Zoom ಆ್ಯಪ್ ಮೂಲಕ 3,700 ಉದ್ಯೋಗಿಗಳನ್ನ ಕೆಲಸದಿಂದ ವಜಾಗೊಳಿಸಿದ ಉಬರ್

ಕೊರೊನಾವೈರಸ್ ವಿಶ್ವದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳುತ್ತಿರುವ ಬೆನ್ನಲ್ಲೆ ಕೋಟ್ಯಾಂತರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದೇ ಸಾಲಿಗೀಗ ಸುಮಾರು 3,700 ಉಬರ್ ಉದ್ಯೋಗಿಗಳು ಸೇರಿದ್ದಾರೆ. ಆಶ್ಚರ್ಯ ಏನಪ್ಪಾ ಅಂದರೆ ಈ ಉದ್ಯೋಗಿಗಳನ್ನು Zoom ಆ್ಯಪ್ ಮೂಲಕ ಕೆಲಸದಿಂದ ವಜಾಗೊಳಿಸಲಾಗಿದೆ.

ವಿಶ್ವದ ಅನೇಕ ಕಂಪನಿಗಳು ಹಣಕಾಸಿನ ಮುಗ್ಗಟ್ಟಿನಿಂದಾಗಿ ದಿವಾಳಿಯೆಂದು ಘೋಷಿಸುತ್ತಿವೆ. ಇದರ ಜೊತೆಗೆ ಉಬರ್ ಕೂಡ ಹಣಕಾಸಿನ ತೊಂದರೆಯಿಂದ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಇದಕ್ಕಾಗಿ ಈ ಕಂಪನಿಯು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡಿದೆ.

Zoom ಆ್ಯಪ್ ಮೂಲಕ 3,700 ಉದ್ಯೋಗಿಗಳನ್ನ ಕೆಲಸದಿಂದ ವಜಾಗೊಳಿಸಿದ ಉಬರ್

ವಜಾಗೊಳಿಸುವಿಕೆಯ ಬಗ್ಗೆ ನೌಕರರಿಗೆ ತಿಳಿಸಲು ಕಳೆದ ವಾರ ಅನೇಕ ಸಭೆಗಳನ್ನು ನಡೆಸಲು ಉಬರ್ ಜನಪ್ರಿಯ ಟೆಲಿಕಾನ್ ಕಾನ್ಫರೆನ್ಸ್ ಸಾಫ್ಟ್‌ವೇರ್ ಅನ್ನು ಬಳಸಿದೆ. ಯು.ಕೆ ಪತ್ರಿಕೆ ಡೈಲಿ ಮೇಲ್ ಮೊದಲು ಸುದ್ದಿಯನ್ನು ವರದಿ ಮಾಡಿದ್ದು ಈ ಕುರಿತು ಕರೆಗಳ ವೀಡಿಯೊವನ್ನು ಪಡೆದುಕೊಂಡಿದೆ. ಆ ಮೂಲಕ Zoom ಆ್ಯಪ್ ಮೂಲಕ ಉಬರ್‌ನ 3,700 ಉದ್ಯೋಗಿಗಳು ಕೆಲಸ ಕಳೆದುಕೊಂಡಿರುವ ಮಾಹಿತಿ ಹೊರಬಿದ್ದಿದೆ.

ಇತ್ತೀಚೆಗಷ್ಟೇ ಉಬರ್ ಯುಎಸ್‌ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ)ಗೆ ಸಲ್ಲಿಸಿದ ನಿಯಂತ್ರಕ ಫೈಲಿಂಗ್‌ನಲ್ಲಿ ಆರ್ಥಿಕ ಸವಾಲುಗಳು ಮತ್ತು ಕೊರೊನಾವೈರಸ್‌ನಿಂದಾಗಿ ಉಂಟಾಗಿರುವ ಅನಿಶ್ಚಿತತೆ ಹಾಗೂ ವ್ಯವಹಾರದ ಮೇಲೆ ಅದರ ಪ್ರಭಾವದಿಂದಾಗಿ ಕಂಪನಿಯು ತನ್ನ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಯೋಜಿಸಿದೆ ಎಂದು ತಿಳಿಸಿತ್ತು. ಜೊತೆಗೆ ಒಟ್ಟು 3,700 ಪೂರ್ಣ ಸಮಯದ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿಕೆ ನೀಡಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+