ಅಮೆಜಾನ್ ನಿಂದ 'ಫುಡ್ ಡೆಲಿವರಿ' ಸೇವೆ ಶುರು; ಬೆಂಗಳೂರಿನಿಂದ ಆರಂಭ

ಯು.ಎಸ್. ಮೂಲದ ಇ ಕಾಮರ್ಸ್ ಕಂಪೆನಿ ಅಮೆಜಾನ್ ಭಾರತದಲ್ಲಿ ಆಹಾರ ಖಾದ್ಯಗಳನ್ನು ಡೆಲಿವರಿ ಮಾಡುವ ಸೇವೆ ಆರಂಭಿಸಿದೆ. ಇದಕ್ಕೆ "ಅಮೆಜಾನ್ ಫುಡ್" ಎಂದು ಹೆಸರಿಡಲಾಗಿದೆ. ಅಂದ ಹಾಗೆ ಅಮೆಜಾನ್ ಮೂಲತಃ ಆನ್ ಲೈನ್ ರೀಟೇಲ್ ವ್ಯವಹಾರ ಮಾಡುತ್ತದೆ. ಇದೀಗ ಹೊಸ ವ್ಯವಹಾರಕ್ಕೆ ಮುಂದಾಗಿದೆ. ಕೊರೊನಾ ವೈರಸ್ ವ್ಯಾಪಕ ಆದ ಹಿನ್ನೆಲೆಯಲ್ಲಿ ಅಮೆಜಾನ್ ಮುಖ್ಯ ಉದ್ಯಮ ಆನ್ ಲೈನ್ ವ್ಯವಹಾರಕ್ಕೆ ಹಿನ್ನಡೆಯಾಗಿದೆ.

ಈ ಫುಡ್ ಡೆಲಿವರಿ ಸೇವೆಯನ್ನು ಮೊದಲಿಗೆ ಬೆಂಗಳೂರಿನಲ್ಲಿ ಆರಂಭಿಸಿದೆ. ಬೆಂಗಳೂರಿನ ಆಯ್ದ ಭಾಗಗಳಲ್ಲಿ ಮಾತ್ರ ಸೇವೆ ಶುರು ಮಾಡಿದೆ. ಕೊರೊನಾ ಸಂದರ್ಭದಲ್ಲಿ ಜನರು ಮನೆಯಲ್ಲಿ ಸುರಕ್ಷಿತವಾಗಿ ಇರಲಿ ಎಂಬ ಕಾರಣಕ್ಕೆ ಅಮೆಜಾನ್ ಫುಡ್ ಆರಂಭಿಸಿರುವುದಾಗಿ ತಿಳಿಸಲಾಗಿದೆ.

ಬೆಂಗಳೂರಿನ ಸ್ಥಳೀಯ ರೆಸ್ಟೋರೆಂಟ್ ಗಳು, ಹೋಟೆಲ್ ಗಳಿಂದ ಆಹಾರ ಖಾದ್ಯಗಳನ್ನು ಮನೆಗಳಿಗೆ ತಲುಪಿಸಲಾಗುವುದು. ಈಗಾಗಲೇ ಫುಡ್ ಡೆಲಿವರಿ ಸೇವೆಯಲ್ಲಿ ಸ್ವಿಗ್ಗಿ ಮತ್ತು ಝೊಮ್ಯಾಟೋ ಖ್ಯಾತಿ ಪಡೆದಿವೆ. ಆದರೆ ಕೊರೊನಾ ಸಂಕಷ್ಟದ ಮಧ್ಯೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಆ ಕಾರಣಕ್ಕೆ ಎರಡರಿಂದಲೂ ಉದ್ಯೋಗಿಗಳನ್ನು ತೆಗೆದುಹಾಕುವ ಘೋಷಣೆ ಮಾಡಲಾಗಿದೆ.

ಅಮೆಜಾನ್ ನಿಂದ 'ಫುಡ್ ಡೆಲಿವರಿ' ಸೇವೆ ಶುರು; ಬೆಂಗಳೂರಿನಿಂದ ಆರಂಭ

ಇನ್ನು ಎರಡೂ ಕಂಪೆನಿಗಳೂ ಜಾರ್ಖಂಡ್ ನಲ್ಲಿ ಮನೆ ಬಾಗಿಲಿಗೆ ಮದ್ಯ ತಲುಪಿಸುವುದಕ್ಕೆ ಶುರು ಮಾಡಿವೆ. ಸ್ವಿಗ್ಗಿ, ಝೊಮ್ಯಾಟೋ ಎರಡೂ ಆನ್ ಲೈನ್ ಮದ್ಯ ಡೆಲಿವರಿಯನ್ನು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಶುರು ಮಾಡಿದ್ದು, ದೇಶದ ಇತರ ನಗರಗಳಿಗೆ ವಿಸ್ತರಣೆ ಮಾಡುವ ಗುರಿ ಹೊಂದಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+