U.K. ರಾಣಿ ಸೋಷಿಯಲ್ ಮೀಡಿಯಾ ಗುರುವಿಗೆ ಹುಡುಕಾಟ; ವಾರಕ್ಕೆ 94,000ಕ್ಕೂ ಹೆಚ್ಚು ಸಂಬಳ

ವಿಚಾರಗಳನ್ನು ಇನ್ನೊಬ್ಬರಿಗೆ ದಾಟಿಸಲು, ನಿಮಗೆ ಸಂವಹನ ಸಹಜವಾಗಿ ಮಾಡಲು ಸಾಧ್ಯವಾ? ಹೊಸ ಆಲೋಚನೆಗಳು ಬರುತ್ತವೆಯಾ? ಡಿಜಿಟಲ್ ಪ್ಲಾಟ್ ಫಾರ್ಮ್ಸ್ ಮತ್ತು ಚಾನೆಲ್ಸ್ ಗಳ ಬಗ್ಗೆ ತಾಂತ್ರಿಕ ಜ್ಞಾನ ಮತ್ತು ಕ್ರಿಯೇಟಿವ್ ಚಿಂತನೆಗಳು ನಿಮಗಿವೆಯಾ? ಹಾಗಿದ್ದರೆ ಕೈ ತುಂಬ ಸಂಬಳ ಬರುವ ಉದ್ಯೋಗವೊಂದು ನಿಮ್ಮ ಪಾಲಿಗಿದೆ. ಇದಕ್ಕಿಂತ ಇನ್ನೂ ಒಳ್ಳೆ ಕೆಲಸ ಎಂದು ಹುಡುಕುವ ಅಗತ್ಯ ಇಲ್ಲದೆ ಒಂದೊಳ್ಳೆ ಅವಕಾಶ ಇಲ್ಲಿದೆ.

ಯುನೈಟೆಡ್ ಕಿಂಗ್ ಡಮ್ ನ ರಾಣಿ ಸೋಷಿಯಲ್ ಮೀಡಿಯಾ ಗುರುವಿಗಾಗಿ ಹುಡುಕುತ್ತಿದ್ದಾರೆ. ಅವರ ಸೋಷಿಯಲ್ ಮೀಡಿಯಾದ ಎಲ್ಲ ಪ್ರೊಫೈಲ್ಸ್ ಗಳಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಿಸುವುದು ಜವಾಬ್ದಾರಿ. ಆಯ್ಕೆಯಾದ ಅಭ್ಯರ್ಥಿಗೆ ವರ್ಷಕ್ಕೆ 45ರಿಂದ 50,000 ಪೌಂಡ್ ವೇತನ ಸಿಗುತ್ತದೆ.

ಇದು ಸೋಮವಾರದಿಂದ ಶುಕ್ರವಾರದ ತನಕದ ಕೆಲಸ. ಸಂಬಳವು ವಾರಕ್ಕೆ 1,000ಕ್ಕಿಂತ ಹೆಚ್ಚು ಅಥವಾ ರು. 94,000ಕ್ಕೂ ಹೆಚ್ಚು ಬರುತ್ತದೆ. ಆಸಕ್ತ ಹಾಗೂ ಅರ್ಹ್ ಅಭ್ಯರ್ಥಿಗಳು ಡಿಸೆಂಬರ್ 24ರ ತನಕ ಅರ್ಜಿ ಹಾಕಿಕೊಳ್ಳಬಹುದು. ಸಂದರ್ಶನವು 2020ರ ಜನವರಿಯಲ್ಲಿ ನಡೆಯುತ್ತದೆ. "ನೀವು ಹಾಕುವ ಮಾಹಿತಿಯನ್ನು ಹತ್ತಾರು ಲಕ್ಷ ಮಂದಿ ನೋಡಲಿದ್ದಾರೆ" ಎಂಬ ಒಕ್ಕಣೆಯನ್ನು ನೀಡಲಾಗಿದೆ.

U.K. ರಾಣಿ ಸೋಷಿಯಲ್ ಮೀಡಿಯಾ ಗುರುವಿಗೆ ವಾರಕ್ಕೆ 94,000  ಸಂಬಳ

ರಾಣಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ "RoyalFamily @RoyalFamily"ಗೆ 4.1 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ 6.9 ಮಿಲಿಯನ್ ಮತ್ತು ಫೇಸ್ ಬುಕ್ ಗೆ 4.9 ಮಿಲಿಯನ್ ಫಾಲೋವರ್ಸ್ ಇದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+