ಕೋವಿಡ್-19 ಬಿಕ್ಕಟ್ಟಿನಿಂದ ಹಾನಿಗೊಳಗಾಗಿರುವ ಆರ್ಥಿಕತೆಯನ್ನು ಬೆಂಬಲಿಸಲು ಭಾರತವು ಹೆಚ್ಚಿನ ನೋಟುಗಳನ್ನು ಮುದ್ರಿಸಬೇಕಿದೆ ಎಂದು ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಮುಖ್ಯಸ್ಥ ಉದಯ್ ಕೋಟಕ್ ಹೇಳಿದ್ದಾರೆ.
ಕೋಟಕ್ ಮಹೀಂದ್ರಾ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಉದಯ್ ಕೋಟಕ್ ಎನ್‌ಡಿಟಿವಿಗೆ ತಿಳಿಸಿದ ಪ್ರಕಾರ, ಈ ವಿಸ್ತರಣೆಯನ್ನು ಎರಡು ಭಾಗಗಳಲ್ಲಿ ಮಾಡಬೇಕಾಗಿದೆ. ಮೊದಲನೆಯದು ಸಂಪನ್ಮೂಲಗಳ ವಿಷಯದಲ್ಲಿ ಅಂಚಿನಲ್ಲಿರುವವರಿಗೆ ಮತ್ತು ಇನ್ನೊಂದು ಸಾಂಕ್ರಾಮಿಕ ರೋಗದಿಂದ ಪೀಡಿತ ಕ್ಷೇತ್ರಗಳ ಉದ್ಯೋಗಗಳ ರಕ್ಷಣೆಗಾಗಿ ಮುಂದಾಗಬೇಕಿದೆ.
ಈಗ ಆಗದಿದ್ರೆ, ಮತ್ತೆ ಯಾವಾಗ?
''ನನ್ನ ದೃಷ್ಟಿಯಲ್ಲಿ, ಸರ್ಕಾರದ ಬ್ಯಾಲೆನ್ಸ್ ಶೀಟ್ ಅನ್ನು ವಿಸ್ತರಿಸುವ ಸಮಯ ಇದಾಗಿದೆ. ಆರ್‌ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಯಿಂದ ಸರಿಯಾಗಿ ಬೆಂಬಲಿತವಾಗಿ ವಿತ್ತೀಯ ವಿಸ್ತರಣೆ ಅಥವಾ ಹಣದ ಮುದ್ರಣಕ್ಕಾಗಿ ಕೆಲಸಗಳನ್ನು ಮಾಡುವ ಸಮಯ ಬಂದಿದೆ. ಈಗ ಇಲ್ಲದಿದ್ದರೆ, ಮತ್ತೆ ಯಾವಾಗ?'' ಎಂದು ಉದಯ್ ಕೋಟಕ್ ಹೇಳಿದ್ದಾರೆ.
ಬಡವರಿಗೆ ಹಣವನ್ನು ವರ್ಗಾಯಿಸಿ
ಎನ್‌ಡಿಟಿವಿ ವರದಿಯ ಪ್ರಕಾರ, ಬಡವರಿಗೆ ನೇರ ಹಣ ವರ್ಗಾವಣೆ ಮಾಡಬೇಕು ಎಂದು ಕೋಟಕ್ ಹೇಳಿದ್ದಾರೆ. ಈ ಕುರಿತು ಸರ್ಕಾರದ ಖರ್ಚು ಜಿಡಿಪಿಯ ಶೇಕಡಾ 1 ರಷ್ಟು ಅಥವಾ 1ರಿಂದ 2 ಲಕ್ಷ ಕೋಟಿ ರೂಪಾಯಿಗಳಷ್ಟು ಇರಬೇಕು ಎಂದು ಹೇಳಿದರು. ಇದು ಕಡಿಮೆ ಸ್ತರಗಳಲ್ಲಿ ಬಳಕೆಯನ್ನು ಹೆಚ್ಚಿಸುತ್ತದೆ ಎಂದು ಕೋಟಕ್ ಹೇಳಿದರು. ಜೊತೆಗೆ ಬಡ ವ್ಯಕ್ತಿಗೆ ವೈದ್ಯಕೀಯ ಸೌಲಭ್ಯಗಳನ್ನು ನೀಡುವ ಅವಶ್ಯಕತೆಯಿದೆ ಎಂದು ಅವರು ಕರೆ ನೀಡಿದರು.
2 ರೀತಿಯ ವ್ಯವಹಾರ ಪರಿಸ್ಥಿತಿಗಳಿವೆ
ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಗದ ವ್ಯವಹಾರಗಳನ್ನು ರಚಿಸಲಾಗಿದೆ ಎಂದು ಉದಯ್ ಕೋಟಕ್ ಅಭಿಪ್ರಾಯಪಟ್ಟಿದ್ದಾರೆ. ಮೊದಲನೆಯವರು ಕೋವಿಡ್‌ನಿಂದಾಗಿ ತಾತ್ಕಾಲಿಕ ಹಿನ್ನಡೆ ಅನುಭವಿಸಿದವರು ಮತ್ತು ಸಾಂಕ್ರಾಮಿಕ ರೋಗವನ್ನು ತಡೆದುಕೊಳ್ಳುವ ಸಾಮರ್ಥ್ಯವುಳ್ಳವರು. ಮತ್ತೆ ಇನ್ನೊಂದು ವರ್ಗವು ಕೋವಿಡ್‌ನಿಂದಾಗಿ ಇನ್ಮುಂದೆ ಕಾರ್ಯಸಾಧ್ಯವಾಗದಷ್ಟು ಮಟ್ಟಿಗೆ ಬದಲಾಗಿರುವವರು.
ಮೊದಲ ವರ್ಗವನ್ನು ಬೆಂಬಲಿಸಲು ನೀವು (ಸರ್ಕಾರ) ಎಲ್ಲವನ್ನೂ ಮಾಡುತ್ತೀರಿ ಎಂಬ ವಿಶ್ವಾಸವಿದೆ. ಆದರೆ ಬಿಕ್ಕಟ್ಟಿನಲ್ಲಿ ಸಿಲುಕಿರುವ ಎರಡನೇ ವರ್ಗಕ್ಕೆ ಇದು ಹೆಚ್ಚು ಕಷ್ಟಸಾಧ್ಯ ಎಂದಿದ್ದಾರೆ.
ಯೋಜನೆಗಳ ವಿಸ್ತರಣೆ
ಕೋಟಕ್ ಪ್ರಕಾರ, ಕಳೆದ ವರ್ಷ ಒತ್ತಡಕ್ಕೊಳಗಾದ ಆರ್ಥಿಕ ವಲಯಗಳಿಗೆ ಸರ್ಕಾರವು ಅತ್ಯಂತ ಯಶಸ್ವಿ ಸಾಲ ಯೋಜನೆಯನ್ನು ಬ್ಯಾಂಕುಗಳ ಮೂಲಕ ಘೋಷಿಸಿತು. ಈ ಯೋಜನೆಯನ್ನು ಪ್ರಸ್ತುತ 3 ಲಕ್ಷ ಕೋಟಿಯಿಂದ 5 ಲಕ್ಷ ಕೋಟಿಗೆ ವಿಸ್ತರಿಸಬೇಕು ಮತ್ತು ಹೆಚ್ಚಿನ ಕ್ಷೇತ್ರಗಳನ್ನು ಅದರಲ್ಲಿ ಸೇರಿಸಬೇಕು ಎಂದು ನಾನು ಬಯಸುತ್ತೇನೆ ಎಂದಿದ್ದಾರೆ. ಇದರಿಂದಾಗಿ ಆರ್ಥಿಕತೆಗೆ ತ್ವರಿತವಾಗಿ ಗರಿಷ್ಠ ನೆರವು ನೀಡಲು ಸಾಧ್ಯ ಎಂಬುದು ಉದಯ್ ಕೋಟಕ್ ಅಭಿಪ್ರಾಯವಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್‌ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್‌ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್‌ಬಿಐ ನಿರ್ಧಾರದ ಅಸಲಿ ಸತ್ಯ

ಆರ್‌ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications