ಅಮೆರಿಕದ ಶತಕೋಟ್ಯಧಿಪತಿಗಳ ಆಸ್ತಿ ಮೌಲ್ಯ 32,55,000 ಕೋಟಿ ಏರಿಕೆ

ಅಮೆರಿಕದ ಹತ್ತಾರು ಲಕ್ಷ ಮಂದಿ ಕೊರೊನಾ ಹೊಡೆತದಿಂದ ಕೆಲಸ ಕಳೆದುಕೊಂಡಿದ್ದಾರೆ. ಆದರೆ ದೇಶದ ಬಿಲಿಯನೇರ್ ಗಳ ಆಸ್ತಿ 43,400 ಕೋಟಿ ಅಮೆರಿಕನ್ ಡಾಲರ್ ನಷ್ಟು (ಭಾರತೀಯ ರುಪಾಯಿಗಳಲ್ಲಿ 32,55,000 ಕೋಟಿ) ಎರಡು ತಿಂಗಳಲ್ಲಿ ಏರಿಕೆ ಆಗಿದೆ. ಅದರಲ್ಲಿ ಅಮೆಜಾನ್ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಆಸ್ತಿ 34.6 ಬಿಲಿಯನ್ ಅಮೆರಿಕನ್ ಡಾಲರ್ ಜಾಸ್ತಿಯಾದರೆ, ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಆಸ್ತಿ 25 ಬಿಲಿಯನ್ ಡಾಲರ್ ಜಾಸ್ತಿ ಆಗಿದೆ.

ಮಾರ್ಚ್ 18ರಿಂದ ಮೇ 19ನೇ ತಾರೀಕಿನ ಮಧ್ಯೆ ಯು.ಎಸ್. ಬಿಲಿಯನೇರ್ ಗಳ ಆಸ್ತಿಯು 434 ಬಿಲಿಯನ್ ಡಾಲರ್ ಅಥವಾ 15 ಪರ್ಸೆಂಟ್ ಏರಿಕೆ ಆಗಿದೆ. ಅಂದ ಹಾಗೆ ಫೋರ್ಬ್ಸ್ ದತ್ತಾಂಶಗಳ ಆಧಾರದ ಮೇಲೆ ಗುಂಪುಗಳು ನಡೆಸಿರುವ ವಿಶ್ಲೇಷಣೆಯಲ್ಲಿ ಈ ಅಂಶ ತಿಳಿದುಬಂದಿದೆ.

ಹೆಚ್ಚು ಕಡಿಮೆ ಇದೇ ಅವಧಿಯಲ್ಲಿ ಅಮೆರಿಕದ 3.80 ಕೋಟಿ ಉದ್ಯೋಗಸ್ಥ ಅಮೆರಿಕನ್ನರು ಕೆಲಸ ಕಳೆದುಕೊಂಡಿದ್ದಾರೆ. 15 ಲಕ್ಷ ಮಂದಿ ಕೊರೊನಾದಿಂದ ಅನಾರೋಗ್ಯಪೀಡಿತರಾದರೆ, 90 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಶತಕೋಟ್ಯಧಿಪತಿಗಳ ಆಸ್ತಿ ಮೌಲ್ಯ 2.948 ಲಕ್ಷ ಕೋಟಿ ಡಾಲರ್ ನಿಂದ 3.382 ಲಕ್ಷ ಕೋಟಿ ಡಾಲರ್ ಗೆ ಏರಿಕೆ ಆಗಿದೆ.

ಅಮೆರಿಕದ ಶತಕೋಟ್ಯಧಿಪತಿಗಳ ಆಸ್ತಿ ಮೌಲ್ಯ 32,55,000 ಕೋಟಿ ಏರಿಕೆ

ಕಳೆದ ಎರಡು ತಿಂಗಳಲ್ಲಿ ಒಟ್ಟು ಆರು ನೂರು ಶತ ಕೋಟ್ಯಧಿಪತಿಗಳ ಪೈಕಿ ಟಾಪ್ ಐದು ಶ್ರೀಮಂತರ ಆಸ್ತಿಯಲ್ಲಿ 21 ಪರ್ಸೆಂಟ್ ಹೆಚ್ಚಳ ಆಗಿದೆ. ಜೆಫ್ ಬೆಜೋಸ್ ಹಾಗೂ ಝುಕರ್ ಬರ್ಗ್ ಇವರಿಬ್ಬರ ಆಸ್ತಿ ಮೌಲ್ಯವೇ ಹತ್ತಿರಹತ್ತಿರ 60 ಬಿಲಿಯನ್ ಅಮೆರಿಕನ್ ಡಾಲರ್ ಅಥವಾ 434 ಬಿಲಿಯನ್ ಅಮೆರಿಕನ್ ಡಾಲರ್ ಪೈಕಿ 14 ಪರ್ಸೆಂಟ್ ನಷ್ಟು ಇದೆ.

ಫೋರ್ಬ್ಸ್ ಪಟ್ಟಿ ಪ್ರಕಾರ, ಕಳೆದ ಮಾರ್ಚ್ ನಲ್ಲಿ 614 ಶತ ಕೋಟ್ಯಧಿಪತಿಗಳು ಇದ್ದರು. ಎರಡು ತಿಂಗಳ ನಂತರ ಶತಕೋಟ್ಯಧಿಪತಿಗಳ ಸಂಖ್ಯೆ 630ಕ್ಕೆ ಏರಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+