ಉಬರ್ ನಿಂದ ಆಟೋ ಬಾಡಿಗೆ ಸೇವೆಯನ್ನು ವಿಸ್ತರಿಸುತ್ತಿದೆ. ಇನ್ನು ಮುಂದೆ ಬಳಕೆದಾರರು ಹಲವು ಗಂಟೆಯ ಲೆಕ್ಕದಲ್ಲಿ ಬಾಡಿಗೆಗೆ ಪಡೆಯಬಹುದು ಮತ್ತು ವಿವಿಧೆಡೆ ನಿಲುಗಡೆ ಮಾಡಬಹುದು. ಬೆಂಗಳೂರು, ದೆಹಲಿ- ಎನ್ ಸಿಆರ್, ಮುಂಬೈ, ಹೈದರಾಬಾದ್, ಚೆನ್ನೈ ಹಾಗೂ ಪುಣೆಯಲ್ಲಿ ಉಬರ್ ನಿಂದ ಈ ಸೇವೆಯನ್ನು ಆರಂಭಿಸಲಾಗಿದೆ.
ಒಂದು ಗಂಟೆಗೆ, 10 ಕಿ.ಮೀ. ವ್ಯಾಪ್ತಿಗೆ 169 ರುಪಾಯಿ ದರದೊಂದಿಗೆ ಈ ಸೇವೆ ಆರಂಭವಾಗುತ್ತದೆ. ಈ ರೀತಿ 8 ಗಂಟೆ ಅವಧಿ ತನಕ ಬುಕ್ ಮಾಡಬಹುದು. ನಗರಗಳು ಮತ್ತೆ ಆರಂಭವಾಗುತ್ತಿದ್ದಂತೆ ಬಳಕೆದಾರರ ಅಗತ್ಯಗಳು ಗೊತ್ತಾಗುತ್ತಿದೆ. ತಮ್ಮ ಅಗತ್ಯಗಳಿಗೆ ತಕ್ಕಂತೆ ಗಂಟೆಗಳ ಲೆಕ್ಕದಲ್ಲಿ ಬುಕ್ ಮಾಡಬಹುದು ಎಂದು ಉಬರ್ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ತಿಂಗಳು ಬಜಾಜ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ದೇಶದಾದ್ಯಂತ ಒಂದು ಲಕ್ಷ ಆಟೋಗಳಿಗೆ ಸುರಕ್ಷತಾ ಸ್ಕ್ರೀನ್ ಅಳವಡಿಕೆಗೆ ಮಾತುಕತೆ ಆಗಿದೆ. ಬೆಂಗಳೂರು, ದೆಹಲಿ- ಎನ್ ಸಿಆರ್, ಮುಂಬೈ, ಹೈದರಾಬಾದ್, ಚೆನ್ನೈ ಹಾಗೂ ಪುಣೆ ಸೇರಿದಂತೆ ಇಪ್ಪತ್ತು ನಗರಗಳಲ್ಲಿ ಒಂದು ಲಕ್ಷ ಆಟೋ ಚಾಲಕರಿಗೆ ಸುರಕ್ಷತಾ ಕಿಟ್ ಗಳನ್ನು ವಿತರಿಸಲಾಗುತ್ತಿದೆ.

ಇನ್ನು ಉಬರ್ ನಿಂದ ಸಮಗ್ರವಾಗಿ ಸುರಕ್ಷತಾ ಕ್ರಮಗಳನ್ನು ಪರಿಚಯಿಸಲಾಗುತ್ತಿದೆ. ಗೋ ಆನ್ ಲೈನ್ ಚೆಕ್ ಲಿಸ್ಟ್, ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಕಡ್ಡಾಯವಾಗಿ ಮಾಸ್ಕ್ ನಿಯಮ, ಪ್ರಯಾಣ ಆರಂಭಕ್ಕೂ ಮಾಸ್ಕ್ ಹಾಕಿದ್ದಾರೋ ಇಲ್ಲವೋ ಎಂದು ಡ್ರೈವರ್ ಜತೆ ಸೆಲ್ಫಿ ತೆಗೆಯಬೇಕು ಎಂಬಿತ್ಯಾದಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.


Click it and Unblock the Notifications