ. ನಾನು ಮಧ್ಯವರ್ತಿಗಳ ಮೂಲಕ ಡೀಲ್ ನಡೆಸಲು ಕೂಡಾ ಸಿದ್ಧವಾಗಿದ್ದೇನೆ. ಡೇಟಾವನ್ನು ಬೇರೆಯವರಿಗೆ ಮಾರಾಟ ಮಾಡದಿದ್ದರೆ, ರಾಜಕಾರಣಿಗಳು ಹಾಗೂ ಸೆಲೆಬ್ರೆಟಿಗಳು ಫಿಶಿಂಗ್, ಕ್ರಿಪ್ಟೋ ಹಗರಣ, ಸಿಮ್ ಸ್ವಾಪಿಂಗ್ ಮೊದಲಾದವುಗಳಿಂದ ತಪ್ಪಿಸಿಕೊಳ್ಳಬಹುದು. ರಾಜಕಾರಣಿಗಳ, ಸೆಲೆಬ್ರೆಟಿಗಳ ಡೇಟಾ ಲೀಕ್ ಆದಲ್ಲಿ ಸಂಸ್ಥೆಯ ಮೇಲಿನ ನಂಬಿಕೆಯನ್ನು ಜನರು ಕಳೆದುಕೊಳ್ಳುತ್ತಾರೆ," ಎಂದು ಎಚ್ಚರಿಕೆಯನ್ನು ಕೂಡಾ ಹ್ಯಾಕರ್ ನೀಡಿದ್ದಾನೆ.
ಇಕ್ಕಟ್ಟಿಗೆ ಸಿಲುಕಿದ ಎಲಾನ್ ಮಸ್ಕ್
ಟ್ವಿಟ್ಟರ್ ಅನ್ನು ತಾನು ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದಾಗ ಖರೀದಿ ಮಾಡಿರುವ ಎಲಾನ್ ಮಸ್ಕ್ ಈಗ ವಿಶ್ವದ ಮೊದಲ ಶ್ರೀಮಂತ ವ್ಯಕ್ತಿ ಎಂಬ ಪಟ್ಟದಿಂದ ಕೆಳಕ್ಕೆ ಇಳಿದಿದ್ದಾರೆ. ಟ್ವಿಟ್ಟರ್ ಕೂಡಾ ಸಾಕಷ್ಟು ನಷ್ಟವನ್ನು ಕಂಡಿದೆ. ಇದರಿಂದಾಗಿ ಟ್ವಿಟ್ಟರ್‌ನಲ್ಲಿ ಸಾವಿರಾರು ಮಂದಿಯನ್ನು ಕೇವಲ ಒಂದು ಇಮೇಲ್ ಮೂಲಕ ಕೆಲಸದಿಂದ ವಜಾ ಮಾಡಲಾಗಿದೆ. ಇವೆಲ್ಲವೂ ಕೂಡಾ ಎಲಾನ್ ಮಸ್ಕ್ ವಿರುದ್ಧ ಜನರ ಅಸಹನೆಗೆ ಕಾರಣವಾಗಿದೆ. ಈ ನಡುವೆ ಡೇಟಾ ಕಳ್ಳತನ ಕೂಡಾ ಆಗಿರುವುದು ಎಲಾನ್ ಮಸ್ಕ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications