UAE ಮೂಲದ ಉತ್ಪಾದನಾ ಸಂಸ್ಥೆಯಾದ Ducab ತನ್ನ ಮೊದಲ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದೆ. ಇದು ನಮ್ಮ ಮೆಟ್ರೋ ಸೇರಿದಂತೆ ಹಲವು ಯೋಜನೆಗಳಲ್ಲಿ ಪಾಲುದಾರಿಕೆ ಹೊಂದಿದೆ. ಇದರಿಂದ ಬೆಂಗಳೂರಿಗೆ ಏನು ಲಾಭ? ತಿಳಿಯಿರಿ
ಬೆಂಗಳೂರು, ಫೆಬ್ರವರಿ 9: UAE ಮೂಲದ ಉತ್ಪಾದನಾ ಕಂಪನಿಯಾದ Ducab ತನ್ನ ಮೊದಲ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದೆ. ಭಾರತ ಮತ್ತು ಅರಬ್ ರಾಷ್ಟ್ರಗಳ ನಡುವೆ 2022 ರಲ್ಲಿ ಸಹಿ ಮಾಡಿದ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (ಸಿಇಪಿಎ) ಭಾಗವಾಗಿ ಬೆಂಗಳೂರು ಸೇರಿದಂತೆ ಹಲವಾರು ಸಾರಿಗೆ ಸಂಬಂಧಿತ ಯೋಜನೆಗಳಲ್ಲಿ ಕೆಲಸ ಮಾಡುವ ಬಗ್ಗೆ ಸಂಸ್ಥೆಯು ಗುರುವಾರ ತಿಳಿಸಿದೆ.
Ducab ಕಂಪನಿಯು ಸಿಇಪಿಎ ಅಡಿಯಲ್ಲಿ ಕಡಿಮೆ ತೆರಿಗೆಗಳ ಅವಕಾಶವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಸುಂಕಗಳು ಐದು ವರ್ಷಗಳಲ್ಲಿ ಶೂನ್ಯಕ್ಕೆ ಬರುತ್ತವೆ. ಪ್ರತಿ ವರ್ಷ 20 ಪ್ರತಿಶತವನ್ನು ಕಡಿಮೆ ಮಾಡುತ್ತವೆ. 'ಒಪ್ಪಂದವು ಎರಡು ದೇಶಗಳ ನಡುವಿನ ತೈಲೇತರ ವ್ಯಾಪಾರವನ್ನು ಐದು ವರ್ಷಗಳಲ್ಲಿ $ 60 ಬಿಲಿಯನ್‌ನಿಂದ $ 100 ಬಿಲಿಯನ್‌ಗೆ ಹೆಚ್ಚಿಸುವ ನಿರೀಕ್ಷೆಯಿದೆ. ಇದು ಹೂಡಿಕೆಯ ಹೆಚ್ಚುವರಿ ಮಾರ್ಗಗಳನ್ನು ತೆರೆಯುತ್ತದೆ' ಎಂದು Ducab ಕಂಪನಿಯ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನಲ್ಲಿ ಮಾತನಾಡಿದ Ducab ಗ್ರೂಪ್ ಸಿಇಒ ಮೊಹಮ್ಮದ್ ಅಲ್ಮುತಾವಾ, 'ಸಂಸ್ಥೆಯು BMRCL (ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್) ಮತ್ತು ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದೆ. ಇದರಲ್ಲಿ ನಾವು ವಿದ್ಯುತ್ ಬಳಸುವಿಕೆ, ವಿದ್ಯುತ್‌ನ ಕಾರ್ಯಕ್ಷಮತೆ ಮತ್ತು ಹೆಚ್ಚುವರಿ ಹೈ ವೋಲ್ಟೇಜ್ ಕೇಬಲ್‌ಗಳನ್ನು ತರಲು ಬಯಸುತ್ತೇವೆ. ಸುಸ್ಥಿರ ಇಂಧನ ಪರಿಹಾರಗಳನ್ನು ಒದಗಿಸಲು ಕಾರ್ಯಗತರಾಗುತ್ತೇವೆ. ಭಾರತೀಯ ಮಾರುಕಟ್ಟೆಯೊಂದಿಗೆ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ನಾವು ಭಾರತದಲ್ಲಿ ಚಲನಶೀಲತೆ ಮತ್ತು ಸಾರಿಗೆ ಜಾಗದಲ್ಲಿ ವಿವಿಧ ಡೆವಲಪರ್‌ಗಳು ಮತ್ತು ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ' ಎಂದು ಹೇಳಿದೆ.

India ಕಾರ್ಯಾಚರಣೆಯ ಮುಖ್ಯಸ್ಥರಾಗಿರುವ Ducab ವಕ್ತಾರರು, 'ತಡೆರಹಿತ ವಿದ್ಯುತ್ ಪೂರೈಕೆಗಾಗಿ ನಮ್ಮ ಮೆಟ್ರೋಗೆ ಸಬ್‌ಸ್ಟೇಷನ್‌ಗಳನ್ನು ಒದಗಿಸಲು ಸಂಸ್ಥೆಯು ನೋಡುತ್ತಿದೆ' ಎಂದು ಹೇಳಿದರು. ಪ್ರಸ್ತುತ ಬೆಂಗಳೂರು ಮೆಟ್ರೋಗೆ ಸಬ್‌ಸ್ಟೇಷನ್‌ನಿಂದ 132KV-33KV ವಿದ್ಯುತ್ ಪೂರೈಕೆಯ ಅಗತ್ಯವಿದೆ ಮತ್ತು ಅದನ್ನು ನಿರ್ಮಿಸಲು ನಾವು ಗುತ್ತಿಗೆದಾರರಿಗೆ ಪ್ರಸ್ತಾಪಿಸಿದ್ದೇವೆ. ಹೆಚ್ಚುವರಿಯಾಗಿ, ನಾವು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪನಗರ ರೈಲ್ವೆ ಯೋಜನೆಗಳು ಮತ್ತು ಟರ್ಮಿನಲ್ 2 ಕಾರ್ಯಾಚರಣೆಗಳಿಗೆ ಸುಸ್ಥಿರ ಇಂಧನ ಪರಿಹಾರಗಳನ್ನು ನೀಡಲು ಬಯಸುತ್ತೇವೆ ಎಂದು ಅಧಿಕಾರಿ ಹೇಳಿದರು.
Ducab ಸಂಸ್ಥೆಯು ಬೆಂಗಳೂರಿನ ಟ್ಯಾಲೆಂಟ್ ಪೂಲ್ ಅನ್ನು ಬಳಸಿಕೊಳ್ಳಿತ್ತದೆ. ಮತ್ತು ಅದರ ಸಾಗರೋತ್ತರ ಯೋಜನೆಗಳಿಗೆ ನಗರದಿಂದ ಟೆಕ್ಕಿಗಳನ್ನು ನೇಮಿಸಿಕೊಳ್ಳುತ್ತದೆ. ದೇಶದಲ್ಲಿ ಸಂಸ್ಥೆಯ ಇತರ ಚಲನಶೀಲತೆ ಮತ್ತು ಸಾರಿಗೆ ಯೋಜನೆಗಳು ದೆಹಲಿ, ಮುಂಬೈ, ಕಾನ್ಪುರ, ಲಕ್ನೋ ಮತ್ತು ಆಗ್ರಾ ಇತರ ಸ್ಥಳಗಳಲ್ಲಿವೆ. ಸಂಸ್ಥೆಯು ಇದುವರೆಗೆ ಭಾರತದಲ್ಲಿ 2,000 ಕೋಟಿ ರೂಪಾಯಿ ಮೌಲ್ಯದ ವ್ಯಾಪಾರ ವಹಿವಾಟು ನಡೆಸಿದೆ.
More From GoodReturns

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Rapido Ownly: ರ್ಯಾಪಿಡೋದಿಂದ ಹೊಸ ಫುಡ್ ಡೆಲಿವರಿ ಆಪ್ ಲಾಂಚ್! ಏನಿದರ ವಿಶೇಷತೆ?

Bengaluru Airport: ಇರಾನ್-ಇಸ್ರೇಲ್ ಯುದ್ಧ ಪರಿಣಾಮ ಬೆಂಗಳೂರು ಏರ್ಪೋರ್ಟ್ನಲ್ಲಿ 37 ವಿಮಾನಗಳು ರದ್ದು!

Hebbal Tunnel Project: ಹೆಬ್ಬಾಳ 6 ಪಥದ ಸುರಂಗ ರಸ್ತೆಗೆ ಟೆಂಡರ್... 4 ಪ್ರಮುಖ ಕಂಪನಿಗಳಲ್ಲಿ ಬಿಡ್ಡಿಂಗ್ ಸ್ಪರ್ಧೆ!

Bengaluru Airport: ಬೆಂಗಳೂರು ಏರ್ಪೋರ್ಟ್ಗೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಭೀತಿ! ಹಲವು ವಿಮಾನ ಹಾರಾಟ ರದ್ದು



Click it and Unblock the Notifications